ಉದ್ಯಮಿ ಅನಿಲ್ ಅಂಬಾನಿ ಮನೆ ಮೇಲೆ ಸಿಬಿಐ ದಾಳಿ, ಶೋಧ: ಯಾವ ಕೇಸ್ ನಲ್ಲಿ ದಾಳಿ ಗೊತ್ತಾ?

ಉದ್ಯಮಿ ಅನಿಲ್ ಅಂಬಾನಿ ಮನೆ ಮೇಲೆ ಸಿಬಿಐ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಬ್ಯಾಂಕ್ ವಂಚನೆ ಕೇಸ್ ಗೆ ಸಂಬಂಧಿಸಿದಂತೆ ರೇಡ್ ಮಾಡಲಾಗಿದೆ.

author-image
Chandramohan
ANIL AMBANI HOUSE CBI RAID

ಉದ್ಯಮಿ ಅನಿಲ್ ಅಂಬಾನಿ ಮನೆ ಮೇಲೆ ಸಿಬಿಐ ರೇಡ್

Advertisment
  • ಉದ್ಯಮಿ ಅನಿಲ್ ಅಂಬಾನಿ ಮನೆ ಮೇಲೆ ಸಿಬಿಐ ರೇಡ್
  • ಬ್ಯಾಂಕ್ ವಂಚನೆ ಕೇಸ್ ಗೆ ಸಂಬಂಧಿಸಿದಂತೆ ಸಿಬಿಐ ರೇಡ್
  • ಇ.ಡಿ.ಯಿಂದಲೂ ಅನಿಲ್ ಅಂಬಾನಿ ವಿರುದ್ಧ ತನಿಖೆ

ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಉದ್ಯಮಿ ಅನಿಲ್ ಅಂಬಾನಿ ಮನೆ ಮೇಲೆ ರೇಡ್ ಮಾಡಿದ್ದಾರೆ. ಮನೆಯಲ್ಲಿ ಇಡೀ ದಿನ ಸಿಬಿಐ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಅನಿಲ್ ಅಂಬಾನಿ  ಮಾಲೀಕತ್ವದ ಕಂಪನಿಗಳ ಮೇಲೂ ದಾಳಿ  ಮಾಡಿದ್ದಾರೆ.  ಬ್ಯಾಂಕ್ ಗಳಿಗೆ ಬರೋಬ್ಬರಿ 2 ಸಾವಿರ ಕೋಟಿ ರೂಪಾಯಿಯನ್ನು ವಂಚಿಸಿದ  ಆರೋಪ ಅನಿಲ್ ಅಂಬಾನಿ ಹಾಗೂ ಅವರ ಕಂಪನಿಗಳ ಮೇಲಿದೆ. 
ಮುಂಬೈನ ಕೂಫೆ ಪರೇಡ್ ಸೀ ವಿಂಡ್ ಕಾಂಪ್ಲೆಕ್ಸ್ ನಲ್ಲಿರುವ ಅನಿಲ್ ಅಂಬಾನಿ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ.  ಸಿಬಿಐ ದಾಳಿ ವೇಳೆ, ಅನಿಲ್ ಅಂಬಾನಿ ಮನೆಯಲ್ಲೇ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. 
ಇನ್ನೂ ಪಾರ್ಲಿಮೆಂಟ್ ನಲ್ಲಿ ಸ್ಟೇಟ್ ಆಫ್ ಇಂಡಿಯಾ , ಅನಿಲ್ ಅಂಬಾನಿ  ಹಾಗೂ ಅವರ ಮಾಲೀಕತ್ವದ ರಿಲಯನ್ಸ್ ಕಮ್ಯೂನಿಕೇಷನ್ಸ್ ಲಿಮಿಟೆಡ್  ಕಂಪನಿಯನ್ನು ಫ್ರಾಡ್ ಎಂದು ವರ್ಗೀಕರಣ ಮಾಡಿರುವುದಾಗಿ ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಉತ್ತರ ನೀಡಿದ್ದಾರೆ. 20225ರ ಜೂನ್ 13 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಸ್ಟರ್ ಡೈರೆಕ್ಷನ್ ಆನ್ ಫ್ರಾಡ್ ರಿಸ್ಕ್ ಮ್ಯಾನೇಜ್ ಮೆಂಟ್ ಮತ್ತು ಎಸ್‌ಬಿಐನ ಅಂತರಿಕ ನೀತಿಯಡಿ ಈ ವರ್ಗೀಕರಣ ಮಾಡಲಾಗಿದೆ ಎಂದು ಪಂಕಜ್ ಚೌಧರಿ ಹೇಳಿದ್ದಾರೆ. 

ANIL AMBANI HOUSE CBI RAID022



ಇನ್ನೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ರಿಲಯನ್ಸ್ ಕಮ್ಯೂನಿಕೇಷನ್ಸ್ ಗೆ ಒಟ್ಟಾರೆ 2,227 ಕೋಟಿ ರೂಪಾಯಿ ಹಣವನ್ನು ಸಾಲವಾಗಿ ನೀಡಿದೆ.  ಇನ್ನೂ ನಾನ್ ಫಂಡ್ ಬ್ಯಾಂಕ್ ಗ್ಯಾರಂಟಿಯಾಗಿ 786 ಕೋಟಿ ರೂಪಾಯಿ ನೀಡಿದೆ. 
ಇನ್ನೂ ಇ.ಡಿ. ಕೂಡ ಅನಿಲ್ ಅಂಬಾನಿ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಆಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪ ಕೂಡ ಅನಿಲ್ ಅಂಬಾನಿ ಮೇಲಿದೆ. ಜೊತೆಗೆ ಬ್ಯಾಂಕ್ ನಿಂದ ಸಾಲ ಪಡೆಯಲು ಬ್ಯಾಂಕ್ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪವೂ ಅನಿಲ್ ಅಂಬಾನಿ ಹಾಗೂ ಅವರ ಮಾಲೀಕತ್ವದ ಕಂಪನಿಗಳ ಮೇಲಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

CBI RAID AT ANIL AMBANI HOUSE
Advertisment