/newsfirstlive-kannada/media/media_files/2025/08/19/archana-tiwari-missing-2025-08-19-19-59-31.jpg)
ನಿಗೂಢವಾಗಿ ನಾಪತ್ತೆಯಾಗಿರುವ ಅರ್ಚನಾ ತಿವಾರಿ
ಸಿವಿಲ್ ಜಡ್ಜ್ ಆಗುವ ಆಕಾಂಕ್ಷೆ ಇದ್ದ 29 ವರ್ಷದ ಯುವತಿ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಸುಂದರ ಯುವತಿ ಕಣ್ಮರೆಯಾಗಿದ್ದೇಗೆ ಎನ್ನುವುದೇ ಪೊಲೀಸರಿಗೆ ಯಕ್ಷಪ್ರಶ್ನೆಯಾಗಿದೆ. ಮಧ್ಯಪ್ರದೇಶದ ಇಂದೋರ್ ನಿಂದ ಕಟ್ನಿಗೆ ರೈಲಿನಲ್ಲಿ ಹೋದ ಯುವತಿ ಬಳಿಕ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಅರ್ಚನಾ ತಿವಾರಿ 12 ದಿನದ ಹಿಂದೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಕಟ್ನಿಗೆ ಹೋಗಲು ರೈಲು ಹತ್ತಿದ್ದಾರೆ.
ಅರ್ಚನಾ ತಿವಾರಿ ನೋಡಲು ಸುಂದರವಾಗಿರುವ ಯುವತಿ. ಯುವತಿಗೆ ಏನಾಯಿತು? ಹೇಗಿದ್ದಾರೆ? ಎಲ್ಲಿಗೆ ಹೋದರು ಎನ್ನುವ ಯಾವುದೇ ಮಾಹಿತಿಯೂ ಪೊಲೀಸರಿಗೂ ಸಿಕ್ಕಿಲ್ಲ. ಕುಟುಂಬಸ್ಥರಿಗೂ ಸಿಕ್ಕಿಲ್ಲ.
ಇಂದೋರ್ ನ ಅರ್ಚನಾ ತಿವಾರಿ ಕಾನೂನು ಪದವಿಧರೆ. ಸಿವಿಲ್ ಜಡ್ಜ್ ಆಗಬೇಕೆಂದು ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದರು. ಟ್ರೇನ್ ಹತ್ತಿದ ಬಳಿಕ ಟ್ರೇನ್ ಭೋಪಾಲ್ ತಲುಪಿದಾಗ, ತನ್ನ ತಾಯಿ ಜೊತೆ ಮಾತನಾಡಿದ್ದಾರೆ. ಆದಾದ ಬಳಿಕ ಆಕೆಯ ಪೋನ್ ಕಾಲ್ ಕೂಡ ಇಲ್ಲ. ಸುಳಿವು ಇಲ್ಲ. ಅರ್ಚನಾ ತಿವಾರಿಗಾಗಿ ಈಗ ಮಧ್ಯಪ್ರದೇಶದ ಪೊಲೀಸರು ತಲೆ ಕೆಡಿಸಿಕೊಂಡು ಹುಡುಕಾಟ ನಡೆಸಿದ್ದಾರೆ.
ಭೋಪಾಲ್ ರೈಲು ನಿಲ್ದಾಣದಲ್ಲಿ ಆಕೆಯ ಪೋನ್ ಕೊನೆಯದಾಗಿ ಆ್ಯಕ್ಟೀವ್ ಆಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಉಮಾರಿಯಾ ರೈಲ್ವೇ ಸ್ಟೇಷನ್ ನಲ್ಲಿ ಆಕೆಯ ಬ್ಯಾಗ್ ಸಿಕ್ಕಿದೆ.
ಪೊಲೀಸರು ಅರ್ಚನಾ ತಿವಾರಿಯ ಕಾಲ್ ಡೀಟೈಲ್ ರೆಕಾರ್ಡ್, ಸೋಷಿಯಲ್ ಮೀಡಿಯಾ ಚಟುವಟಿಕೆಗಳನ್ನು ವಿಶ್ಲೇಷಣೆ ಮಾಡುತ್ತಿದ್ದಾರೆ. ಜೊತೆಗೆ ಆಕೆಯ ಫ್ರೆಂಡ್ ಗಳಿಂದಲೂ ಆಕೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಮಧ್ಯಪ್ರದೇಶ ರಾಜ್ಯದಾದ್ಯಂತ ಈಗ ಅರ್ಚನಾ ತಿವಾರಿಯ ನಿಗೂಢ ನಾಪತ್ತೆಯ ಬಗ್ಗೆಯೇ ಜನರು ಮಾತನಾಡುತ್ತಿದ್ದಾರೆ. ಸುಂದರ ಯುವತಿಯ ನಾಪತ್ತೆ ಕೇಸ್ ಈಗ ಟಾಕ್ ಆಫ್ ಟೌನ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.