Advertisment

ತಿರುಪತಿ ತಿಮ್ಮಪ್ಪನ ಹುಂಡಿಯ 14 ಕೋಟಿ ಹಣ ಕದ್ದ ಕ್ಲರ್ಕ್ ! ಜೈಲಿಗೆ ಹೋಗೋದರಿಂದ ಬಚಾವ್ ಆದ!!: ಈಗ ತನಿಖೆಯ ಬಿಸಿ

ತಿರುಪತಿಯ ತಿಮ್ಮಪ್ಪನ ಪವಿತ್ರ ದೇವಾಲಯದ ಹುಂಡಿಯ ಹಣವನ್ನು ಕ್ಲರ್ಕ್ ಒಬ್ಬ 20 ವರ್ಷಗಳಿಂದ ಕದಿಯುತ್ತಾ ಬಂದಿದ್ದಾನೆ. ಹುಂಡಿಯ ಹಣದಲ್ಲಿ 14 ಕೋಟಿ ರೂ. ಕದ್ದಿದ್ದಾನೆ. ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡಿದ್ದಾನೆ. ಮುಚ್ಚಿ ಹೋಗಿದ್ದ ಕೇಸ್ ಈಗ ರೀಓಪನ್ ಆಗಿದೆ. ಹೇಗಾಯ್ತು? ಯಾರು ಹುಂಡಿ ಕಳ್ಳ?

author-image
Chandramohan
ತಿರುಪತಿಯಲ್ಲಿ ನವರಾತ್ರಿ ಬ್ರಹ್ಮೋತ್ಸವ ದೀಪ.. ಹೂವಿನ ಅಲಂಕಾರದಿಂದ ಕಂಗೊಳಿಸಿದ ತಿಮ್ಮಪ್ಪ!

ತಿರುಮಲ ತಿರುಪತಿ ತಿಮ್ಮಪ್ಪ ದೇವಸ್ಥಾನದ ಹುಂಡಿ ಹಣ ಕಳವು

Advertisment
  • ತಿರುಮಲ ತಿರುಪತಿ ತಿಮ್ಮಪ್ಪ ದೇವಸ್ಥಾನದ ಹುಂಡಿ ಹಣ ಕಳವು
  • 20 ವರ್ಷದಲ್ಲಿ 14 ಕೋಟಿ ರೂ. ಹುಂಡಿ ಹಣ ಕದ್ದ ಕ್ಲರ್ಕ್ ರವಿಕುಮಾರ್‌
  • ಜೈಲಿಗೆ ಹೋಗುವುದರಿಂದ ಬಚಾವ್ ಆದ ರವಿಕುಮಾರ್‌
  • ಈಗ ಹೈಕೋರ್ಟ್ ನಿಂದ ಕೇಸ್ ವಿಚಾರಣೆ, ದಾಖಲೆ ಸೀಜ್‌ಗೆ ಆದೇಶ

ಆಂಧ್ರದ ತಿರುಮಲದ ತಿಮ್ಮಪ್ಪ ದೇವಸ್ಥಾನದಲ್ಲಿ ಕ್ಲರ್ಕ್ ಆಗಿದ್ದ ರವಿಕುಮಾರ್ ನಿಂದ ಹುಂಡಿ ಹಣ ಕಳವು ನಡೆದಿರುವುದು ಈಗ ಬೆಳಕಿಗೆ  ಬಂದಿದೆ.  ಕಳೆದ 20 ವರ್ಷಗಳಿಂದ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಉದ್ಯೋಗಿ ಆಗಿದ್ದ ರವಿಕುಮಾರ್ , ಹುಂಡಿ ಹಣದ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿದ್ದ. ಆದರೇ, ಹುಂಡಿ ಹಣ ಎಣಿಸುತ್ತಲೇ , ನಿತ್ಯ ಹಣ ಎಗರಿಸಿಕೊಂಡು ರವಿಕುಮಾರ್‌ ಹೋಗುತ್ತಿದ್ದ. ಹುಂಡಿ ಹಣ ಎಣಿಕೆಯ ಜೊತೆಗೆ ತನ್ನ ಜೇಬಿಗೆ ಸದ್ದಿಲ್ಲದೇ ಹಣ, ಚಿನ್ನಾಭರಣ ತುಂಬಿಸಿಕೊಂಡು  ರವಿಕುಮಾರ್‌ ಹೋಗುತ್ತಿದ್ದ. 
ಕಳೆದ 20 ವರ್ಷಗಳಲ್ಲಿ  ಹುಂಡಿ ಹಣ ಕಳವಿನಿಂದ ಬರೋಬ್ಬರಿ 14 ಕೋಟಿ ರೂಪಾಯಿ ಆಸ್ತಿಪಾಸ್ತಿ ಖರೀದಿ ಮಾಡಿದ್ದ.  ತಿರುಪತಿ, ಚೆನ್ನೈ, ಹೈದರಾಬಾದ್ ನಲ್ಲಿ ಅಪಾರ ಪ್ರಮಾಣದ ಆಸ್ತಿ ಖರೀದಿ ಮಾಡಿದ್ದಾನೆ. ಈ ಆಸ್ತಿಗಳ ಮೌಲ್ಯವೇ ಈಗ ಬರೋಬ್ಬರಿ 140 ಕೋಟಿ ರೂಪಾಯಿ ಆಗಿದೆ. 
ಹುಂಡಿ ಹಣ ಎಣಿಸಲು ಟಿಟಿಡಿಯಲ್ಲಿ 22 ಸಾವಿರ ಚದರ ಅಡಿ ಜಾಗದ ವ್ಯವಸ್ಥೆ ಮಾಡಲಾಗಿದೆ.  ಇಲ್ಲಿ 108 ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.  ಆದರೇ, 2023ರ ಏಪ್ರಿಲ್ 29 ರಂದು ಸಿಸಿಟಿವಿ ಮಾನಿಟರ್ ಮಾಡುವಾಗ ರವಿಕುಮಾರ್ ಅನುಮಾನಾಸ್ಪದ ವರ್ತನೆ ಕಂಡು ಬಂದಿದೆ. ಅನುಮಾನಗೊಂಡು ರವಿಕುಮಾರ್ ನನ್ನು ದೈಹಿಕ ತಪಾಸಣೆ ಮಾಡಿದಾಗ, 9 ಅಮೆರಿಕನ್ ಡಾಲರ್‌ ಪತ್ತೆಯಾಗಿದೆ. ಆಗ ವಿಚಾರಣೆ ಮಾಡಿದಾಗ, ಇದು ಮೊದಲ ಭಾರಿ ಎಂದು ರವಿಕುಮಾರ್ ಹೇಳಲಿಲ್ಲ.  
ಕಳೆದ 20 ವರ್ಷದಿಂದ ಹೀಗೆಯೇ ಹುಂಡಿ ಹಣವನ್ನು ಎಣಿಕೆ ಮಾಡುವಾಗ ಕಳವು ಮಾಡುತ್ತಿದ್ದೇನೆ ಎಂದು ರವಿಕುಮಾರ್ ಹೇಳಿದ್ದಾನೆ. ಇದನ್ನು ಕೇಳಿ ಟಿಟಿಡಿ ಸಿಬ್ಬಂದಿ ಶಾಕ್ ಆಗಿದ್ದಾರೆ. 
ಬಳಿಕ ತಕ್ಷಣವೇ ಟಿಟಿಡಿಯಿಂದ ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿ, ಆತ ಕದ್ದ ಹಣ  ಹಾಗೂ ಅದರಿಂದ ಖರೀದಿಸಿದ್ದ ಆಸ್ತಿಗಳನ್ನೆಲ್ಲಾ ಟಿಟಿಡಿ ಮುಟ್ಟುಗೋಲು ಹಾಕಿಕೊಳ್ಳುವ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೇ, ಈ ರೀತಿಯ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. 
ರಾಜೀ ಸಂಧಾನದ ಮೂಲಕ ಮುಚ್ಚಿ ಹೋಗಿದ್ದ ಕೇಸ್‌

ಮೇ, 19, 2023 ರಂದು  ತಮ್ಮ ಹೆಸರಿನಲ್ಲಿದ್ದ 7 ಆಸ್ತಿಗಳನ್ನು ಟಿಟಿಡಿಗೆ ರವಿಕುಮಾರ್  ಹಾಗೂ ಪತ್ನಿ ದಾನ ನೀಡಿದ್ದರು.  ಟಿಟಿಡಿ ಚೇರ್ ಮೆನ್ ಆಗಿದ್ದ ವೈ.ವಿ.ಸುಬ್ಬಾರೆಡ್ಡಿ ಈ ಆಸ್ತಿಗಳ ದಾನ ನೀಡುವುದಕ್ಕೆ  ಒಪ್ಪಿಗೆ ಕೊಟ್ಟರು.  ಮೇ, 30, 2023 ರಂದು  ರವಿಕುಮಾರ್  ವಿರುದ್ಧ  ತಿರುಮಲ ಪೊಲೀಸರು ಚಾರ್ಜ್ ಷೀಟ್ ಸಲ್ಲಿಸಿದ್ದರು.  ಬಳಿಕ ಸೆಪ್ಟೆಂಬರ್ 9, 2023  ರಂದು ಲೋಕ ಅದಾಲತ್ ಸಂಪರ್ಕಿಸಿದ್ದ ರವಿಕುಮಾರ್ ಮತ್ತು ಟಿಟಿಡಿ ವಿಜಿಲೆನ್ಸ್ ಅಧಿಕಾರಿ ಸತೀಶ್ ಕುಮಾರ್‌, ಲೋಕ ಅದಾಲತ್ ನಲ್ಲಿ ಕೇಸ್  ರಾಜೀ ಮಾಡಿಕೊಳ್ಳುವುದಕ್ಕೆ ಒಪ್ಪಿಗೆ ಕೊಟ್ಟರು.  ಕೇಸ್ ರಾಜೀ ಆಗಿ ಜೈಲಿಗೆ ಹೋಗುವುದರಿಂದ ರವಿಕುಮಾರ್ ಬಚಾವ್ ಆದ . 
 ಸರ್ಕಾರ ಬದಲಾವಣೆಯಿಂದ ಕೇಸ್‌ ಗೆ ಮರುಜೀವ

ಆಂಧ್ರದಲ್ಲಿ ಸರ್ಕಾರ ಬದಲಾವಣೆಯಾಗಿ ಚಂದ್ರಬಾಬು ನಾಯ್ಡು ಸಿಎಂ ಆದ ಬಳಿಕ ಟಿಟಿಡಿ ಅವ್ಯವಹಾರಗಳ ಬಗ್ಗೆ ತನಿಖೆ ಶುರುವಾಯಿತು.  ಈ ವೇಳೆ ಪೊಲೀಸ್ ಒತ್ತಡದಿಂದಾಗಿ ರವಿಕುಮಾರ್ ಕೇಸ್ ನ ರಾಜೀಗೆ ತಾನು ಒಪ್ಪಿದ್ದಾಗಿ ವಿಜಿಲೆನ್ಸ್ ಅಧಿಕಾರಿ ಸತೀಶ್ ಕುಮಾರ್ ಹೇಳಿದ್ದರು.  ಬಳಿಕ ತಿರುಪತಿ ಪತ್ರಕರ್ತ ಶ್ರೀನಿವಾಸ್ ರಾವ್ ರಿಂದ ಹೈಕೋರ್ಟ್ ನಲ್ಲಿ ಈ ಬಗ್ಗೆ ರಿಟ್ ಅರ್ಜಿ ಸಲ್ಲಿಕೆಯಾಯಿತು. ಲೋಕ ಅದಾಲತ್ ತೀರ್ಪು ಅನ್ನು   ಹೈಕೋರ್ಟ್ ರದ್ದುಪಡಿಸಿದೆ.  ಕೇಸ್ ಗೆ ಸಂಬಂಧಿಸಿದ ಎಲ್ಲ ದಾಖಲೆ ಸೀಜ್ ಮಾಡಲು ಸಿಐಡಿ ಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಮುಂದಿನ ತಿಂಗಳ 13 ರಂದು ವಿಚಾರಣೆ ನಡೆಸುವುದಾಗಿ  ಆಂಧ್ರ ಹೈಕೋರ್ಟ್ ಹೇಳಿದೆ. 
ಜಗನ್ ಮೋಹನ್ ರೆಡ್ಡಿ ಕಾಲದಲ್ಲಿ ರವಿಕುಮಾರ್ ವಿರುದ್ಧ ಏಕೆ ಕಠಿಣ ಕ್ರಮ ಕೈಗೊಳ್ಳಲಿಲ್ಲ ಎಂದು ಹಾಲಿ ಟಿಟಿಡಿ ಅಧ್ಯಕ್ಷ ಬಿ.ಆರ್‌.ನಾಯ್ಡು ಪ್ರಶ್ನೆ ಮಾಡಿದ್ದಾರೆ.  ವಿಜಯನಗರ ಅರಸರ ಕಾಲದಲ್ಲಿ ಹುಂಡಿ ಹಣ ಕದ್ದವರನ್ನು ಗಲ್ಲಿಗೇರಿಸಲಾಗಿತ್ತು ಎಂದು ಟಿಟಿಡಿ ಸದಸ್ಯ ಭಾನುಪ್ರಕಾಶ್ ಹೇಳಿದ್ದಾರೆ.  
ಆದರೇ,  ಮಾನವೀಯತೆ ದೃಷ್ಟಿಯಿಂದ ರವಿಕುಮಾರ್ ವಿರುದ್ಥ ಕಠಿಣ ಕ್ರಮ ಕೈಗೊಂಡಿರಲಿಲ್ಲ ಎಂದು ಹಿಂದಿನ ಟಿಟಿಡಿ ಸದಸ್ಯರು ಹೇಳುತ್ತಿದ್ದಾರೆ.  ರವಿಕುಮಾರ್ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ಹಾದಿಯಲ್ಲಿದ್ದರು, ಹೀಗಾಗಿ ಮಾನವೀಯತೆ ದೃಷ್ಟಿಯಿಂದ ಕ್ರಮ ಕೈಗೊಂಡಿರಲಿಲ್ಲ ಎಂದು ಹಿಂದಿನ ಟಿಟಿಡಿ ಸದಸ್ಯರು ಹೇಳುತ್ತಿದ್ದಾರೆ.  ತಿರುಪತಿ ಹುಂಡಿ ಹಣವನ್ನು 20 ವರ್ಷದಿಂದ ಕದ್ದು 140 ಕೋಟಿ ರೂ ಆಸ್ತಿ ಸಂಪಾದಿಸಿದ್ದೇ ಅಚ್ಚರಿ. ಹುಂಡಿ ಹಣ ಕಳವು ಮಾಡಿದ ಆರೋಪಿ ರವಿಕುಮಾರ್ ಐಷಾರಾಮಿ ಜೀವನ ನಡೆಸುತ್ತಿದ್ದಾನೆ. ರವಿಕುಮಾರ್ ಬಳಿ ಬಿಎಂಡಬ್ಲ್ಯು ಕಾರ್ ಸೇರಿದಂತೆ ಐಷಾರಾಮಿ ಕಾರ್ ಗಳಿವೆ. ಕೋಟಿಗಟ್ಟಲೇ ಆಸ್ತಿ ಇದೆ. ಇವೆಲ್ಲವೂ ತಿರುಪತಿ ಹುಂಡಿ ಹಣ ಕದ್ದು ಸಂಪಾದಿಸಿದ ಆಸ್ತಿಗಳೇ ಆಗಿವೆ.  ಹೀಗಾಗಿ ಇವುಗಳನ್ನೆಲ್ಲಾ ಜಫ್ತಿ ಮಾಡಬೇಕೆಂದು ಟಿಟಿಡಿ ಹಾಲಿ ಸದಸ್ಯರು, ಭಕ್ತರು ಆಗ್ರಹಿಸುತ್ತಿದ್ದಾರೆ. 

Advertisment

TIRUPATHI THIMAPPA GOLD




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Thirumala hundi stolen
Advertisment
Advertisment
Advertisment