Advertisment

ದೇಶಾದ್ಯಂತ 5 ಸಾವಿರ ತಿರುಪತಿ ತಿಮ್ಮಪ್ಪ ದೇವಸ್ಥಾನ ನಿರ್ಮಿಸಲು ಸಿಎಂ ನಾಯ್ಡು ತೀರ್ಮಾನ: ಕಾಂಗ್ರೆಸ್ ಆಕ್ಷೇಪವೇಕೆ?

ದೇಶಾದ್ಯಂತ 5 ಸಾವಿರ ತಿರುಪತಿ ತಿಮ್ಮಪ್ಪನ ದೇವಸ್ಥಾನ ನಿರ್ಮಿಸಲು ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ತೀರ್ಮಾನಿಸಿದ್ದಾರೆ. ಈ ಮೂಲಕ ದಲಿತರು, ಕೆಳವರ್ಗದವರ ಮತಾಂತರ ತಡೆಯಲು ಸಾಧ್ಯ ಎಂದು ಸಿಎಂ ನಾಯ್ಡು ನಂಬಿದ್ದಾರೆ. ಆದರೇ, ಇದಕ್ಕೆ ಕಾಂಗ್ರೆಸ್ ಆಕ್ಷೇಪಿಸಿದೆ.

author-image
Chandramohan
ತಿರುಪತಿಯಲ್ಲಿ ನವರಾತ್ರಿ ಬ್ರಹ್ಮೋತ್ಸವ ದೀಪ.. ಹೂವಿನ ಅಲಂಕಾರದಿಂದ ಕಂಗೊಳಿಸಿದ ತಿಮ್ಮಪ್ಪ!

ತಿರುಪತಿ ತಿಮ್ಮಪ್ಪ ದೇವಸ್ಥಾನ

Advertisment
  • ದೇಶಾದ್ಯಂತ 5 ಸಾವಿರ ತಿರುಪತಿ ತಿಮ್ಮಪ್ಪ ದೇವಸ್ಥಾನ ನಿರ್ಮಿಸಲು ನಾಯ್ಡು ನಿರ್ಧಾರ
  • ಸಿಎಂ ನಾಯ್ಡು ತೀರ್ಮಾನಕ್ಕೆ ಬಿಜೆಪಿ ಸ್ವಾಗತ, ಕಾಂಗ್ರೆಸ್ ಆಕ್ಷೇಪ

ತಿರುಪತಿ ಗಿರಿವಾಸ ಶ್ರೀ ವೆಂಕಟೇಶ.. ಆದ್ರೀಗ ತಿರುಪತಿಯಲ್ಲಿ ನೆಲೆಸಿರುವ ತಿಮ್ಮಪ್ಪನನ್ನ ದೇಶಾದ್ಯಂತ ಸರ್ವಾಂತರ್ಯಾಮಿ ಮಾಡಲು ಆಂಧ್ರಪ್ರದೇಶ ಸರ್ಕಾರ ಮುಂದಾಗಿದೆ. ಮತಾಂತರಕ್ಕೆ ಕಡಿವಾಣ ಹಾಕಲು ಸಿಎಂ ಚಂದ್ರಬಾಬು ನಾಯ್ಡು ತಿಮ್ಮಪ್ಪನ ಮೊರೆ ಹೋಗಿದ್ದಾರೆ. ಆಂಧ್ರ ಸಿಎಂ ನಿರ್ಧಾರಕ್ಕೆ ಕೇಸರಿ ಪಡೆ ಜೈ ಎಂದಿದ್ರೆ.. ಕೈ ಪಡೆ ಕ್ಯಾತೆ ತೆಗೆಿದಿದೆ.
ತಿರುಪತಿ ತಿಮ್ಮಪ್ಪ.. ಏಳು ಬೆಟ್ಟಗಳ ಒಡೆಯ.. ವೈಕುಂಠವಾಸ.. ದೇಶದ ಸಾವಿರಾರು ಭಕ್ತರ ನಂಬಿಕೆಯ ದೈವ.. ಇದೀಗ ದೇಶದೆಲ್ಲೆಡೆ ಸಪ್ತಗಿರಿ ವಾಸನ ದೇವಸ್ಥಾನಗಳ ನಿರ್ಮಾಣಕ್ಕೆ ಆಂಧ್ರ ಸರ್ಕಾರ ಮುಂದಾಗಿದೆ.

Advertisment


ಮತಾಂತರ ತಡೆಯಲು ಆಂಧ್ರ ಸರ್ಕಾರ ತಿಮ್ಮಪ್ಪನ ಮೊರೆ
ದೇಶದೆಲ್ಲೆಡೆ 5,000 ದೇಗುಲ ತೆರೆಯಲು ನಾಯ್ಡು ಸೂಚನೆ
ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಬಿಜೆಪಿ ದೋಸ್ತಿ ಬೆಳೆಸಿದ ಮೇಲೆ ಸನಾತನ ಧರ್ಮದ ಉಳಿವಿಗಾಗಿ ಪಣತೊಟ್ಟಿದ್ದಾರೆ. ಹಿಂದೂ ಧರ್ಮೀಯರ ರಕ್ಷಣೆಗೆ, ಮತಾಂತರ ಭೂತವನ್ನ ಹೊಡೆದೋಡಿಸಲು ತಿಮ್ಮಪ್ಪನ ಪಾದವೇ ಗತಿ ಎಂದಿದ್ದಾರೆ. ಅದರಲ್ಲೂ ಎಸ್‌ಸಿ-ಎಸ್‌ಟಿ ಸಮುದಾಯದ ಜನರು ಬೇರೆ ಧರ್ಮದ ಕಡೆ ಮುಖ ಮಾಡೋದನ್ನ ತಡೆಯಲು ಗೋವಿಂದನ ಮೊರೆ ಹೋಗಿದ್ದಾರೆ.

ಮತಾಂತರ ತಡೆಯಲು ಆಂಧ್ರಪ್ರದೇಶ ಸಿಎಂ ತಿಮ್ಮಪ್ಪನ ಮೊರೆ
ದೇಶಾದ್ಯಂತ 5000 ತಿಮ್ಮಪ್ಪನ ದೇವಸ್ಥಾನ ನಿರ್ಮಾಣಕ್ಕೆ ಸೂಚನೆ
ಎಸ್‌ಸಿ, ಎಸ್‌ಟಿ ಸಮುದಾಯದವರೇ ಹೆಚ್ಚು ಮತಾಂತರ ಆರೋಪ
SC-ST ಪ್ರದೇಶದಲ್ಲಿ 5,000 ತಿಮ್ಮಪ್ಪನ ದೇಗುಲ ನಿರ್ಮಿಸಲು ಸೂಚನೆ
ತೆಲುಗು ಭಾಷಿಕರು ಹೆಚ್ಚಿರುವಲ್ಲಿ ಬಾಲಾಜಿ ದೇಗುಲ ನಿರ್ಮಾಣ ಪ್ಲಾನ್
ತಿರುಮಲದ ಪಾವಿತ್ರ್ಯತೆ ಕಾಪಾಡುವುದು ಇದರ ಮೂಲ ಉದ್ದೇಶ 
ಭಕ್ತರು ಸುಲಭವಾಗಿ ತಿಮ್ಮಪ್ಪನ ದರ್ಶನ ಪಡೆಯುವುದು ಉದ್ದೇಶ
ಹಿಂದುಗಳಲ್ಲಿ ಒಗ್ಗಟ್ಟು ಹೆಚ್ಚಳಕ್ಕೆ ಟಿಟಿಡಿಗೆ ಸಿಎಂ ನಾಯ್ಡು ಸೂಚನೆ


ದೇಶಾದ್ಯಂತ ನಡೆಯುತ್ತಿರೋ ಮತಾಂತರವನ್ನ ತಡೆಯಲು ಆಂಧ್ರಪ್ರದೇಶ ಸಿಎಂ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ. ದೇಶಾದ್ಯಂತ 5000 ತಿಮ್ಮಪ್ಪನ ದೇವಸ್ಥಾನಗಳ ನಿರ್ಮಾಣಕ್ಕೆ ಸೂಚನೆ ನೀಡಿದ್ದಾರೆ. ಎಸ್‌ಸಿ, ಎಸ್‌ಟಿ ಸಮುದಾಯದವರೇ ಹೆಚ್ಚು ಮತಾಂತರ ಆಗ್ತಿದ್ದಾರೆ ಅಂತ ಆರೋಪಿಸಿರೋ ಚಂದ್ರಬಾಬು ನಾಯ್ಡು, SC-ST ಸಮುದಾಯದ ಜನರು ವಾಸಿಸುವ ಪ್ರದೇಶದಲ್ಲಿ 5,000 ತಿಮ್ಮಪ್ಪನ ದೇಗುಲ ನಿರ್ಮಿಸಲು ಸೂಚನೆ ಕೊಟ್ಟಿದ್ದಾರೆ. ಅದರಲ್ಲೂ ತೆಲುಗು ಭಾಷಿಕರು ಹೆಚ್ಚಿರುವ ಕಡೆಗಳಲ್ಲೇ ಬಾಲಾಜಿ ದೇಗುಲ ನಿರ್ಮಾಣ ಪ್ಲಾನ್ ಮಾಡಿದ್ದಾರೆ. ತಿರುಮಲದ ಪಾವಿತ್ರ್ಯತೆ ಕಾಪಾಡುವುದು ಇದರ ಮೂಲ ಉದ್ದೇಶವಾಗಿದೆ. ಅಲ್ಲದೇ ವಿಶ್ಯಾದ್ಯಂತ ಇರುವ ತಿಮ್ಮಪ್ಪನ ಭಕ್ತರು ಸುಲಭವಾಗಿ ತಿಮ್ಮಪ್ಪನ ದರ್ಶನ ಪಡೆಯುವುದು ಮತ್ತೊಂದು ಉದ್ದೇಶವಾಗಿದೆ. ಈ ಮೂಲಕ ಹಿಂದುಗಳಲ್ಲಿ ಒಗ್ಗಟ್ಟನ್ನ ಹೆಚ್ಚಿಸೋದಕ್ಕಾಗಿ ಈ ನಿರ್ಣಯ ಕೈಗೊಳ್ಳುವಂತೆ ಟಿಟಿಡಿಗೆ ಸಿಎಂ ನಾಯ್ಡು ಸೂಚನೆ ನೀಡಿದ್ದಾರೆ. 

Advertisment

ನಾಯ್ಡು ನಿರ್ಧಾರಕ್ಕೆ ಕೇಸರಿ ಸೇನೆ ಜೈ.. ಕೈ ಪಡೆ ಕ್ಯಾತೆ!
ಚಂದ್ರಬಾಬು ನಾಯ್ಡು ನಿರ್ಧಾರವನ್ನು ಟಿಡಿಪಿಯ ಮಿತ್ರಪಕ್ಷ ಬಿಜೆಪಿ ಸ್ವಾಗತಿಸಿದೆ. ಜಗನ್ ಮೋಹನ್ ರೆಡ್ಡಿ ಸಿಎಂ ಆಗಿದ್ದಾಗ ಚರ್ಚ್‌ಗಳ ಸಂಖ್ಯೆ, ಮತಾಂತರ ಹೆಚ್ಚಾಗಿದೆ. ಇದನ್ನ ತಡೆಗಟ್ಟಲು ಬಾಲಾಜಿ ದೇವಸ್ಥಾನ ನಿರ್ಮಾಣ ಅಗತ್ಯ ಅಂತ ಬಿಜೆಪಿ ನಾಯಕಿ ಯಾಮಿನಿ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಇತ್ತ ಟಿಟಿಡಿಯ ನಿರ್ಧಾರವನ್ನು ಜಗನ್‌ ಮೋಹನ್ ರೆಡ್ಡಿ ಸಹೋದರಿ, ಆಂಧ್ರ ಕಾಂಗ್ರೆಸ್‌ ಅಧ್ಯಕ್ಷೆ ಶರ್ಮಿಳಾ ಟೀಕಿಸಿದ್ದಾರೆ. ಎಸ್‌ಸಿ, ಎಸ್‌ಟಿ ಸಮುದಾಯಗಳ ಏಳ್ಗೆಯನ್ನೇ ಬಯಸುವುದಾದರೆ, ಟಿಟಿಡಿ ದೇವಸ್ಥಾನಗಳಿಗೆ ಮೀಸಲಿಟ್ಟಿರುವ ಹಣವನ್ನ ನೀಡಿ ಅಂತ ಕಿಡಿಕಾರಿದ್ದಾರೆ.

ರಾಜಕೀಯ ಧರ್ಮದಂಗಲ್‌ನಲ್ಲಿ ದೇವರನ್ನೂ ಬಳಸಿಕೊಳ್ಳಲಾಗುತ್ತಿದ್ಯಾ? ತಿಮ್ಮಪ್ಪನ ದೇವಸ್ಥಾನ ನಿರ್ಮಿಸಿದ್ರೆ ಹಿಂದುಳಿದ ವರ್ಗಗಳ ಉದ್ಧಾರ ಆಗುತ್ತಾ? ಮತಾಂತರಕ್ಕೆ ಕಡಿವಾಣ ಬೀಳುತ್ತಾ? ಆ ತಿಮ್ಮಪ್ಪನಿಗೆ ಗೊತ್ತು.

Tirumala Tirupati
Advertisment
Advertisment
Advertisment