/newsfirstlive-kannada/media/media_files/2025/12/27/maglev-train-still-2025-12-27-18-01-09.png)
ಚೀನಾದ ಶಾಂಘೈನಲ್ಲಿ ಕೇವಲ 2 ಸೆಕೆಂಡುಗಳಲ್ಲಿ 700 ಕಿ.ಮೀ ವೇಗವನ್ನು ತಲುಪಬಲ್ಲ ಮತ್ತು ಬರಿಗಣ್ಣಲ್ಲಿ ಟ್ರ್ಯಾಕ್ ಮಾಡಲು ಆಗದಷ್ಟು ವೇಗವಾಗಿ ಚಲಿಸುವ ತನ್ನ ಅತ್ಯಂತ ವೇಗದ ಮ್ಯಾಗ್ಲೆವ್ ರೈಲನ್ನು ಪರೀಕ್ಷೆ ಮಾಡುವ ಮೂಲಕ ಚೀನಾ ಮತ್ತೊಂದು ಹೊಸ ವಿಶ್ವ ದಾಖಲೆಯತ್ತ ಮುಖ ಮಾಡಿದೆ. ಈ ರೈಲು ಹಳಿಯ ಮೇಲೆ ಸೂಪರ್ ಕಂಡಕ್ಟಿಂಗ್ ಮ್ಯಾಗ್ನೆಟ್​ ಬಳಸಿಕೊಂಡು ಯಾವುದೇ ಭೌತಿಕ ಸಂಪರ್ಕವಿಲ್ಲದೆ, ತೇಲುವ ರೀತಿ ರೈಲನ್ನು ತಯಾರಿಸಲಾಗಿದೆ.
ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರು ಈ ಪರೀಕ್ಷೆಯನ್ನು ನಡೆಸಿದ್ದು, ಸುಮಾರು 1,000 ಕೆಜಿ ತೂಕದ ಮ್ಯಾಗ್ನೆಟಿಕ್ ಲೆವಿಟೇಶನ್ ವಾಹನವನ್ನು ದಾಖಲೆಯ ವೇಗಕ್ಕೆ ಓಡಿಸಿದ್ದಾರೆ. ಈ ಪರೀಕ್ಷೆಯು 400 ಮೀಟರ್ ಮ್ಯಾಗ್ಲೆವ್ ಟ್ರ್ಯಾಕ್‌ನಲ್ಲಿ ನಡೆಯಿತು. ನಂತರ ರೈಲನ್ನು ಸುರಕ್ಷಿತವಾಗಿ ನಿಲ್ಲಿಸಲಾಯಿತು, ಇದುವರೆಗೆ ಪರೀಕ್ಷಿಸಲ್ಪಟ್ಟ ಅತ್ಯಂತ ವೇಗದ ಸೂಪರ್ ಕಂಡಕ್ಟಿಂಗ್ ಎಲೆಕ್ಟ್ರಿಕ್ ರೈಲು ಇದಾಗಿದೆ.
ಪ್ರಯೋಗದ ವೀಡಿಯೊದಲ್ಲಿ ರೈಲು ಬೆಳ್ಳಿಯ ಕೋಲ್ಮಿಂಚಂತೆ ಹಾರಿಹೋಗುವುದನ್ನು ತೋರಿಸುತ್ತದೆ. ಚೀನಾದ ಅತಿ-ವೇಗದ ಸಾರಿಗೆ ಸಂಶೋಧನೆಗೆ ಒಂದು ಪ್ರಮುಖ ಮತ್ತು ದಿಟ್ಟ ಹೆಜ್ಜೆಯನ್ನು ಸೂಚಿಸುತ್ತದೆ. ಇದೇ ಕೋರ್ ತಂತ್ರಜ್ಞಾನವು ಅಂತಿಮವಾಗಿ ಬಾಹ್ಯಾಕಾಶ ಉಡಾವಣಾ ವ್ಯವಸ್ಥೆಯ ಮತ್ತು ನಿರ್ವಾತ ಕೊಳವೆ ಸಾರಿಗೆ ಪರಿಕಲ್ಪನೆಗಳ ಯೋಜನೆಗಳಲ್ಲಿ ಬೆಂಬಲಿಸಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.
/filters:format(webp)/newsfirstlive-kannada/media/media_files/2025/12/27/capture-2025-12-27-18-04-55.png)
ಹೈಪರ್​ ಲೂಪ್​ ಮ್ಯಾಗ್ಲೆವ್​ ರೈಲಿನ ವಿಶೇಷತೆ ಏನು?
ಇದು ಅಲ್ಟ್ರಾ- ಹೈ - ಸ್ಪೀಡ್ ವಿದ್ಯುತ್ಕಾಂತೀಯ ಪ್ರೊಪಲ್ಷನ್, ಎಲೆಕ್ಟ್ರಿಕಲ್​ ಸಸ್ಪೆಂಕ್ಷನ್​ ಗೈಡೆನ್ಸ್​, ಅಸ್ಥಿರ ಹೈ-ಪವರ್ ಎನರ್ಜಿ ಸ್ಟೋರೇಜ್ ಇನ್ವರ್ಶನ್ ಮತ್ತು ಹೈ-ಫೀಲ್ಡ್ ಸೂಪರ್ ಕಂಡಕ್ಟಿಂಗ್ ಮ್ಯಾಗ್ನೆಟ್‌ಗಳು ಸೇರಿದಂತೆ ಪ್ರಮುಖ ತಾಂತ್ರಿಕ ಸವಾಲುಗಳನ್ನು ಪರಿಹರಿಸುತ್ತದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯಲ್ಲಿ ತಿಳಿಸಲಾಗಿದೆ.ಈ ಕ್ಷೇತ್ರದ ಫಲಿತಾಂಶವು ಚೀನಾವನ್ನು ಅತಿ-ವೇಗದ ಮ್ಯಾಗ್ಲೆವ್ ಅಭಿವೃದ್ಧಿಯಲ್ಲಿ ವಿಶ್ವದ ಅಗ್ರ ಸ್ಥಾನದಲ್ಲಿ ನಿಲ್ಲುವಂತೆ ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೈಪರ್‌ಲೂಪ್-ಶೈಲಿಯ ಸಾರಿಗೆ ಎಂದು ಕರೆಯಲ್ಪಡುವ ವ್ಯಾಕ್ಯೂಮ್-ಪೈಪ್ ಮ್ಯಾಗ್ಲೆವ್‌ನಂತಹ ಹೊಸ ಹೊಸ ಆವಿಷ್ಕಾರಗಳು ಭವಿಷ್ಯದ ವ್ಯವಸ್ಥೆಗಳಿಗೆ ಬಾಗಿಲುಗಳಾಗಿ ತೆರೆಯುತ್ತವೆ ಎಂದು ನೆಟ್‌ವರ್ಕ್ ಹೇಳಿದೆ.
ಈ ಯೋಜನೆ ಹಿಂದಿರುವ ತಂಡವು ಸತತ 10 ವರ್ಷಗಳಿಂದ ಕೆಲಸ ಮಾಡಿದೆ. ಜನವರಿಯಲ್ಲಿ, ಅವರು ಅದೇ ಪರೀಕ್ಷಾ ಸಾಲಿನಲ್ಲಿ 648 ಕಿಮೀ/ಗಂ (403 ಮೈಲು) ಗರಿಷ್ಠ ವೇಗವನ್ನು ತಲುಪಿದ್ದರು, ಇದೀಗ ಇದೇ ಕಾರ್ಯದಲ್ಲಿ ಗಮನಾರ್ಹವಾಗಿ ಏರಿಕೆ ಕಂಡಿದೆ.
ಈ ಅತಿ-ವೇಗದ ಅತಿ-ವಾಹಕ ವಿದ್ಯುತ್ ಮ್ಯಾಗ್ಲೆವ್​ನ ಯಶಸ್ವಿ ಪರೀಕ್ಷೆ, ಚೀನಾದ ಅತಿ-ವೇಗದ ಸಾರಿಗೆಯ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಎಂದು ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಲಿ ಜೀ ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us