/newsfirstlive-kannada/media/media_files/2025/09/24/swami-chaitanyananda-swamiji02-2025-09-24-16-45-51.jpg)
ಚೈತನ್ಯಾನಂದ ಸರಸ್ವತಿ ಸ್ವಾಮೀಜಿಯಿಂದ ಹುಡುಗಿಯರ ಜೊತೆೆ ಸೆಕ್ಸ್ ಚಾಟ್
ದೆಹಲಿಯ ಶೃಂಗೇರಿ ಶಾರದಾ ಪೀಠದ ಚೈತನ್ಯಾನಂದ ಸರಸ್ವತಿ ಸ್ವಾಮೀಜಿಯಿಂದ ಹುಡುಗಿಯರ ಕೋಣೆಗೆ ರಹಸ್ಯ ಕ್ಯಾಮರಾ ಫಿಕ್ಸ್ ಆಗಿತ್ತು. ಸ್ವಾಮೀಜಿ ಮೊಬೈಲ್‌ಗೆ ವಿಡಿಯೋ ಲಿಂಕ್ ಇತ್ತು ! ಹುಡುಗಿಯರಿಗೆ ಬಾಯ್‌ಫ್ರೆಂಡ್ ಇದ್ದಾನಾ? 'ಅದನ್ನ' ಬಳಸಬೇಕಾ? ಅಂತ ಬಾಬಾನ ಪ್ರಶ್ನೆ! 'ಸ್ವಾಮಿ'ಕಾರ್ಯಕ್ಕೆ ಕಟ್ಟಿದ್ದ 'ಲೇಡಿಗ್ಯಾಂಗ್'.. ಆ ರಹಸ್ಯ ಈಗ ಬಯಲು!
ಹೇಳೋದು ಆಚಾರ, ತಿನ್ನೋದು ಬದನೆಕಾಯಿ ಅಂತಾ ಹೇಳ್ತಾರಲ್ಲ. ಆ ಮಾತು ಈ ಖಾವಿಧಾರಿಗೆ ಪಕ್ಕಾ ಶೂಟ್ ಆಗುತ್ತೆ. ಈತ ನೋಡೋದಕ್ಕೆ ಮಾತ್ರ ಸಮಾಜದಲ್ಲಿ ಗೌರವಾನ್ವಿತ ಸ್ವಾಮಿಯಾಗಿದ್ದ. ಆದ್ರೆ, ರಾತ್ರಿ ಆದ್ರೆ ಸಾಕು ಕಾಲೇಜು ವಿದ್ಯಾರ್ಥಿನಿಯರಿಗೆ ಅಶ್ಲೀಲವಾಗಿ ಮೆಸೇಜ್ ಮಾಡೋದು, ಮಂಚಕ್ಕೆ ಆಹ್ವಾನಿಸೋದು ಮಾಡ್ತಿದ್ದ. ಇಷ್ಟೇ ಅಲ್ಲ, ಈತ ಹುಡ್ಗೀರ ರೂಮ್‌ಗೆ ರಹಸ್ಯ ಕ್ಯಾಮರಾ ಅಳವಡಿಸಿ ಲೈವ್‌ನಲ್ಲಿ ಎಲ್ಲವನ್ನು ವೀಕ್ಷಿಸ್ತಿದ್ದ. ಸ್ವಾಮಿ ಕಾರ್ಯಕ್ಕಾಗಿಯೇ ಲೇಡಿಗ್ಯಾಂಗ್ ಕಟ್ಟಿಕೊಂಡಿದ್ದ. ಆ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಓದಿ.
ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ಅಲಿಯಾಸ್ ಪಾರ್ಥಸಾರಥಿ
ಹಣೆಯಲ್ಲಿ ನಾಮ, ಕೊರಳಲ್ಲಿ ರುದ್ರಾಕ್ಷಿ, ಮೈಮೇಲೆ ಕೇಸರಿ ವಸ್ತ್ರ ಧರಿಸಿರೋ ಇವರ ಹೆಸ್ರು ಸ್ವಾಮಿ ಚೈತನ್ಯಾನಂದ ಸರಸ್ವತಿ ಅಲಿಯಾಸ್ ಪಾರ್ಥಸಾರಥಿ. 62 ವರ್ಷದ ಈ ಸ್ವಾಮೀಜಿ ಬರಹಗಾರರು ಹೌದು, ಪ್ರಾಧ್ಯಾಪಕರು ಹೌದು, ಕಾಲೇಜಿನ ಮುಖ್ಯಸ್ಥರು ಹೌದು, ಹಾಗೇ ಕೊಳಕು ಸ್ವಾಮಿಯೂ ಹೌದು. ದೆಹಲಿಯ ವಸತ್‌ಕುಂಜ್‌ನಲ್ಲಿರೋ ಶ್ರೀಶಾರದಾ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಾಲೇಜಿನ ಮುಖ್ಯಸ್ಥರಾಗಿರೋ ಈ ಸ್ವಾಮೀಜಿ ಚರಿತ್ರೆ ಬೆಚ್ಚಿ ಬೀಳಿಸ್ತಿದೆ. ಅದೇ ಕಾಲೇಜಿನ 17 ವಿದ್ಯಾರ್ಥಿನಿಯರು ಪೊಲೀಸ್ ಠಾಣೆಯ ಮೆಟ್ಟಿಲೇರಿ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದೇ ತಡ. ಸ್ವಾಮೀಜಿಯ ಒಂದೊಂದೇ ಕರ್ಮಕಾಂಡಗಳು ಒಂದೊಂದಾಗಿಯೇ ಹೊರಬರ್ತಿದೆ. ನೋಡೋದಕ್ಕೆ ಪಕ್ಕಾ ಸಾಧು ತರಹನೇ ಕಾಣಿಸಿಕೊಳ್ಳುವ ಈ ಸ್ವಾಮಿಗೆ ಎರಡು ಮುಖವಿತ್ತು. ಒಂದು ಮುಖ ಸೂರ್ಯೋದಯ ಆದ್ಮೇಲೆ ಗೋಚರಿಸ್ತಿದ್ರೆ, ಇನ್ನೊಂದ್ ಮುಖ ಸೂರ್ಯಮುಗಿದ್ಮೇಲೆ ಕಾಣಿಸಿಕೊಳ್ಳುತ್ತಿತ್ತು. ಎರಡನೇ ಮುಖದಲ್ಲಿ ಕತ್ತಲಾದ್ರೆ ಸಾಕು ಸ್ವಾಮೀಜಿಯ ಪಂಚೇಂದ್ರಿಯಗಳು ರಾಕ್ಷಸ ರೂಪ ತಾಳುತ್ತಾ ಇದ್ದವು ಅನ್ನೋದ್ ವಿದ್ಯಾರ್ಥಿಗಳು ನೀಡಿರೋ ದೂರಿನಲ್ಲಿಯೇ ಸಾಬೀತಾಗುತ್ತಿದೆ.
ಸ್ವಾಮಿ ವಿರುದ್ಧ 300 ಪುಟಗಳನ್ನ ಮೀರಿದ ಸಾಕ್ಷ್ಯಾಧಾರ!
ಸ್ವಾಮಿ 'ಕಾಮಕಾಂಡ' ಬಟಾಬಯಲಾಗಿದ್ದೇ ರೋಚಕ!
ಸ್ವಾಮಿ ಚೈತನ್ಯಾನಂದ ಅಲಿಯಾಸ್ ಪಾರ್ಥಸಾರಥಿ ವಿರುದ್ಧ ದೂರು ದಾಖಲಾಗಿದ್ದು ಆಗಸ್ಟ್‌ನಲ್ಲಿ. 17 ವಿದ್ಯಾರ್ಥಿನಿಯರು ಆವತ್ತೆ ಪೊಲೀಸ್ ಠಾಣೆಯ ಮೆಟ್ಟಿಲೇರಿ ಸ್ವಾಮೀಜಿಯಿಂದ ಯಾವ ರೀತಿಯಲ್ಲಿ ಲೈಂಗಿಕ ದೌರ್ಜನ್ಯವಾಗ್ತಿದೆ ಅನ್ನೋದನ್ನ ತೆರೆದಿಟ್ಟಿದ್ರು. ಆದ್ರೆ, ಸ್ವಾಮಿಯ ಕಾಮಕಾಂಡ ಹೊರಬಂದಿದ್ದು ಮಾತ್ರ ಕಳೆದ ಎರಡ್ಮೂರು ದಿನದ ಹಿಂದೆ. ಅಷ್ಟಕ್ಕೂ ಈ ಸ್ವಾಮಿ ವಿರುದ್ಧ ದೂರು ದಾಖಲಾಗಿದ್ದು ಹೇಗೆ ಅನ್ನೋದೇ ರೋಚಕ ವಿಚಾರ. ಅದೇನ್ ಅಂದ್ರೆ, ಕಾಲೇಜಿನ ಮುಖ್ಯಸ್ಥನು ಈ ಸ್ವಾಮಿಯೇ ಆಗಿರೋದ್ರಿಂದ ಯಾವ ವಿದ್ಯಾರ್ಥಿನಿಯರು ಪೊಲೀಸ್ ಠಾಣೆಯ ಮೆಟ್ಟಿಲೇರೋದಕ್ಕೆ ಧೈರ್ಯ ಮಾಡ್ತಾ ಇರಲಿಲ್ಲ. ಅಪ್ಪಿ ತಪ್ಪಿ ಅಂತ ಧೈರ್ಯ ತೋರಿಸೋದಕ್ಕೆ ಹೋದ್ರೆ ಕಾಲೇಜು ಜೀವನೂ ಹಾಳಾಕ್ತಾ ಇತ್ತು, ಜೀವ ಬೆದರಿಕೆಯೂ ಎದುರಾಗ್ತಾ ಇತ್ತು. ಹೀಗಾಗಿ ಯಾರೂ ಧೈರ್ಯ ತೋರಿಸ್ತಾ ಇರ್ಲಿಲ್ಲ. ಬಟ್, ಕಾಲೇಜಿನಲ್ಲಿ ಸ್ವಾಮೀಜಿಯ ಕಾಮಕಾಂಡ ತಾಂಡವ ಆಡ್ತಿದೆ ಅನ್ನೋದು ವಾಯುಪಡೆ ಅಧಿಕಾರಿಯೊಬ್ಬರಿಗೆ ಗೊತ್ತಾಗುತ್ತೆ. ಅವ್ರು ವಾಯುಪಡೆಯ ಪ್ರಧಾನ ಕಚೇರಿಯಲ್ಲಿ ದೂರು ದಾಖಲು ಮಾಡಿಕೊಳ್ತಾರೆ. ಅವರೇ ಶಿಕ್ಷಣ ಸಂಸ್ಥೆಗೆ ನಿಮ್ಮ ಸ್ವಾಮಿ ಚೈತನ್ಯಾನಂದ ವಿರುದ್ಧ ಇಂಥವೊಂದು ದೂರು ದಾಖಲಾಗಿದೆ ಅನ್ನೋ ಮಾಹಿತಿ ಪಾಸ್ ಮಾಡ್ತಾರೆ. ಆವಾಗ ಕಾಲೇಜು ಮಂಡಳಿಯವರು ದೂರು ಕೊಡುತ್ತಾರೆ. ಇದಾಗ್ತಾ ಇದ್ದಂತೆ ಸ್ವಾಮಿ ಸ್ಥಳದಿಂದ ಎಸ್ಕೇಪ್ ಆಗಿ ಬಿಡ್ತಾನೆ.
ಅದ್ಯಾವಾಗ ದೂರು ದಾಖಲಾಯ್ತೋ? ಅವಾಗ್ಲೇ ದೆಹಲಿ ವಸಂತ್‌ಕುಂಜ್ ಪೊಲೀಸ್ರು ಅಲರ್ಟ್ ಆಗ್ತಾರೆ. ಒಟ್ಟು 32 ವಿದ್ಯಾರ್ಥಿನಿಯರನ್ನ ವಿಚಾರಣೆ ನಡೆಸ್ತಾರೆ. ಅದ್ರಲ್ಲಿ 16 ವಿದ್ಯಾರ್ಥಿನಿಯರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಅಂತ ಆರೋಪ ಮಾಡಿದ್ದು, ಅವರನ್ನ ನ್ಯಾಯಾಧೀಶರ ಮುಂದೆ ಕರ್ಕೊಂಡ್ ಹೋಗಿ 164 ಸ್ಟೇಟ್‌ಮೆಂಟ್ ಮಾಡಿಸಲಾಗಿದೆ. ಒಟ್ಟಾರೆ ಸ್ವಾಮೀ ವಿರುದ್ಧ 300 ಪುಟಗಳನ್ನ ಮೀರಿದ ಸಾಕ್ಷ್ಯಾಧಾರವನ್ನ ಪೊಲೀಸ್ರು ಕಲೆ ಹಾಕಿದ್ದಾರೆ. ಅದ್ರಲ್ಲಿ ಏನೇನ್ ಇದೆ ಅಂತ ಕೇಳಿ ಬಿಟ್ರೆ ಖಂಡಿತ ಇವರು ಬರೀ ಸ್ವಾಮಿ ಅಲ್ಲ, ಒಬ್ಬ ಕೊಳಕು ಸ್ವಾಮಿ ಅಂತ ಯಾರೇ ಆದ್ರೂ ಉಲ್ಲೇಖ ಮಾಡೋದು ಪಕ್ಕಾ.
ಕಾಮಕಾಂಡ!
ಹುಡ್ಗೀರ ಕೋಣೆಗೆ ರಹಸ್ಯ ಕ್ಯಾಮರಾ, ಬಾಬಾ ಮೊಬೈಲ್‌ಗೆ ಲಿಂಕ್?
ಕಂಪ್ಲೇಂಟ್ ದಾಖಲಾಗ್ತಾ ಇದ್ದಂತೆ ಪೊಲೀಸ್ರು ಕಾಲೇಜು ಮತ್ತು ಕಾಲೇಜಿನ ಹಾಸ್ಟೇಟ್‌ಗೆ ದಾಳಿ ನಡ್ಸಿದ್ದಾರೆ. ಆ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಅನೇಕ ದಾಖಲೆಗಳನ್ನ ವಶಕ್ಕೆ ಪಡ್ಕೊಂಡಿದ್ದಾರೆ. ಅದ್ರಲ್ಲಿ ಹುಡ್ಗೀರ ಕೋಣೆಯಲ್ಲಿ ಮತ್ತು ಸ್ನಾನಗೃಹದಲ್ಲಿರೋ ರಹಸ್ಯ ಕ್ಯಾಮರಾಗಳು ಸೇರಿವೆ ಅಂತ ಹೇಳಲಾಗ್ತಿದೆ. ಹಾಗಾದ್ರೆ, ಏನಿದು ರಹಸ್ಯ ಕಾಮರಾಗಳ ಕಥೆ ಅಂತ ನೋಡ್ತಾ ಹೋದ್ರೆ, ನೀನು ಸಾಮಾನ್ಯದವನಲ್ಲ ಸ್ವಾಮಿ ಅನ್ನದೇ ಬೇರೆ ಮಾತೇ ಹೊರಡಲ್ಲ.
'ಹುಡ್ಗೀರ ರೂಮ್‌ನಲ್ಲಿ ರಹಸ್ಯ ಕ್ಯಾಮರಾ'
ಸ್ವಾಮಿ ಚೈತ್ಯಾನಂದ ಏನಿದ್ದಾನೆ ಈತ ಹುಡ್ಗೀರ ಹಾಸ್ಟೇಲ್ ರೂಮ್‌ಗೆ ಮತ್ತು ಸ್ನಾನಗೃಹಕ್ಕೆ ರಹಸ್ಯ ಕ್ಯಾಮರಾಗಳನ್ನ ಅಳವಡಿಸಿದ್ದ. ಆ ಕ್ಯಾಮರಾಗಳನ್ನ ತನ್ನ ಮೊಬೈಲ್‌ಗೆ ಲಿಂಕ್ ಮಾಡಿಸ್ಕೊಂಡ್ ಇದ್ದ. ಹಾಗೇ ಹುಡ್ಗೀರ್ ಹಾಸ್ಟೆೇಲ್ ರೂಮ್‌ನಲ್ಲಿ ಬಟ್ಟೆ ಬದಲಾಯಿಸೋದು, ಸ್ನಾನ ಮಾಡೋದನ್ನ ತನ್ನ ಮೊಬೈನಲ್ಲಿ ಲೈವ್ ಆಗಿ ವೀಕ್ಷಣೆ ಮಾಡ್ತಾನೆ ಅಂತ ಹೇಳಲಾಗ್ತಿದೆ. ಅದಾದ್ಮೇಲೆ ಆ ಹುಡ್ಗೀರ ನಂಬರ್ ತೆಗೆದ್ಕೊಂಡ್ ಮೆಸೇಜ್ ಮಾಡೋದಕ್ಕೆ ಶುರು ಮಾಡ್ತಿದ್ದ. ಮೆಸೇಜ್‌ನಲ್ಲಿ ಮಂಚಕ್ಕೆ ಆಹ್ವಾನ ಕೊಡ್ತಿದ್ದ. ಹುಡ್ಗೀರ್ ಒಮ್ಮೆ ನಿರಾಕರಣೆ ಮಾಡಿದ್ರೆ, ತನ್ನ ಬಳಿ ಇರೋ ಬೆತ್ತಲೆ ದೃಶ್ಯಗಳ ಬಗ್ಗೆ ಹೇಳಿ ಬ್ಲ್ಯಾಕ್‌ಮೇಲ್ ಮಾಡ್ತಿದ್ದ. ನೀವು ಸ್ವಾಮಿಕಾರ್ಯ ಮಾಡದೇ ಇದ್ರೆ ಪರಿಸ್ಥಿತಿ ಸರಿ ಇರೋದಿಲ್ಲ ಅಂತ ಬೆದರಿಕೆ ಹಾಕ್ತಿದ್ದ.
ಕಾಮಕಾಂಡ!
ಹೌದಾ ಸ್ವಾಮಿ?
ಬಾಯ್‌ಫ್ರೆಂಡ್ ಇದ್ದಾನಾ? 'ಅದನ್ನ' ಬಳಸಬೇಕಾ? ಬಾಬಾನ ಪ್ರಶ್ನೆ!
ಹೇಳೋದು ಆಚಾರ ತಿನ್ನೋದ್ ಬದನೆಕಾಯಿ ಅಂತಾರಲ್ಲ. ಈ ಸ್ವಾಮೀಜಿಗೆ ಪಕ್ಕಾ ಸೂಟ್ ಆಗುತ್ತೆ ನೋಡಿ ಆ ಗಾದೆ. ತಾನು 28 ಪುಸ್ತಕ ಬರೆದಿದ್ದೇನೆ ಅಂತ ಹೇಳಿಕೊಳ್ತಿದ್ದ. ತಾನೊಬ್ಬ ಅಧ್ಯಾತ್ಮಿಕ ಚಿತಂಕ ಅಂತ ಬಿಲ್ಡಪ್ ಕೊಡ್ತಿದ್ದ. ಮಂತ್ರ, ಶ್ಲೋಕಗಳ ಪಠಣ ಮಾಡ್ತಿದ್ದ. ಆದ್ರೆ, ಈತನ ನಿಜವಾದ ಮುಖವೇ ಬೇರೆಯಾಗಿತ್ತು. ಮಂತ್ರ ಪಠಣ ಮಾಡೋ ಬಾಯಲ್ಲಿ ಅಶ್ಲೀಲ ಮಾತುಗಳು ಹೊರಬರ್ತಾ ಇದ್ವು. ಖಾವಿತೊಟ್ಟ ದೇಹ ಬೇಡದನ್ನ ಬಯಸುತ್ತಿತ್ತು. ಅದೆಲ್ಲವೂ ಈತನ ಕಾಲೇಜು ಹುಡ್ಗೀರಿಗೆ ಮಾಡ್ತಿದ್ದ ಮೆಸೇಜ್‌ನಲ್ಲಿಯೇ ಗೊತ್ತಾಗ್ತಿದೆ. ಅಷ್ಟಕ್ಕೂ ಈತ ಮೆಸೇಜ್‌ನಲ್ಲಿ ಹುಡ್ಗೀರಿಗೆ ಯಾವ್ ರೀತಿಯಲ್ಲಿ ಅಶ್ಲೀಲ ಪ್ರಶ್ನೆ ಮಾಡ್ತಿದ್ದ ಅನ್ನೋದ್ ಇಲ್ಲಿದೆ ನೋಡಿ.
ಕೊಳಕು ಸ್ವಾಮಿ ಪ್ರಶ್ನೆಗಳು!
ನೀವು ನಿಮ್ಮ ಗೆಳೆಯನ ಜೊತೆ ದೈಹಿಕ ಸಂಪರ್ಕ ಹೊಂದಿದ್ದೀರಾ?
ನಿಮ್ಮನ್ನ ಸಂಪರ್ಕ ಮಾಡುವ ವೇಳೆ ಕಾಂಡೋಮ್ ಬಳಸಬೇಕಾ?
ನೀವು ಪ್ರತಿ ನಿತ್ಯ ಯಾವ ಸಮಯದಲ್ಲಿ ಸ್ನಾನ ಮಾಡುತ್ತೀರಿ?
ನನ್ನ ಜೊತೆ ನೀವು ವಿದೇಶಿ ಪ್ರವಾಸಕ್ಕೆ ಬರಲು ಸಿದ್ಧರಿದ್ದೀರಾ?
ನೀವು ಬಾಯ್‌ಫ್ರೆಂಡ್ ಹೊಂದಿದ್ದೀರೋ ಇಲ್ವೋ ನಿಜ ಹೇಳಿ?
ನಾನು ನಿನ್ನನ್ನ ತುಂಬಾ ಪ್ರೀತಿಸುತ್ತೇನೆ, ನೀನೇ ನನ್ನ ಸ್ವೀಟಿ!
ನನ್ನ ರೂಮ್‌ಗೆ ಬರ್ತಿಯಾ? ನಾನು ಸಹಾಯ ಮಾಡ್ತೀನಿ!
ಸ್ವಾಮಿ ಕೇಳ್ತಾ ಇದ್ದ ಕೊಳಕು ಪ್ರಶ್ನೆ ಅಂದ್ರೆ, ನೀವು ನಿಮ್ಮ ಗೆಳೆಯನ ಜೊತೆ ದೈಹಿಕ ಸಂಪರ್ಕ ಹೊಂದಿದ್ದೀರಾ? ಅಂತ ಕೇಳಿದ್ದ. ಅಷ್ಟೇ ಅಲ್ಲ, ತಾನು ನಿನ್ನನ್ನ ಸಂಪರ್ಕ ಮಾಡುವಾ ಸೇಫ್ಟಿಗಾಗಿ ಕಾಂಡೋಮ್ ಬಳಕೆ ಮಾಡ್ಬೇಕಾ ಅಂತ ಪ್ರಶ್ನೆ ಮಾಡ್ತಿದ್ದ. ನೀವು ಪ್ರತಿ ನಿತ್ಯ ಯಾವ ಸಮಯದಲ್ಲಿ ಸ್ನಾನ ಮಾಡುತ್ತೀರಿ? ಅದನ್ನ ನನಗೆ ಹೇಳಿ ಅಂತ ಕೇಳ್ತಿದ್ದ. ಹಾಗೇ ನನ್ನ ಜೊತೆ ನೀವು ವಿದೇಶಿ ಪ್ರವಾಸಕ್ಕೆ ಬರಲು ಸಿದ್ಧರಿದ್ದೀರಾ? ನೀವು ಒಂದು ರೂಪಾಯಿ ವೆಚ್ಚ ಮಾಡೋದು ಬೇಡ, ಎಲ್ಲವನ್ನು ನಾನೇ ನೋಡಿಕೊಳ್ತೀನಿ ಅಂತಿದ್ದ. ಹಾಗೇ ನೀವು ಬಾಯ್‌ಫ್ರೆಂಡ್ ಹೊಂದಿದ್ದೀರೋ ಇಲ್ವೋ ನಿಜ ಹೇಳಿ? ಅಂತ ಪರಿಪರಿಯಾಗಿ ಆರಂಭದಲ್ಲಿಯೇ ಕೇಳ್ತಿದ್ದ. ಅದೆಲ್ಲ ಕೇಳಿ ಆದ್ಮೇಲೆ ನಾನು ನಿನ್ನನ್ನ ತುಂಬಾ ಪ್ರೀತಿಸುತ್ತೇನೆ, ನೀನೇ ನನ್ನ ಸ್ವೀಟಿ ಅಂತ ಹೇಳ್ತಿದ್ದ. ಅಂತಿಮವಾಗಿ ನನ್ನ ರೂಮ್‌ಗೆ ಬರ್ತಿಯಾ? ನಾನು ಸಹಾಯ ಮಾಡ್ತೀನಿ ಅಂತ ಹೇಳ್ತಿದ್ದಂತೆ ಈ ಸ್ವಾಮಿ.
ಖಾವಿಧಾರಿ ಸ್ವಾಮಿಯ ಪ್ರಶ್ನೆಗಳನ್ನ ನೋಡ್ತಾ ಹೋದ್ರೆ ಆತನ ಮನಸ್ಥಿತಿ ಎಂಥಾದ್ದು ಅನ್ನೋದು ಯಾರಿಗೆ ಆದ್ರೂ ಅರ್ಥವಾಗುತ್ತೆ. ಹಾಗೇ ಈತವೊಬ್ಬ ಸ್ವಾಮಿ ಅಲ್ಲ ಕೊಳಕು ಸ್ವಾಮಿ ಅನ್ನೋದು ಪಕ್ಕಾ ಗೋಚರಿಸುತ್ತೆ. ಒಂದ್ ವೇಳೆ ತನ್ನ ಪ್ರಶ್ನೆಗಳಿಗೆ ಉತ್ತರ ನೀಡದೇ ಹೋದ್ರೆ ಬೆದರಿಕೆ ಹಾಕ್ತಾ ಇದ್ದ, ತನ್ನ ರೂಮ್‌ಗೆ ಬರಲು ನಿರಾಕರಿಸಿದ್ರೆ ಧಮ್ಕಿ ಹಾಕ್ತಿದ್ದ ಅಂತಾನೂ ಹೇಳಲಾಗ್ತಿದೆ. ಆತನ ಬೆದರಿಕೆಗೆ ಅಂಜಿ ಅದೆಷ್ಟೋ ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯಕ್ಕೆ ಅನಿವಾರ್ಯವಾಗಿ ತುತ್ತಾಗಿದ್ದಾರೆ ಅನ್ನೋ ಸ್ಫೋಟಕ ವಿಚಾರಗಳು ಹೊರಬರ್ತಿವೆ. ಇನ್ನು ಸ್ವಾಮಿ ಕಾರ್ಯಕ್ಕಾಗಿಯೇ ಕಾಲೇಜಿನಲ್ಲಿ ಕಟ್ಟಿಕೊಂಡಿದ್ದ ಲೇಡಿಗ್ಯಾಂಗ್‌ನ ಕಾರ್ಯ ಶಾಕ್ ನೀಡುವಂತಿದೆ. ಆರ್ಥಿಕವಾಗಿ ದುರ್ಬಲವಾಗಿರೋ ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡೋದ್ರಲ್ಲಿಯೂ ರಹಸ್ಯವಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.