/newsfirstlive-kannada/media/media_files/2026/01/30/confident-group-owner-cj-roy-suicide-2026-01-30-17-47-19.jpg)
ಸಿ.ಜೆ.ರಾಯ್ ಐ.ಟಿ. ದಾಳಿಗೆ ಹೆದರಿಲ್ಲ
ಉದ್ಯಮಿ ಸಿ ಜೆ ರಾಯ್ ಆತ್ಮಹತ್ಯೆ ಕೇಸ್…ಗೆ ಸಂಬಂಧಿಸಿದಂತೆ ಎಕ್ಸ್ ಕ್ಲೂಸಿವ್ ಮಾಹಿತಿ ನ್ಯೂಸ್ ಫಸ್ಟ್ ಗೆ ಲಭ್ಯವಾಗಿದೆ. ಐ.ಟಿ. ಅಧಿಕಾರಿಗಳ ವಿಚಾರಣೆಗೆ ಹೆದರಿ ರಾಯ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಐ.ಟಿ ಅಧಿಕಾರಿಗಳು ನಾರ್ಮಲ್ ಡಾಕ್ಯುಮೆಂಟ್ಸ್ ಮಾತ್ರ ಕೇಳಿದ್ದಾರೆ.
ಅಷ್ಟಕ್ಕೂ ಐಟಿ ಕೇಳಿದ್ದ ಮಾಹಿತಿ ಯಾವುದು ಗೊತ್ತಾ..? ಎರಡು ಟ್ರಾನ್ಸಾಕ್ಷನ್ ಸಂಬಂಧ ಮಾಹಿತಿಯನ್ನು ಐ.ಟಿ. ಅಧಿಕಾರಿಗಳು ಕೇಳಿದ್ದಾರೆ. ರಾಯ್ ಅವರ ಉದ್ಯಮ ವ್ಯವಹಾರಕ್ಕೆ ಸಂಬಂಧಿಸಿ ಮಾಹಿತಿ ಕೇಳಿದ್ದಾರೆ. ಎರಡು ಟ್ರಾನ್ಸಾಕ್ಷನ್ ಸಂಬಂಧ ಡಿಟೇಲ್ಸ್ ಅನ್ನು ಐ.ಟಿ ಆಫೀಸರ್ಸ್ ಕೇಳಿದ್ದಾರೆ. ಜೊತೆಗೆ ಓರ್ವ ರಾಜಕಾರಣಿ ಜೊತೆಗಿನ ವ್ಯವಹಾರದ ಬಗ್ಗೆ ಮಾಹಿತಿಯನ್ನು ಐಟಿ ಅಧಿಕಾರಿಗಳು ಕೇಳಿದ್ದಾರೆ. ರಾಜಕಾರಣಿಯ ಜೊತೆಗಿನ JOINT development ಬಗ್ಗೆ ಮಾಹಿತಿ ಕೊಡುವಂತೆ ಅಧಿಕಾರಿಗಳು ಕೇಳಿದ್ದಾರೆ. ಈ ಹಿಂದೆ ಕೂಡ ಹಲವು ಭಾರೀ ಐಟಿ ವಿಚಾರಣೆಯನ್ನು ಸಿ ಜೆ ರಾಯ್…ಎದುರಿಸಿದ್ದರು. ಹಾಗಾಗಿ ಐ.ಟಿ ವಿಚಾರಣೆ ರಾಯ್ ಅವರಿಗೆ ಹೊಸದೇನಲ್ಲ. ಹಾಗಾಗಿ ಐ.ಟಿ ಅಧಿಕಾರಿಗಳ ವಿಚಾರಣೆಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿಲ್ಲ ಅನ್ನೋದು ಖಚಿತ. ಹೀಗಾಗಿ ಸಿ.ಜೆ.ರಾಯ್ ಆತ್ಮಹತ್ಯೆಗೆ ಬೇರೇನೋ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಸತ್ಯಾಂಶ ಹೊರಗೆಳೆಯಬೇಕಾಗಿದೆ.
ಹಲವು ಉದ್ಯಮಿಗಳ ಜೊತೆ ಉತ್ತಮ ಒಡನಾಟವನ್ನು ಸಿ ಜೆ ರಾಯ್…ಹೊಂದಿದ್ದರು. ನಿನ್ನೆ ಐಟಿ ಅಧಿಕಾರಿಗಳು ರಾಯ್ ಬಳಿ ಕೆಲ ಮಾಹಿತಿ ಕೇಳಿದ್ದಾರೆ. ಎರಡು ಟ್ರಾನ್ಸಾಕ್ಷನ್ ನಲ್ಲಿ ಅನುಮಾನ ಬಂದ ಹಿನ್ನೆಲೆಯಲ್ಲಿ ಮಾಹಿತಿ ಕೇಳಿದ್ದಾರೆ. ನೂರಾರು ಕೋಟಿ ವರ್ಗಾವಣೆ ಸಂಬಂಧ ಮಾಹಿತಿಯನ್ನು ಐ.ಟಿ. ಅಧಿಕಾರಿಗಳು ಕೇಳಿದ್ದಾರೆ. ಜೊತೆಗೆ ರಾಜಕಾರಣಿಯ ಜೊತೆಗಿನ ಉದ್ಯಮದ ಬಗ್ಗೆಯೂ ಮಾಹಿತಿ ಕೇಳಿದ್ದಾರೆ. ಹಣ ವರ್ಗಾವಣೆ ಸಂಬಂಧ ಮಾಹಿತಿಯನ್ನು ಕೇಳಿದ್ದಾರೆ. ಕೋಟಿ ಕೋಟಿ ಹಣ ವರ್ಗಾವಣೆ ಸಂಬಂಧ ಮಾಹಿತಿಯನ್ನು ಐಟಿ ಆಫೀಸರ್ಸ್ ಕೇಳಿದ್ದಾರೆ.
/filters:format(webp)/newsfirstlive-kannada/media/media_files/2026/01/31/cj-roy-3-2026-01-31-10-25-31.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us