/newsfirstlive-kannada/media/media_files/2025/09/05/airgun-firing022-2025-09-05-13-26-46.jpg)
ಏರ್ ಗನ್ ಹಿಡಿದಿದ್ದ ಯುವಕನ ಬಳಿ ಹೋಗಿ ಬಾಲಕನೊಬ್ಬ ಟ್ರಿಗರ್ ಒತ್ತಿದ್ದಾನೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಮನೆಯ ಮುಂದೆ ಮಗು ಆಟವಾಡುತ್ತಿದ್ದ ವೇಳೆ ಅವಘಢ ಸಂಭವಿಸಿದೆ. ಮಗು ಆಟವಾಡುವ ವೇಳೆ ಏರ್ ಗನ್ ನಿಂದ ಗುಂಡು ಹಾರಿದೆ. ಈ ಏರ್ ಗನ್ ಗುಂಡು ಮಗುಗೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದೆ. ಸೋಮನಳ್ಳಿಯ ರಾಘವೇಂದ್ರ ಕೇಶವ ಹೆಗಡೆ ತೋಟದಲ್ಲಿ ಈ ಘಟನೆ ನಡೆದಿದೆ. ಏರ್ ಗನ್ ಗುಂಡು ತಗುಲಿ 9 ವರ್ಷದ ಮಗು ಸಾವನ್ನಪ್ಪಿದೆ. 7 ವರ್ಷದ ಮಗು ಹಾಗೂ 9 ವರ್ಷದ ಮಗು ಆಟವಾಡುತ್ತಿದ್ದ ವೇಳೆ ಘಟನೆ ನಡೆದಿದೆ. ಮೃತಪಟ್ಟ ಬಾಲಕ ಮತ್ತು ಅವನ ಕುಟುಂಬ ಹಾವೇರಿ ಜಿಲ್ಲೆಯ ತಿಪಟೂರಿನವರು. ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ತೋಟದಲ್ಲಿದ್ದ ಸಿಸಿಟಿವಿಯಲ್ಲಿ ಮಗುಗೆ ಏರ್ ಗನ್ ಗುಂಡು ತಗುಲುವ ದೃಶ್ಯ ರೆಕಾರ್ಡ್ ಆಗಿದೆ. ಸ್ಥಳದಲ್ಲೇ ಕೆಳಕ್ಕೆ ಉರುಳಿ ಬಿದ್ದು ಮಗು ಸಾವನ್ನಪ್ಪಿದೆ. ಈ ದೃಶ್ಯಗಳು ಶಾಕಿಂಗ್ ಆಗಿವೆ. ಕ್ಷಣಮಾತ್ರದಲ್ಲಿ ಮಗುವಿನ ಪ್ರಾಣಪಕ್ಷ ಹಾರಿ ಹೋಗಿದೆ.
ಯುವಕನೊಬ್ಬ ಏರ್ ಗನ್ ಹಿಡಿದು, ಮನೆಯ ಬಳಿ ಬಂದಿದ್ದಾನೆ. ಆಗ ಮೂವರು ಮಕ್ಕಳು ಆ ಯುವಕನ ಬಳಿಗೆ ಹೋಗಿದ್ದಾರೆ. ಓರ್ವ ಬಾಲಕ, ಯುವಕನ ಕೈಯಲ್ಲಿದ್ದ ಏರ್ ಗನ್ ನ ಹತ್ತಿರ ಹೋಗಿ ಟ್ರಿಗರ್ ಒತ್ತಿದ್ದಾನೆ. ಇದರಿಂದಾಗಿ ಏರ್ ಗನ್ ನಿಂದ ಗುಂಡು ಸಿಡಿದಿದೆ. ಈ ಗುಂಡು ನೇರವಾಗಿ ಎದುರಿಗೆ ಇದ್ದ ಮತ್ತೊಬ್ಬ ಬಾಲಕನ ಎದೆಯೊಕ್ಕಿದೆ. ತಕ್ಷಣವೇ ಒಂದೆರೆಡು ಅಡಿ ಪಕ್ಕಕ್ಕೆ ಬಂದು ಬಾಲಕ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.
7 ವರ್ಷದ ತಮ್ಮನೇ 9 ವರ್ಷದ ಅಣ್ಣನ ಮೇಲೇ ಗೊತ್ತಿಲ್ಲದೇ ಏರ್ ಗನ್ ನಿಂದ ಗುಂಡು ಹಾರಿಸಿದ್ದಾನೆ. ಇದರಲ್ಲಿ ಏರ್ ಗನ್ ಹಿಡಿದಿದ್ದ ಯುವಕನ ಪಾತ್ರ ಕಂಡು ಬರುತ್ತಿಲ್ಲ. ಆದರೇ, ಏರ್ ಗನ್ ಹಿಡಿದು ಮಕ್ಕಳ ಬಳಿ ಬರುವಾಗ ಸ್ಪಲ್ಪ ಎಚ್ಚರಿಕೆ, ಜಾಗರೂಕತೆ ವಹಿಸಬೇಕು ಅನ್ನೋದು ಈ ವಿಡಿಯೋ ನೋಡಿದರೇ, ಸ್ಪಷ್ಟವಾಗುತ್ತೆ.
ಮನೆಯಲ್ಲಿ ಗನ್, ಬಂದೂಕುಗಳನ್ನು ಜನರು ಸ್ವರಕ್ಷಣೆಗಾಗಿ ಇಟ್ಟುಕೊಳ್ಳುತ್ತಾರೆ. ಆದರೇ, ಅವುಗಳ ಬಳಕೆ ಮಾಡುವಾಗ ಹೆಚ್ಚಿನ ಎಚ್ಚರಿಕೆ ವಹಿಸಲೇಬೇಕು. ಇಲ್ಲದಿದ್ದರೇ, ಆಕಸ್ಮಿಕವಾಗಿ ಗುಂಡು ಹಾರಿದರೂ, ಜನರ ಪ್ರಾಣ ಪಕ್ಷಿ ಹಾರಿ ಹೋಗುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.