/newsfirstlive-kannada/media/media_files/2025/09/12/cinema-ticket-price-fix02-2025-09-12-18-20-18.jpg)
ಸಿನಿಮಾ ಟಿಕೆಟ್ ದರ 200 ರೂಪಾಯಿ ಮಾತ್ರ!
ರಾಜ್ಯದ ಸಿನಿಮಾ ಪ್ರಿಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯದ ಎಲ್ಲ ಥಿಯೇಟರ್, ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ಟಿಕೆಟ್ ದರ ಗರಿಷ್ಠ 200 ರೂಪಾಯಿ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ವರ್ಷದ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ, ಎಲ್ಲ ಥಿಯೇಟರ್, ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ಟಿಕೆಟ್ ದರವನ್ನು ಗರಿಷ್ಠ 200 ರೂಪಾಯಿ ನಿಗದಿಪಡಿಸುವುದಾಗಿ ಘೋಷಿಸಿದ್ದರು. ಬಜೆಟ್ ಘೋಷಣೆ ಈಗ ಜಾರಿಯಾಗಿದೆ. ಹೊಸ 200 ರೂಪಾಯಿ ಗರಿಷ್ಠ ಟಿಕೆಟ್ ದರದ ನಿಯಮದ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಈ ಅಧಿಸೂಚನೆಯ ಗೆಜೆಟ್ ನೋಟೀಫಿಕೇಷನ್ ಪ್ರಕಟವಾಗುವುದು ಮಾತ್ರ ಬಾಕಿ ಇದೆ. ಗೆಜೆಟ್ ನೋಟೀಫಿಕೇಷನ್ ಪ್ರಕಟವಾದ ದಿನದಿಂದಲೇ 200 ರೂಪಾಯಿ ಟಿಕೆಟ್ ದರದ ನಿಯಮ ರಾಜ್ಯದಾದ್ಯಂತ ಜಾರಿಯಾಗುತ್ತದೆ.
ಶುಭ ಶುಕ್ರವಾರದಂದೇ ಸಿನಿಮಾ ಪ್ರೇಕ್ಷಕಕರಿಗೆ ಬಂಪರ್ ಸುದ್ದಿಯನ್ನು ರಾಜ್ಯ ಸರ್ಕಾರ ನೀಡಿದೆ. ಎಲ್ಲಾ ಚಿತ್ರಮಂದಿರಗಳಲ್ಲಿ 200 ರೂ ಟಿಕೆಟ್ ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಸಿನಿಮಾ ಟಿಕೆಟ್ ಬೆಲೆ ₹ 200 ಆಗಲಿದೆ. ಆದರೇ, ರಾಜ್ಯ ಸರ್ಕಾರದ ಈ ಆದೇಶದ ಪ್ರತಿ ಇನ್ನೂ ಥಿಯೇಟರ್, ಮಲ್ಟಿಪ್ಲೆಕ್ಸ್ ಮಾಲೀಕರಿಗೆ ತಲುಪಿಲ್ಲ. ಗೆಜೆಟ್ ನೋಟೀಫಿಕೇಷನ್ ಪ್ರಕಟವಾಗುವುದು ಮಾತ್ರ ಬಾಕಿ ಇದೆ. ಇನ್ನೂ ಒಂದೆರೆಡು ದಿನಗಳಲ್ಲಿ ಈ ಆದೇಶದ ಗೆಜೆಟ್ ನೋಟೀಫಿಕೇಷನ್ ಕೂಡ ಪ್ರಕಟವಾಗಬಹುದು.
ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವೊಮ್ಮೆ ಹೊಸ ಸಿನಿಮಾ ಬಿಡುಗಡೆಯಾದಾಗ ಸಿನಿಮಾ ಟಿಕೆಟ್ ದರ 500 ರೂಪಾಯಿಯಿಂದ 1 ಸಾವಿರ ರೂಪಾಯಿ , 2 ಸಾವಿರ ರೂಪಾಯಿಗೂ ಏರಿಕೆಯಾಗುತ್ತಾವೆ. ಬೇಕಾಬಿಟ್ಟಿಯಾಗಿ ಟಿಕೆಟ್ ದರ ವಸೂಲಿ ಮಾಡುವುದನ್ನು ತಡೆಯುವುದಕ್ಕಾಗಿ ರಾಜ್ಯ ಸರ್ಕಾರವೇ 200 ರೂಪಾಯಿ ಗರಿಷ್ಠ ದರ ನಿಗದಿಪಡಿಸಿ ಈಗ ಆದೇಶ ಹೊರಡಿಸಿದೆ.
ಈ ವರ್ಷದ ಜುಲೈ ತಿಂಗಳಲ್ಲೇ ಈ ಬಗ್ಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿ 15 ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿತ್ತು. ಆಕ್ಷೇಪಣೆಗಳು ಸಲ್ಲಿಕೆಯಾದ ಬಳಿಕ ಈಗ ಎಲ್ಲಿ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ಟಿಕೆಟ್ ದರ ಗರಿಷ್ಠ 200 ರೂಪಾಯಿ ಎಂದು ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.
ಆದರೇ, 75 ಸೀಟುಗಳು ಹಾಗೂ ಅದಕ್ಕಿಂತ ಕಡಿಮೆ ಸೀಟುಗಳಿರುವ ಬಹುಪರದೆಯ ಚಿತ್ರಮಂದಿರಗಳಿಗೆ ಗರಿಷ್ಠ 200 ರೂಪಾಯಿ ಟಿಕೆಟ್ ದರ ನಿಯಮ ಅನ್ವಯವಾಗಲ್ಲ. ಅವುಗಳನ್ನು ಮಾತ್ರ ಈ ನಿಯಮದಿಂದ ಹೊರಗಿಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.