ಕೇಂದ್ರ ಸರ್ಕಾರದಿಂದ ಸದ್ಯದಲ್ಲೇ IAS, IFS, ಇಂಜಿನಿಯರ್‌,ವಿಜ್ಞಾನಿ, ಡಿಫೆನ್ಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರ ಮುಂದಿನ ತಿಂಗಳಲ್ಲಿ ಐದು ಇಲಾಖೆಗಳಿಗೆ ಪ್ರಮುಖ ನೇಮಕಾತಿಗಳನ್ನು ಮಾಡಲಿದೆ. ಐಎಎಸ್, ಐಎಫ್ಎಸ್, ಇಂಜಿನಿಯರ್, ವಿಜ್ಞಾನಿ ಹಾಗೂ ರಕ್ಷಣಾ ಇಲಾಖೆಯ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಲಿದೆ. ಯಾವ್ಯಾವ ಹುದ್ದೆಗೆ ನೇಮಕಾತಿ ನಡೆಯಲಿದೆ ಎಂಬ ವಿವರ ಇಲ್ಲಿದೆ ಓದಿ

author-image
Chandramohan
central govt recruitment
Advertisment
  • ಕೇಂದ್ರ ಸರ್ಕಾರದಿಂದ ಸದ್ಯದಲ್ಲೇ ವಿವಿಧ ಇಲಾಖೆಗಳಲ್ಲಿ ನೇಮಕಾತಿ
  • ಐಎಎಸ್, ಐಎಫ್‌ಎಸ್, ಇಂಜಿನಿಯರ್, ವಿಜ್ಞಾನಿ, ರಕ್ಷಣಾ ಇಲಾಖೆ ಹುದ್ದೆಗೆ ನೇಮಕಾತಿ
  • ಕೇಂದ್ರ ಸರ್ಕಾರದ ಹುದ್ದೆಗೆ ನೇಮಕವಾದರೇ, ಪ್ರತಿ ತಿಂಗಳು ಲಕ್ಷ ಲಕ್ಷ ಸಂಬಳ

ಸರ್ಕಾರಿ ಹುದ್ದೆ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ! ಪ್ರತಿಯೊಬ್ಬರಿಗೂ ಸರ್ಕಾರಿ ಉದ್ಯೋಗ ಪಡೆಯೋ ಆಸೆ ಇದ್ದೇ ಇರುತ್ತೆ. ಅದರಲ್ಲೂ ಸೈನ್ಸ್​​, ಕಾಮರ್ಸ್​​, ಆರ್ಟ್ಸ್ ಯಾವುದೇ ವಿಷಯ ಓದಿರಲಿ. ಎಲ್ಲರಿಗೂ ಸರ್ಕಾರಿ ಕೆಲಸ ಬೇಕೇ ಬೇಕು. ಅಷ್ಟರಮಟ್ಟಿಗೆ ಜನ ಸರ್ಕಾರಿ ಕೆಲಸದ ಹಿಂದೆ ಬಿದ್ದಿದ್ದಾರೆ. ಹಗಲು ರಾತ್ರಿ ನಿದ್ದೆಗೆಟ್ಟು ಓದುತ್ತಾರೆ. ಆರೋಗ್ಯ ಕೆಟ್ರೂ ಪರ್ವಾಗಿಲ್ಲ ಸರ್ಕಾರಿ ಕೆಲಸ ಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸರ್ಕಾರ ಉದ್ಯೋಗದಲ್ಲಿ ಸಿಗೋ ಭದ್ರತೆ.
ಮಾಸ್ಟರ್​ ಡಿಗ್ರಿ ಮುಗಿದ ಬೆನ್ನಲ್ಲೇ ಎಷ್ಟೋ ವಿದ್ಯಾರ್ಥಿಗಳು KSET, NET ಎರಡು ಎಕ್ಸಾಂ ಕ್ಲಿಯರ್​ ಮಾಡಿಕೊಂಡಿದ್ದಾರೆ. ವರ್ಷಗಟ್ಟಲೇ ಕಷ್ಟಪಟ್ಟು ಓದಿ ಎಕ್ಸಾಂ ಕ್ಲಿಯರ್​ ಮಾಡಿದ್ದಾರೆ. ಈ ಮೂಲಕ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಪಡೆಕೊಂಡಿದ್ದಾರೆ. ಬ್ಯಾಚುಲರ್​ ಡಿಗ್ರಿ ಮಾಡಿದವರು ಬೋಧಕೇತರ ಹುದ್ದೆಗಳ ಭರ್ತಿಗೆ ಕಾಯುತ್ತಿದ್ದಾರೆ. BA, BE, BSc, MA, MBA, BS, MS, MSW ಸೇರಿದಂತೆ PhD ವಿದ್ಯಾರ್ಥಿಗಳು ಸರ್ಕಾರಿ ಕೆಲಸಕ್ಕಾಗಿ ತಪಸ್ಸು ಮಾಡುತ್ತಿದ್ದಾರೆ. ಸರ್ಕಾರ ಯಾವಾಗ ನೇಮಕಾತಿ ಮಾಡಲಿದೆ? ಎಂದು ಎದುರು ನೋಡುತ್ತಿದ್ದಾರೆ. 
ಭಾರತೀಯರಲ್ಲಿ ಸರ್ಕಾರಿ ಕೆಲಸದ ಮೇಲೆ ವ್ಯಾಮೋಹಕ್ಕೆ ಕಾರಣ ಒಂದಿದೆ. ಜಾಬ್ ಸೆಕ್ಯೂರಿಟಿ ಒಂದು ದೊಡ್ಡ ಅಂಶವಾದರೆ, ಉದ್ಯೋಗದಿಂದ ಸಿಗುವ ಇತರೆ ಸೌಲಭ್ಯಗಳು ಜನರನ್ನು ಆಕರ್ಷಿಸುತ್ತವೆ. ಇಂಥವರಿಗೆ ಗುಡ್​ನ್ಯೂಸ್​ ಒಂದಿದೆ. ಮುಂದಿನ 6 ತಿಂಗಳಲ್ಲಿ ಈ ಟಾಪ್​​ 5 ಉದ್ಯೋಗಗಳ ನೇಮಕಾತಿಗೆ ಕೇಂದ್ರ ಸರ್ಕಾರ ಮುಂದಾಗಿದೆ. 
ಕೇಂದ್ರ ಸರ್ಕಾರದ ಮೊದಲ ಆದ್ಯತೆ ಭಾರತೀಯ ಆಡಳಿತ ಸೇವೆ. ಕಾರಣ IAS ಮತ್ತು IPS ಹುದ್ದೆಗಳ ಭರ್ತಿ ಮಾಡಿದ್ರೆ ಸರ್ಕಾರದ ಕೆಲಸಗಳು ಆಗುತ್ತವೆ. ಹಾಗಾಗಿ ಇದಕ್ಕಾಗಿ ಕೇಂದ್ರ ಸರ್ಕಾರ ಹೆಚ್ಚುವರಿ IAS ಮತ್ತು IPS ಹುದ್ದೆಗಳ ಸೃಷ್ಟಿಗೆ ಮುಂದಾಗಿದ್ದು, ಮುಂದಿನ 6 ತಿಂಗಳಲ್ಲಿ ಮತ್ತೆ ನೇಮಕಾತಿ ನಡೆಸಲಿದೆ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ  ವಾಸ ಮಾಡಲು ಸರ್ಕಾರಿ ಮನೆಗಳು ಮತ್ತು ಪ್ರಯಾಣಿಸಲು ದುಬಾರಿ ಕಾರುಗಳನ್ನು ನೀಡಲಾಗುತ್ತದೆ. ಇವರಿಗೆ ಬರೋಬ್ಬರಿ 56 ಸಾವಿರ ಮೂಲ ವೇತನ ಸಿಗುತ್ತದೆ.

central govt recruitment333


ಇಷ್ಟೇ ಅಲ್ಲ ಸರ್ಕಾರ ಸಾರ್ವಜನಿಕ ವಲಯದ ಎಂಜಿನಿಯರ್​ಗಳ ನೇಮಕಾತಿಗೆ ಮುಂದಾಗಿದೆ. ಇವರ ಮಾಸಿಕ 24 ಸಾವಿರದಿಂದ 50 ಸಾವಿರದರೆಗೆ ವೇತನ ಪಡೆಯುತ್ತಾರೆ. ಅವರ ವಾರ್ಷಿಕ ಸಿಟಿಸಿ 10 ಲಕ್ಷ 80 ಸಾವಿರದವರೆಗೆ ಇರುತ್ತದೆ. ಅಷ್ಟೇ ಅಲ್ಲ ಮ್ಯಾನೇಜ್​ಮೆಂಟ್ ಟ್ರೈನಿಗಳು ತಿಂಗಳಿಗೆ 24 ಸಾವಿರದ 900 ರಿಂದ 50 ಸಾವಿರದ 500 ರೂಪಾಯಿಗಳವರೆಗೆ ವೇತನ ಪಡೆಯುತ್ತಾರೆ.
ಮೂರನೇಯದ್ದು ISRO, DRDO ವಿಜ್ಞಾನಿ/ಎಂಜಿನಿಯರ್ ನೇಮಕಾತಿ.. ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವ ಇಂಜಿನಿಯರ್ಸ್​​​ ISRO ಮತ್ತು DRDO ಗಳಲ್ಲಿ ವಿಜ್ಞಾನಿ ಮತ್ತು ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ವಸತಿ ಸಿಗುತ್ತದೆ. ಜತೆಗೆ ಮಾಸಿಕ 60 ಸಾವಿರ ಸಂಬಳ ನೀಡಲಾಗುತ್ತದೆ. 
ಬಳಿಕ ಭಾರತೀಯ ವಿದೇಶಾಂಗ ಸೇವೆ ನೇಮಕಾತಿ ನಡೆಯಲಿದೆ. IFS ಅಧಿಕಾರಿಗಳಿಗೆ ರಾಷ್ಟ್ರದ ಪ್ರತಿನಿಧಿಗಳ ಸ್ಥಾನಮಾನವನ್ನು ನೀಡಲಾಗುತ್ತದೆ. ವಿದೇಶಿ ಸೇವೆಯ ಸೀನಿಯರ್ ಟೈಮ್ ಸ್ಕೇಲ್​ನಲ್ಲಿರೋ ಇವರಿಗೆ ರೂ 15,600 ರಿಂದ ರೂ 39,100 ಮತ್ತು ಗ್ರೇಡ್ ಪೇ ರೂ 6,600 ಪಡೆಯುತ್ತಾರೆ.
ಇದಾದ ಮೇಲೆ ರಕ್ಷಣಾ ಸೇವೆಗಳಾದ ನೌಕಾಪಡೆ, ಸೇನೆ ಮತ್ತು ವಾಯುಪಡೆ ನೇಮಕಾತಿ ಆಗಲಿದೆ. ಇವರಿಗೂ ಉತ್ತಮ ಸಂಬಳದ ಜತೆಗೆ ವೈದ್ಯಕೀಯ ಸೌಲಭ್ಯಗಳು, ಸರ್ಕಾರಿ ವಸತಿ ಮತ್ತು ಸಾರಿಗೆ ವೆಚ್ಚಗಳಂತಹ ಪ್ರಯೋಜನಗಳನ್ನು ಒದಗಿಸಲಾಗುತ್ತದೆ. ರಕ್ಷಣಾ ಸೇವೆಗಳಲ್ಲಿ ಜೂನಿಯರ್ ಗ್ರೇಡ್ ಕಮಾಂಡೆಂಟ್ 15,600 ರಿಂದ ರೂ 39,100 ಮತ್ತು ಗ್ರೇಡ್ ಪೇ ರೂ 7,600 ಪಡೆಯುತ್ತಾರೆ.

central govt recruitment222

ಇಷ್ಟೇ ಅಲ್ಲ ಕೇಂದ್ರೀಯ  ವಿವಿಗಳಲ್ಲಿ ಸಹಾಯಕ ಪ್ರಾಧ್ಯಾಪಕರು/ಉಪನ್ಯಾಸಕರ ನೇಮಕಾತಿ ಆಗಲಿದೆ. ಇವರಿಗೆ ತಿಂಗಳಿಗೆ 50 ಸಾವಿರ ಸಂಬಳ ಪಡೆಯುತ್ತಾರೆ. SSC ಅಂದ್ರೆ ​ಸಿಬ್ಬಂದಿ ಆಯ್ಕೆ ಆಯೋಗ. ಸಿಬ್ಬಂದಿ ಆಯ್ಕೆ ಆಯೋಗ CGL, CHSL, MTS ಮತ್ತು CPO ನಂತಹ ವಿವಿಧ ಪರೀಕ್ಷೆಗಳನ್ನು ನಡೆಸುತ್ತದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

New recruitment central government IAS IFS IPS ENGINEERS SCIENTIST ASSISTANT PROFESSORS
Advertisment