/newsfirstlive-kannada/media/media_files/2025/09/16/engineering-students-2025-09-16-13-13-35.jpg)
ಉದ್ಯೋಗ ಸಿಗದೇ ಕಂಗಾಲಾದ ಇಂಜಿನಿಯರಿಂಗ್ ವಿದ್ಯಾರ್ಥಿಗಳು!
ರಾಜ್ಯಾದ್ಯಂತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅದ್ರಲ್ಲೂ ವಿಶೇಷವಾಗಿ 2024-25ನೇ ಸಾಲಿನ ಪದವಿ ಬ್ಯಾಚ್​​ಗಳಿಗೆ ಉದ್ಯೋಗಾವಕಾಶಗಳು ತೀವ್ರವಾಗಿ ಕುಸಿದಿದೆ. ಹಾಗಾಗಿ 2025-26ನೇ ಸಾಲಿನ ಪದವಿ ಬ್ಯಾಚ್ ಆರಂಭ, ನಿಧಾನಗತಿಯಲ್ಲಿ ಸಾಗಿದೆ ಅನ್ನೋ ಶಾಕಿಂಗ್​ ಮಾಹಿತಿ ಹೊರಬಿದ್ದಿದೆ.
ದೊಡ್ಡ ದೊಡ್ಡ ಸಂಸ್ಥೆಗಳಲ್ಲೇ ನೇಮಕಾತಿಯಲ್ಲಿ ಗಮನಾರ್ಹ ಕುಸಿತ ಕಂಡು ಬಂದಿದೆ. ಇದು ಕಂಪ್ಯೂಟರ್​ ಸೈನ್ಸ್​ ಥರದ ಬೇಡಿಕೆ ಇರೋ ವಿಭಾಗಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಹಾಗಾಗಿ ಉದ್ಯೋಗ ಅವಕಾಶಗಳು ಕಡಿಮೆ ಆಗಿವೆ.
ಈ ಬಗ್ಗೆ ತಜ್ಞರು ಕೂಡ ಮಾತಾಡಿದ್ದು, ಕಂಪನಿಗಳು ಕ್ಯಾಂಪಸ್‌ಗಳಿಗೆ ಭೇಟಿ ನೀಡ್ತಾ ಇವೆ. ಆದರೆ ನೇಮಕಾತಿ ಮಾಡಿಕೊಳ್ತಿರೋದು ಮಾತ್ರ ಬಹಳ ಕಡಿಮೆ. 2024ರಲ್ಲಿ ಕೇವಲ 40% ರಷ್ಟು ವಿದ್ಯಾರ್ಥಿಗಳು ಮಾತ್ರ ಉದ್ಯೋಗ ಪಡೆದಿದ್ದರು. 2025ರ ಬ್ಯಾಚ್‌ನಲ್ಲೂ ಇದೇ ಪರಿಸ್ಥಿತಿ ಇದೆ ಎಂದಿದ್ದಾರೆ.
ಈ ನಡುವೆ ಈ ವರ್ಷದಲ್ಲಿ ನೇಮಕಾತಿಗೆ ಬರೋ ಕಂಪನಿಗಳ ಸಂಖ್ಯೆಯೇ ಕಡಿಮೆಯಾಗಿದ್ದು, ಪ್ಲೇಸ್‌ಮೆಂಟ್ ಕಷ್ಟಕರವಾಗಿದೆ. ಕಂಪ್ಯೂಟರ್ ಸಂಬಂಧಿತ ವಿಭಾಗಗಳಲ್ಲಿಯೂ ಸ್ಯಾಚುರೇಶನ್ ಉದ್ಯೋಗಗಳನ್ನು ಹುಡುಕೋದು ಕಷ್ಟಕರವಾಗಿಸುತ್ತಿದೆ. ಕಂಪ್ಯೂಟರ್ ಸೈನ್ಸ್ ಪದವಿ ಪಡೆದರೆ ಉದ್ಯೋಗ ಖಚಿತ ಎನ್ನುವ ಊಹೆಗಳು ಕೂಡ ಕರಗುತ್ತಿದೆ. ಐಟಿ ವಲಯದಲ್ಲಿ ನೇಮಕಾತಿ ಮಾದರಿಗಳಲ್ಲಿನ ಬದಲಾವಣೆ ಇದಕ್ಕೆ ಕಾರಣ ಅಂತ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
/filters:format(webp)/newsfirstlive-kannada/media/media_files/2025/08/30/government-engineering-colleges04-2025-08-30-11-59-13.jpg)
ದೊಡ್ಡ ಐಟಿ ಸಂಸ್ಥೆಗಳು ಕ್ಯಾಂಪಸ್ ಪ್ರವೇಶವನ್ನು ಕಡಿಮೆ ಮಾಡುತ್ತಿವೆ. ಕೋಡಿಂಗ್ ಸ್ಪರ್ಧೆಗಳು ಮತ್ತು ಆನ್‌ಲೈನ್ ಮೌಲ್ಯಮಾಪನಗಳತ್ತ ವಾಲುತ್ತಿವೆ. AI (ಕೃತಕ ಬುದ್ಧಿಮತ್ತೆ) ಮತ್ತು ಡೇಟಾ ಸೈನ್ಸ್‌ನ ಸಣ್ಣ ಸಂಸ್ಥೆಗಳು ಈಗ ಬೇಡಿಕೆಯನ್ನು ಹೆಚ್ಚಿಸುತ್ತಿವೆ. ಹಾಗಾಗಿ ಕಂಪ್ಯೂಟರ್ ಸೈನ್ಸ್​ಗೂ ಬೆಲೆ ಇಲ್ಲ ಎನ್ನುವ ಮಾತುಗಳು ಹರಿದಾಡ್ತಿವೆ.
ಇದರ ಪರಿಣಾಮ ಅನೇಕ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ. ಕಡಿಮೆ ಸಂಬಳದ ಕಾಲ್ ಸೆಂಟರ್ ಹುದ್ದೆಗಳನ್ನು ಪಡೆಯುತ್ತಿದ್ದಾರೆ. ಕಾಲೇಜುಗಳು ಹೇಳುತ್ತಿರುವುದಕ್ಕೂ ವಾಸ್ತವವಾಗಿ ಏನು ನಡೆಯುತ್ತಿದೆ ಅನ್ನೋದಕ್ಕೂ ಬಹಳ ಅಂತರವಿದೆ. ಈ ಪ್ರವೃತ್ತಿ ಎಲ್ಲಾ ವಿದ್ಯಾರ್ಥಿಗಳ ಮೇಲೂ ಪರಿಣಾಮ ಬೀರುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us