ಧಾರಾವಾಹಿ ನಿರ್ಮಾಣಕ್ಕಾಗಿ 1 ಕೋಟಿ ಹಣ ಪಡೆದು ವಂಚನೆ ಆರೋಪ, ನಿರ್ಮಲಾ, ಗಂಡ ಸತ್ಯಾ ವಿರುದ್ಧ ಕೇಸ್ ದಾಖಲು

ಲಕ್ಷ್ಮಿ ನಿವಾಸ ಧಾರಾವಾಹಿ ನಿರ್ಮಾಣಕ್ಕಾಗಿ ನಿರ್ಮಲಾ ಹಾಗೂ ಗಂಡ ಸತ್ಯಾ ಅವರು ನಟ ಸೃಜನ್ ಲೋಕೇಶ್ ಅವರಿಂದ ಒಂದು ಕೋಟಿ ರೂಪಾಯಿ ಹಣವನ್ನು ಸಾಲವಾಗಿ ಪಡೆದಿದ್ದಾರೆ. ಬಳಿಕ ಸಾಲದ ಹಣ ವಾಪಸ್ ಕೊಟ್ಟಿಲ್ಲ. ಇದರ ವಿರುದ್ಧ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

author-image
Chandramohan
SATHYA AND NIRMALA COUPLE

ಆರೋಪಿ ನಿರ್ಮಲಾ ಹಾಗೂ ಗಂಡ ಸತ್ಯಾ

Advertisment
  • ಲಕ್ಷ್ಮಿ ನಿವಾಸ ಧಾರಾವಾಹಿ ನಿರ್ಮಾಣಕ್ಕಾಗಿ ಸಾಲ ಪಡೆದು ವಂಚನೆ
  • 1 ಕೋಟಿ ರೂಪಾಯಿ ಸಾಲ ಪಡೆದು ವಾಪಸ್ ಕೊಡದೇ ವಂಚನೆ ಆರೋಪ
  • ನಿರ್ಮಲಾ, ಸತ್ಯಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು

ಸೀರಿಯಲ್‌ ನಿರ್ಮಾಣಕ್ಕಾಗಿ ಹಣ ಪಡೆದು ವಂಚನೆ  ಮಾಡಿದ ಆರೋಪ ನಟ ಸತ್ಯ ಮತ್ತು ನಟಿ ನಿರ್ಮಲಾ ದಂಪತಿ ವಿರುದ್ಧ ಕೇಳಿ ಬಂದಿದೆ. ಅಗ್ನಿ ಯು ಸಾಗರ್ ಎಂಬಾತ ಬೆಂಗಳೂರಿನ  ಸಿ.ಕೆ. ‌ಅಚ್ಚುಕಟ್ಟು ಠಾಣೆಗೆ ದೂರು ನೀಡಿದ್ದಾರೆ.  ಸೃಜನ್ ಲೋಕೇಶ್ ಒಡೆತನದ ಲೋಕೇಶ್ ಪ್ರೊಡಕ್ಷನ್ಸ್ ನ ಜಿಪಿಎ ಹೋಲ್ಡರ್ ಆಗಿರುವ ಅಗ್ನಿ ಯು ಸಾಗರ್  ಎಂಬುವವರು ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಲಕ್ಷ್ಮೀ ನಿವಾಸ  ಧಾರಾವಾಹಿ ನಿರ್ಮಾಣಕ್ಕಾಗಿ  ಒಂದು ಕೋಟಿ ಹಣವನ್ನು  ನಟ ಸತ್ಯ ದಂಪತಿ ಸಾಲವಾಗಿ ಪಡೆದಿದ್ದಾರೆ. 2023ರ ನವೆಂಬರ್ ನಲ್ಲಿ  ಅಗ್ರಿಮೆಂಟ್ ಅನ್ನು  ಆರೋಪಿಗಳು ಮಾಡಿಕೊಂಡಿದ್ದರು.  ಏಪ್ರಿಲ್‌  1ನೇ ತಾರೀಖು 2024 ರಿಂದ ಪ್ರತೀ ತಿಂಗಳು 5 ಲಕ್ಷ ಹಣವನ್ನು ವಾಪಸ್  ಕೊಡೋದಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಆದ್ರೆ ಈವರೆಗೂ ಯಾವುದೇ ಹಣ ಪಾವತಿಯಾಗಿಲ್ಲ. MOU ನಲ್ಲಿರುವ ಷರತ್ತು ಉಲ್ಲಂಘನೆ ಮಾಡಿರೋದಾಗಿ ದೂರು ಅನ್ನು ಪೊಲೀಸ್ ಠಾಣೆಗೆ ನೀಡಲಾಗಿದೆ. ನಟ ಸೃಜನ್ ಲೋಕೇಶ್ ಅವರಿಂದ ಹಣವನ್ನು ಸಾಲವಾಗಿ ಪಡೆದಿದ್ದಾರೆ. ಆದರೇ, ಸಾಲದ ಹಣವನ್ನೇ ವಾಪಸ್ ನೀಡದೇ ವಂಚನೆ ಮಾಡಿದ್ದಾರೆ ಎಂಬ ಆರೋಪದಡಿ ಕೇಸ್ ದಾಖಲಾಗಿದೆ. 

SATHYA AND NIRMALA COUPLE02


ಸಾಯಿ ನಿರ್ಮಲಾ ಪ್ರೊಡಕ್ಷನ್ ನ ನಿರ್ಮಲಾ ಹಾಗೂ ಅವರ ಗಂಡ ಸತ್ಯ ವಿರುದ್ಧ ದೂರು ನೀಡಲಾಗಿದೆ. ಬೆಂಗಳೂರಿನ ಸಿ.ಕೆ. ‌ಅಚ್ಚುಕಟ್ಟು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 

SATHYA AND NIRMALA COUPLE02 srujan lokeshನಟ ಸೃಜನ್ ಲೋಕೇಶ್ ರಿಂದ ಹಣವನ್ನು ಸಾಲವಾಗಿ ಪಡೆದಿದ್ದ ನಿರ್ಮಲಾ ಹಾಗೂ ಸತ್ಯಾ ದಂಪತಿ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Nirmala and sathya couple cheating case
Advertisment