/newsfirstlive-kannada/media/media_files/2025/08/08/iit-bangalore333-2025-08-08-12-48-12.jpg)
ದೇಶದ ಅಗ್ರಮಾನ್ಯ ಸಂಸ್ಥೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರವೇಶ ಪಡೆಯುವುದು ಹಲವು ವಿದ್ಯಾರ್ಥಿಗಳ ಕನಸು. ಈ ಐಐಟಿಗಳಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು JEE Mains and Advanced ಪರೀಕ್ಷೆಗಳಲ್ಲಿ ಪಾಸ್ ಆಗಬೇಕು. ಅದರಲ್ಲೂ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿ ತುಂಬಾ ಕಡಿಮೆ ಜನರಿಗೆ ಮಾತ್ರ ಐಐಟಿ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಓದಲು ಅವಕಾಶ ಸಿಗುತ್ತದೆ.
ಪಿಯುಸಿ ಆದ್ಮೇಲೆ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಓದಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಅದಕ್ಕಾಗಿ ಒಳ್ಳೊಳ್ಳೆ ಕಾಲೇಜುಗಳಲ್ಲಿ ಸೀಟು ಗಿಟ್ಟಿಸಿಕೊಳ್ಳಲು ಎಂಟ್ರೇನ್ಸ್ ಎಕ್ಸಾಂ ಬರೆಯೋದು ಕಂಡಿದ್ದೇವೆ. ಈಗಲೂ ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿ ವರ್ಷ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸಂಸ್ಥೆಗಳಲ್ಲಿ ಸೀಟು ಗಿಟ್ಟಿಸಿಕೊಳ್ಳಲು ಜೆಇಇ ಪ್ರವೇಶ ಪರೀಕ್ಷೆ ಬರೆಯುತ್ತಲೇ ಇರ್ತಾರೆ.
ಈ ಐಐಟಿ ಪ್ರವೇಶ ಪರೀಕ್ಷೆ ಅತ್ಯಂತ ಕಠಿಣವಾದದ್ದು. ಈ ಎರಡೂ ಪರೀಕ್ಷೆಗೆ ತಯಾರಿ ನಡೆಸಲು ಕೆಲವು ಕಾಮನ್ ಆದ ಸಲಹೆಗಳನ್ನು ಅಭ್ಯರ್ಥಿಗಳು ಪಾಲಿಸಬೇಕಾಗುತ್ತದೆ. ಕಠಿಣ ಪರಿಶ್ರಮ, ದೃಢನಿಶ್ಚಯ ಮತ್ತು ಶಿಸ್ತುಬದ್ದ ತಯಾರಿ ಮುಖ್ಯವಾಗುತ್ತದೆ. ಅಷ್ಟರಮಟ್ಟಿಗೆ ಐಐಟಿ ಎಂದ್ರೆ ಎಲ್ಲರಿಗೂ ಕ್ರೇಜ್. ಈಗ ಈ ಐಐಟಿಗಳಲ್ಲೇ ಕೆಲಸ ಮಾಡಲು ಒಂದು ಸುವರ್ಣಾವಕಾಶ ಇದೆ.
ಐಐಟಿಯಲ್ಲಿ ಕೆಲಸ ಮಾಡಬೇಕು ಅನ್ನೋರಿಗೆ ಇದೊಂದು ಗ್ರೇಟ್ OPPORTUNITY. ಕೇಂದ್ರ ಸರ್ಕಾರ ಐಐಟಿಗಳಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಿದೆ. ಹಾಗಾಗಿ ಅರ್ಹರು ಕೂಡಲೇ ಅಪ್ಲೈ ಮಾಡಬಹುದು.
ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಛತ್ತೀಸ್‌ಗಢ, ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಾಪಿಸಲಾಗಿರುವ 5 ಹೊಸ ಐಐಟಿಗಳ ಶೈಕ್ಷಣಿಕ ಮತ್ತು ಮೂಲಸೌಕರ್ಯ ವಿಸ್ತರಣೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಕೇಂದ್ರ ಸರ್ಕಾರ ಬೋಧಕ ವೃಂದ, ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದೆ.
ಐಐಟಿಗಳ ಮೂಲ ಸೌಕರ್ಯ ಸಾಮರ್ಥ್ಯದ ವಿಸ್ತರಣೆಗೆ 11,828 ಕೋಟಿ ರೂ ವೆಚ್ಚ ಆಗಲಿದ್ದು, ಪ್ರಾಥಮಿಕ ಹಂತದಲ್ಲಿ 1 ಸಾವಿರ ಕೋಟಿ ರಿಲೀಸ್ ಮಾಡಿದೆ. ಅದರಲ್ಲೂ 130 ಬೋಧಕರ ಹುದ್ದೆಗಳನ್ನು ಸೃಷ್ಟಿಸಿ ನೇಮಕಾತಿಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಹೊಸ ಐಐಟಿಗಳಲ್ಲಿ ಬೋಧಕರ ಹುದ್ದೆಗಳ ನೇಮಕಾತಿಗೆ ಕೇಂದ್ರ ಮುಂದಾಗಿದ್ದು, ಇದು ನಿರುದ್ಯೋಗಿ ಸ್ನಾತಕೋತ್ತರ ಪದವೀಧರರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ. ಜತೆಗೆ ಉದ್ಯಮ ಶೈಕ್ಷಣಿಕ ಸಂಪರ್ಕವನ್ನು ಬಲಪಡಿಸಲು 5 ಹೊಸ ಅತ್ಯಾಧುನಿಕ ಸಂಶೋಧನಾ ಪಾರ್ಕ್‌ಗಳನ್ನು ಸಹ ಅಭಿವೃದ್ಧಿಪಡಿಸಲು ಮುಂದಾಗಿದೆ. ಈ ಮೂಲಕ ಬೋಧಕೇತರ ಸಿಬ್ಬಂದಿಗಳ ಉದ್ಯೋಗವು ಸೃಷ್ಟಿ ಆಗುವ ಅವಕಾಶಗಳಿವೆ.
ಇನ್ನೂ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಐಐಟಿಗಳಲ್ಲಿ ಮೊದಲ ವರ್ಷದಲ್ಲಿ 1364 ವಿದ್ಯಾರ್ಥಿಗಳು, ಎರಡನೇ ವರ್ಷದಲ್ಲಿ 1738 ವಿದ್ಯಾರ್ಥಿಗಳು, ಮೂರನೇ ವರ್ಷದಲ್ಲಿ 1767 ವಿದ್ಯಾರ್ಥಿಗಳು ಹಾಗೂ ನಾಲ್ಕನೇ ವರ್ಷದಲ್ಲಿ 1707 ವಿದ್ಯಾರ್ಥಿಗಳು ಹೆಚ್ಚಾಗಲಿದ್ದಾರೆ. ಸದ್ಯ ಈ 5 ಐಐಟಿಗಳಲ್ಲಿ 7,111 ವಿದ್ಯಾರ್ಥಿಗಳಿದ್ದು, ಮುಂದಿನ ದಿನಗಳಲ್ಲಿ 13,687 ವಿದ್ಯಾರ್ಥಿಗಳಿಗೆ ಅವಕಾಶ ದೊರೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.