Advertisment

ಭಾರತಕ್ಕೆ ಅಪರೂಪದ ಖನಿಜ, ಆಯಸ್ಕಾಂತ ಪೂರೈಸಲು ಚೀನಾದ ಷರತ್ತು! ಆ ಷರತ್ತು ಅಮೆರಿಕಾಕ್ಕೆ ಅಪತ್ತು, ಹೇಗೆ ಗೊತ್ತಾ?

ಭಾರತಕ್ಕೆ ಅಪರೂಪದ ಖನಿಜ, ಆಯಸ್ಕಾಂತಗಳ ರಫ್ತಿಗೆ ಚೀನಾ ದೇಶವು ಷರತ್ತು ವಿಧಿಸಿದೆ. ಭಾರತಕ್ಕೆ ಪೂರೈಸಿದ ಅಪರೂಪದ ಖನಿಜ, ಆಯಸ್ಕಾಂತಗಳನ್ನು ಅಮೆರಿಕಾಕ್ಕೆ ಮರು ರಫ್ತು ಮಾಡಬಾರದು ಎಂದು ಷರತ್ತು ವಿಧಿಸಿದೆ. ಅಮೆರಿಕಾದ ಮೇಲೆ ಚೀನಾ ಪ್ರತೀಕಾರ ತೀರಿಸಿಕೊಳ್ಳುತ್ತಿದೆ.

author-image
Chandramohan
RARE EARTH MINERALS
Advertisment

ಭಾರತ,  ಅಮೆರಿಕಾ, ಯೂರೋಪ್ ಸೇರಿದಂತೆ ವಿಶ್ವದ ಪ್ರಮುಖ ದೇಶಗಳಿಗೆ ಈಗ ಅಪರೂಪದ ಖನಿಜಗಳು, ಅಯಸ್ಕಾಂತಗಳ ಕೊರತೆ ಎದುರಾಗಿದೆ. ಆದರೇ, ಚೀನಾ ದೇಶದಲ್ಲಿ ಮಾತ್ರವೇ ಅಪರೂಪದ ಖನಿಜ, ಆಯಸ್ಕಾಂತಗಳು  ಹೇರಳವಾಗಿವೆ. ಆದರೇ, ಚೀನಾ ದೇಶವು ಭಾರತ, ಅಮೆರಿಕಾ, ಯೂರೋಪ್  ದೇಶಗಳಿಗೂ ಅಪರೂಪದ ಖನಿಜ, ಆಯಸ್ಕಾಂತಗಳ ರಫ್ತು ಅನ್ನೇ ನಿಲ್ಲಿಸಿಬಿಟ್ಟಿದೆ. ಬೇರೆ ದೇಶಗಳ ವಿರುದ್ಧ ಬ್ಲಾಕ್ ಮೇಲ್ ಅಸ್ತ್ರವಾಗಿ  ಅಪರೂಪದ ಖನಿಜ, ಆಯಸ್ಕಾಂತಗಳನ್ನು ಬಳಕೆ ಮಾಡುತ್ತಿದೆ. 
ಈ ಅಪರೂಪದ ಖನಿಜ, ಆಯಸ್ಕಾಂತಗಳನ್ನು ಮುಖ್ಯವಾಗಿ ಇವಿ ವಾಹನಗಳು, ರಕ್ಷಣಾ ಉಪಕರಣಗಳ ತಯಾರಿಕೆ, ಎಲೆಕ್ಟ್ರಿಕ್ ಬಲ್ಪ್, ಲ್ಯಾಪ್ ಟಾಪ್, ಕಂಪ್ಯೂಟರ್, ಮೊಬೈಲ್, ಸೋಲಾರ್ ಪ್ಯಾನೆಲ್ ಸೇರಿದಂತೆ ಬಹಳಷ್ಟು ಉತ್ಪನ್ನಗಳ ತಯಾರಿಕೆಗೆ ಅತ್ಯಾಗತ್ಯವಾಗಿ ಬಳಕೆ ಮಾಡಲಾಗುತ್ತೆ. ಅಪರೂಪದ ಖನಿಜ, ಆಯಸ್ಕಾಂತ ಇಲ್ಲದೇ ಈ ಯಾವುದನ್ನು ಉತ್ಪಾದಿಸಲು ಸಾಧ್ಯವೇ ಇಲ್ಲ.  ಹೀಗಾಗಿ ಜಗತ್ತು ಈಗ ಚೀನಾಕ್ಕೆ ಅಪರೂಪದ ಖನಿಜ, ಆಯಸ್ಕಾಂತಗಳನ್ನು ಪೂರೈಸುವಂತೆ ಮುಗಿಬಿದ್ದಿದೆ. 
ಚೀನಾ ದೇಶವು ಅಪರೂಪದ ಖನಿಜ, ಆಯಸ್ಕಾಂತಗಳನ್ನು ಭಾರತಕ್ಕೆ ರಫ್ತು ಮಾಡಲು ಒಪ್ಪಿಕೊಂಡಿದೆ. ಆದರೇ ಕೆಲವೊಂದು ಷರತ್ತು ವಿಧಿಸಿದೆ. ಭಾರತಕ್ಕೆ ರಫ್ತು ಮಾಡಿದ ಅಪರೂಪದ ಖನಿಜ, ಆಯಸ್ಕಾಂತಗಳನ್ನು ಭಾರತದಲ್ಲಿ ಸ್ವದೇಶಿ ಉತ್ಪಾದನೆ, ಬಳಕೆಗಾಗಿ ಬಳಸಿಕೊಳ್ಳಬೇಕು. ಚೀನಾ ರಫ್ತು ಮಾಡಿದ ಅಪರೂಪದ ಖನಿಜ, ಆಯಸ್ಕಾಂತಗಳಿಂದ ಉತ್ಪಾದಿಸಿದ  ಉತ್ಪನ್ನಗಳನ್ನು ಅಮೆರಿಕಾಕ್ಕೆ ರಫ್ತು ಮಾಡಬಾರದು, ಈ ಬಗ್ಗ ಭಾರತವು ಲಿಖಿತ ಭರವಸೆಯನ್ನು ಚೀನಾಕ್ಕೆ ನೀಡಬೇಕು. ಚೀನಾ ರಫ್ತು ಮಾಡಿದ ಅಪರೂಪದ ಖನಿಜ, ಆಯಸ್ಕಾಂತಗಳಿಂದ ತಯಾರಾದ ಉತ್ಪನ್ನಗಳು ಅಮೆರಿಕಾಕ್ಕೆ ಮರು ರಫ್ತು ಆಗದಂತೆ ನೋಡಿಕೊಳ್ಳುವ ಲಿಖಿತ ಭರವಸೆ ನೀಡಬೇಕೆಂದು ಪಟ್ಟು ಹಿಡಿದಿದೆ. 
ಚೀನಾದ ಕಂಪನಿಗಳಿಂದ ಆಮದು ಮಾಡಿಕೊಳ್ಳುವ ಭಾರೀ ಅಪರೂಪದ ಭೂಮಿಯ ಆಯಸ್ಕಾಂತಗಳನ್ನು ದೇಶೀಯ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುವುದು ಎಂದು ಭಾರತವು ಲಿಖಿತ ಭರವಸೆಗಳನ್ನು ನೀಡಬೇಕೆಂದು ಚೀನಾ ಬಯಸುತ್ತಿದೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ. 

Advertisment

ಚೀನಾ ತನ್ನ 42 ಸದಸ್ಯ ರಾಷ್ಟ್ರಗಳಲ್ಲಿ ದ್ವಿ-ಬಳಕೆಯ ತಂತ್ರಜ್ಞಾನಗಳು ಮತ್ತು ಸರಕುಗಳ ರಫ್ತನ್ನು ನಿಯಂತ್ರಿಸುವ ವಾಸ್ಸೆನಾರ್ ಒಪ್ಪಂದದ ಅಡಿಯಲ್ಲಿರುವಂತೆಯೇ ರಫ್ತು ನಿಯಂತ್ರಣ ಬದ್ಧತೆಗಳನ್ನು ಬಯಸುತ್ತಿದೆ.

ಭಾರತವು ವಾಸ್ಸೆನಾರ್ ಒಪ್ಪಂದಕ್ಕೆ ಸಹಿ ಹಾಕಿದ್ದರೂ, ಚೀನಾ ಸಹಿ ಹಾಕಿಲ್ಲ. ಆದಾಗ್ಯೂ, ಯಾವುದೇ ರಫ್ತು ಪುನರಾರಂಭವಾಗುವ ಮೊದಲು ಭಾರತವು ಇದೇ ರೀತಿಯ ಅಂತಿಮ-ಬಳಕೆ ಪ್ರಮಾಣೀಕರಣ ನಿಯಮಗಳನ್ನು ಅನುಸರಿಸಬೇಕೆಂದು ಬೀಜಿಂಗ್ ಬಯಸಿದೆ ಎಂದು ವರದಿಯಾಗಿದೆ. ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಆಯಸ್ಕಾಂತಗಳನ್ನು ಬಳಸಲಾಗುವುದಿಲ್ಲ ಎಂದು ದೃಢೀಕರಿಸುವ ಅಂತಿಮ-ಬಳಕೆದಾರ ಪ್ರಮಾಣಪತ್ರಗಳನ್ನು (EUC) ಭಾರತೀಯ ಸಂಸ್ಥೆಗಳು ಈಗಾಗಲೇ ಸಲ್ಲಿಸಿವೆ ಎಂದು ಸುದ್ದಿ ವರದಿ ತಿಳಿಸಿದೆ.

ರಫ್ತು ನಿಯಂತ್ರಣ ಖಾತರಿಗಳಿಗಾಗಿ ಚೀನಾದ ಬೇಡಿಕೆಯನ್ನು ಭಾರತ ಇನ್ನೂ ಒಪ್ಪಿಕೊಂಡಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದನ್ನು ಸುದ್ದಿ ವರದಿ ಉಲ್ಲೇಖಿಸಿದೆ.
ಚೀನಾ ವಿಶ್ವದ ಭಾರೀ ಅಪರೂಪದ ಭೂಮಿಯ ಆಯಸ್ಕಾಂತಗಳಲ್ಲಿ ಸುಮಾರು 90 ಪ್ರತಿಶತವನ್ನು ಉತ್ಪಾದಿಸುತ್ತದೆ.   ಜಾಗತಿಕ ಸಂಸ್ಕರಣಾ ಸಾಮರ್ಥ್ಯದಲ್ಲಿ ಪ್ರಾಬಲ್ಯ ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ, ಬೀಜಿಂಗ್ ದೇಶ-ನಿರ್ದಿಷ್ಟ ರಫ್ತು ಡೇಟಾವನ್ನು ತಡೆಹಿಡಿಯುವ ಮೂಲಕ ಪಾರದರ್ಶಕತೆಯನ್ನು ಕಡಿಮೆ ಮಾಡಿದೆ.  ವಿಶೇಷವಾಗಿ ಅಮೆರಿಕಾದೊಂದಿಗೆ ವ್ಯಾಪಾರ ಮಾತುಕತೆಗಳಲ್ಲಿ ಅದರ ಹತೋಟಿಯನ್ನು ಹೆಚ್ಚಿಸಿದೆ.

Advertisment

RARE EARTH MINERALS02


ಭಾರತದ ವಿದ್ಯುತ್ ಚಾಲಿತ ವಾಹನಗಳು, ಉತ್ಪಾದನಾ ವಲಯಗಳ ಮೇಲೆ ಪರಿಣಾಮ


ಭಾರೀ ಅಪರೂಪದ ಭೂಮಿಯ ಆಯಸ್ಕಾಂತಗಳ ಕೊರತೆಯು ಭಾರತೀಯ ಕೈಗಾರಿಕೆಗಳ ಮೇಲೆ, ವಿಶೇಷವಾಗಿ ವಿದ್ಯುತ್ ವಾಹನ (ಇವಿ) ತಯಾರಕರ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ. ವಿದ್ಯುತ್ ಕಾರುಗಳು, ಬಸ್ಸುಗಳು ಮತ್ತು ಟ್ರಕ್‌ಗಳಲ್ಲಿ ಮೋಟಾರ್‌ಗಳನ್ನು ಉತ್ಪಾದಿಸಲು ಹಾಗೂ ನವೀಕರಿಸಬಹುದಾದ ಇಂಧನ, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪನ್ನಗಳಿಗೆ ಈ ಆಯಸ್ಕಾಂತಗಳು ನಿರ್ಣಾಯಕವಾಗಿವೆ.
ಸೆಪ್ಟೆಂಬರ್‌ನಲ್ಲಿ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ನಂತರ ಚೀನಾ ಭಾರತಕ್ಕೆ ಹಗುರವಾದ ಅಪರೂಪದ ಭೂಮಿಯ ಆಯಸ್ಕಾಂತಗಳ ಸರಬರಾಜನ್ನು ಪುನರಾರಂಭಿಸಿದರೂ, ಭಾರೀ ಭೂಮಿಯ ಆಯಸ್ಕಾಂತಗಳ ಸಾಗಣೆ ಸ್ಥಗಿತಗೊಂಡಿದೆ. ಈ ವಿಳಂಬವು ದೊಡ್ಡ ವಿದ್ಯುತ್ ವಾಹನಗಳ ಉತ್ಪಾದನೆಯನ್ನು ಅಡ್ಡಿಪಡಿಸಿದೆ ಎಂದು ಉದ್ಯಮದ ಕಾರ್ಯನಿರ್ವಾಹಕರು ಹೇಳಿದ್ದಾರೆ ಎಂದು ಸುದ್ದಿ ವರದಿ ತಿಳಿಸಿದೆ.
ಒಟ್ಟಿನಲ್ಲಿ ಚೀನಾ ದೇಶವು ಭಾರತಕ್ಕೆ ವಿಧಿಸಿರುವ ಷರತ್ತು ಅಮೆರಿಕಾಕ್ಕೆ ಅಪತ್ತು  ಅನ್ನು ತರಲಿದೆ. ಅಮೆರಿಕಾದಲ್ಲೂ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಗೆ ಹಿನ್ನಡೆಯಾಗಲಿದೆ.
ಭಾರತವು ಕೂಡ ಈಗಾಗಲೇ ದೇಶೀಯವಾಗಿ ಅಪರೂಪದ ಖನಿಜ, ಆಯಸ್ಕಾಂತಗಳ ಉತ್ಪಾದನೆಗೆ ಕ್ರಮ ಕೈಗೊಂಡಿದೆ. ಅಪರೂಪದ ಖನಿಜ, ಆಯಸ್ಕಾಂತ ಉತ್ಪಾದಿಸುವ ಕಂಪನಿಗಳಿಗೆ ಇನ್ಸೇಟಿಂವ್ ನೀಡಲು ಕೇಂದ್ರದ ಭಾರಿ ಕೈಗಾರಿಕಾ ಇಲಾಖೆ ತೀರ್ಮಾನ ಕೈಗೊಂಡಿದೆ. ಜೊತೆಗೆ ಭಾರತವು ಕೂಡ ಅಪರೂಪದ ಖನಿಜ, ಆಯಸ್ಕಾಂತಗಳನ್ನು ಹೆಚ್ಚು ಹೆಚ್ಚು ಉತ್ಪಾದಿಸಿ ಸ್ಟಾಕ್ ಮಾಡಿಕೊಳ್ಳಲು ನಿರ್ಧರಿಸಿದೆ. ಭಾರತದಲ್ಲೂ ಕೆಲವು ರಾಜ್ಯಗಳಲ್ಲಿ ಈ ಅಪರೂಪದ ಖನಿಜ, ಆಯಸ್ಕಾಂತ ಲಭ್ಯವಿದೆ. ಇಷ್ಟು ದಿನಗಳ ಕಾಲ ಸರ್ಕಾರದ ಒಂದೇ ಕಂಪನಿ ಇವುಗಳನ್ನು ಉತ್ಪಾದಿಸುತ್ತಿತ್ತು.  ಈಗ ಖಾಸಗಿ ಕಂಪನಿಗಳಿಗೂ ಅಪರೂಪದ ಖನಿಜ, ಆಯಸ್ಕಾಂತಗಳ ಉತ್ಪಾದನೆಗೆ ಅವಕಾಶ ಕೊಡಲಾಗುತ್ತಿದೆ. ಈ ಮೂಲಕ ಭಾರತದಲ್ಲೂ ಹೆಚ್ಚೆಚ್ಚು ಉತ್ಪಾದನೆಯಾಗಬೇಕು ಎಂಬುದಕ್ಕೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಅಪರೂಪದ ಖನಿಜ, ಆಯಸ್ಕಾಂತಗಳ ವಿಷಯದಲ್ಲೂ ಆತ್ಮನಿರ್ಭರ ಆಗಬೇಕೆಂದು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RARE EARTH METAL SUPPLY CHINA CONDITIONS
Advertisment
Advertisment
Advertisment