/newsfirstlive-kannada/media/media_files/2025/09/27/ksrtc-bus-pooje-charege-2025-09-27-16-17-02.jpg)
ಆಯುಧ ಪೂಜೆಯಂದು ಬಸ್ ಪೂಜೆಗೆ 150 ರೂ. ಬಿಡುಗಡೆ!
ರಾಜ್ಯದಲ್ಲಿ ಆಯುಧ ಪೂಜೆ ಹತ್ತಿರ ಬಂದಿದೆ. ಎಲ್ಲರೂ ತಮ್ಮ ಆಯುಧಗಳು, ವಾಹನಗಳಿಗೆ ಆಯುಧ ಪೂಜೆಯ ದಿನ ಪೂಜೆ ನೆರವೇರಿಸುತ್ತಾರೆ. ರಾಜ್ಯದಲ್ಲಿರುವ ಸಾರಿಗೆ ಇಲಾಖೆಯು ಕೆಎಸ್‌ಆರ್‌ಟಿಸಿ ಬಸ್ ಗಳ ಪೂಜೆಗೆ ಡ್ರೈವರ್, ಕಂಡಕ್ಟರ್ ಗಳಿಗೆ ಪ್ರತಿ ವರ್ಷ ಆಯುಧ ಪೂಜೆಯಂದು ಬಸ್ ಗಳ ಪೂಜೆಗಾಗಿ ಹಣ ನೀಡುತ್ತೆ. ಆದರೇ, ಈ ವರ್ಷವೂ ಬಸ್ ಗಳ ಪೂಜೆಗಾಗಿ ಜುಜುಬಿ ಹಣ ನೀಡಿದೆ. ಸಾರಿಗೆ ಇಲಾಖೆಯು ನೀಡಿರುವ ಹಣದಲ್ಲಿ ಬಸ್ ಗಳ ಪೂಜೆ ಮಾಡಲು ಸಾಧ್ಯವಿಲ್ಲ ಎಂಬುದು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಇಲಾಖೆಯ ಬಸ್ ಚಾಲಕರು, ನಿರ್ವಾಹಕರ ನೋವು. ಈ ಬಗ್ಗೆ ಆಯುಧ ಪೂಜೆಯಂದು ಕೆಎಸ್‌ಆರ್‌ಟಿಸಿ ಬಸ್ ಪೂಜೆಗಾಗಿ ಸರ್ಕಾರವು ಪ್ರತಿ ಬಸ್‌ಗೆ 150 ರೂಪಾಯಿ ನೀಡಿದೆ. ಈ 150 ರೂಪಾಯಿ ಹಣದಲ್ಲಿ ಬಸ್‌ಗೆ ಹೂವಿನ ಹಾರ ಹಾಕಿ, ಪೂಜೆ ಮಾಡುವುದು ಹೇಗೆ ಎಂಬ ಪ್ರಶ್ನೆ ಬಸ್ ಚಾಲಕರು ಮತ್ತು ನಿರ್ವಾಹಕರದ್ದು. ಒಂದು ಮಾರು ಸೇವಂತಿಗೆ ಹೂವಿನ ರೇಟ್ 150 ರೂಪಾಯಿ ದಾಟಿರುತ್ತೆ. ಆಯುಧ ಪೂಜೆ ಹಬ್ಬದ ದಿನ ಒಂದು ಮಾರು ಸೇವಂತಿಗೆ ಹೂವಿನ ರೇಟ್ 200 ರೂಪಾಯಿಯಿಂದ 300 ರೂಪಾಯಿ ಇರುತ್ತೆ. ಇಂಥ ಸ್ಥಿತಿಯಲ್ಲಿ ಬರೀ 150 ರೂಪಾಯಿಯಲ್ಲಿ ಒಂದು ಬಸ್ ಪೂಜೆಯನ್ನು ಹೇಗೆ ಮಾಡೋದು ಎಂಬ ಪ್ರಶ್ನೆ ಕೆಎಸ್‌ಆರ್‌ಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರದ್ದಾಗಿದೆ.
ಆಯುಧ ಪೂಜೆಗೆ ಹಣ ನೀಡದೇ ಇರುವಷ್ಟು ಸಾರಿಗೆ ಇಲಾಖೆ ಬಡವಾಗಿದೆ. ಸಾರಿಗೆ ಸಚಿವರನ್ನ ನಾಲ್ಕು ಸಾರಿಗೆ ನಿಗಮಗಳ ನೌಕರರು ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.
ವಿಭಾಗೀಯ ಕಾರ್ಯಾಗಾರಕ್ಕೆ ಸಾರಿಗೆ ಇಲಾಖೆಯು 2000 ರೂ ಬಿಡುಗಡೆ ಮಾಡಿದೆ. ಪ್ರಾದೇಶಿಕ ಕಾರ್ಯಾಗಾರಕ್ಕೆ 4000 ರೂಪಾಯಿ ಬಿಡುಗಡೆ ಮಾಡಿದೆ. ದುಬಾರಿ ದುನಿಯಾದಲ್ಲಿ ಇಷ್ಟು ಕಂಜೂಸು ಯಾಕೆ ಅಂತ ಪ್ರಶ್ನೆ ಸಾರಿಗೆ ಇಲಾಖೆಯ ನೌಕರರದ್ದಾಗಿದೆ. ಶಕ್ತಿ ಯೋಜನೆ ಬಂದ ಮೇಲೆ ಸಾರಿಗೆ ನಿಗಮ ಸಂಸ್ಥೆಗಳಿಗೆ ಸಾಕಷ್ಟು ಆದಾಯ ಬರುತ್ತಿದೆ. ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಹೆಚ್ಚಿನ ಜನರು ಓಡಾಟ ಮಾಡ್ತಿದ್ದಾರೆ. ಆದರೂ 150 ರೂಪಾಯಿಯನ್ನು ಆಯುಧ ಪೂಜೆ ಮತ್ತು ದಸರಾ ಹಬ್ಬಕ್ಕೆ ಹಣ ಬಿಡುಗಡೆ ಮಾಡಿದೆ. ಸಿಬ್ಬಂದಿನೇ ತಮ್ಮ ಕೈಯಿಂದ ಹಣ ಹಾಕಿ ಆಯುಧ ಪೂಜೆ ಹಬ್ಬ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.