/newsfirstlive-kannada/media/media_files/2025/12/15/cold-wave-grips-in-north-karnataka-2025-12-15-14-43-39.jpg)
ಚಳಿಗೆ ತತ್ತರಿಸಿದ ರಾಜ್ಯದ ಜನರು
ಚಳಿ.. ಚಳೀ. ಬೆಳಗ್ಗೆ ಏಳೋಕೂ ಮನಸ್ಸಾಗಲ್ಲ, ಆಫೀಸ್​ ಹೋಗೋದಕ್ಕೂ ದೇಹ ಒಗ್ಗಲ್ಲ, ಬೆಚ್ಚಗೆ ಮನೆಯಲ್ಲೇ ಕೂತು ಬಿಡೋಣ ಅನ್ನಿಸಿದ್ರೂ ಇರೋಕಾಗ್ತಿಲ್ಲ.. ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮೈಕೊರೆಯುವ ಚಳಿ ಜೊತೆ ತುಂತುರು ಮಳೆಗೆ ಜನ ಪತರುಗುಡುತ್ತಿದ್ದಾರೆ.. ಹೀಗಾಗಿ ಹವಾಮಾನ ಇಲಾಖೆ ತಾಪಮಾನ ತೀವ್ರ ಕುಸಿತದ ಬಗ್ಗೆ ಅಲರ್ಟ್ ಮಾಡಿದೆ.. ಅತ್ತ ರಾಷ್ಟ್ರ ರಾಜಧಾನಿ ತಾಪಮಾನ ಕನಿಷ್ಠ 3 ಡಿಗ್ರಿಗೆ ಕುಸಿದಿದ್ದು ಪರಿಸ್ಥಿತಿ ಅಯೋಮಯ ಆಗಿದೆ..
ಚಳಿ ಚಳಿ ತಾಳೆನು ಈ ಚಳಿಯ ಅನ್ನೋ ಹಾಡಿಗೆ ಹೊಂದುವಂತಿದೆ ಸದ್ಯದ ಪರಿಸ್ಥಿತಿ.. ಸಂಜೆ 5.30ರ ಹೊತ್ತಿಗೆಲ್ಲಾ ಸೂರ್ಯಾಸ್ತಮ ಆಗ್ತಿದ್ದು ಚಳಿ ಆವರಿಸ್ತಿದೆ.. ಮುಂಜಾನೆ 10 ಗಂಟೆ ಆದ್ರೂ ಜನ ಮನೆಗಳಿಂದ ಹೊರ ಬರಲಾಗದ ಸ್ಥಿತಿ ಇದೆ.. ರಾಜಧಾನಿ ಬೆಂಗಳೂರಲ್ಲಂತೂ ಸೂರ್ಯನ ಸುಳಿವೇ ಇಲ್ಲದೇ ಮೋಡ ಕವಿದ ವಾತಾವರಣ ಆವರಿಸಿದೆ.. ಅತೀವ ಚಳಿ ಜೊತೆಗೆ ತುಂತುರು ಮಳೆಯ ಸಿಂಚನ ಜನರನ್ನು ಗಢಗಢ ನಡುಗಿಸಿದೆ..
ರಾಜ್ಯದ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​​ ಘೋಷಣೆ
ಇನ್ನೂ 3 ದಿನ ಚಳಿಯಿಂದ ನಡುಗಲಿದೆ ಸಿಲಿಕಾನ್​​ ಸಿಟಿ
ರಾಜ್ಯದಲ್ಲಿ ಸಂಕ್ರಾಂತಿ ಬಂದ್ರೂ ರಣಚಳಿ ಮುಂದುವರಿದಿದ್ದು ಶೀತಗಾಳಿಗೆ ಜನ ಕಂಪಿಸಿದ್ದಾರೆ.. ಅದ್ರಲ್ಲೂ ರಾಜಧಾನಿ ಬೆಂಗಳೂರು ಕಾಶ್ಮೀರದಂತಾಗಿದೆ..
ಇನ್ನೂ ದಾವಣಗೆರೆ, ಹಾವೇರಿ, ಗದಗ, ಬಾಗಲಕೋಟೆ, ಬೀದರ್, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.. ಶೀತಗಾಳಿ ಹೆಚ್ಚಾಗಿರುವ ಹಿನ್ನಲೆ ಅತೀವ ಚಳಿ ಜೊತೆಗೆ ತುಂತುರು ಮಳೆಯಾಗುವ ಸಾಧ್ಯತೆ ಕೂಡ ಇದೆ..
ಇನ್ನು ಮೂರು ದಿನ ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಚಳಿಯ ತೀವ್ರತೆ ಹೆಚ್ಚಿರಲಿದ್ದು, ತುಂತುರು ಮಳೆಯ ಸಂದೇಶ ಕೂಡ ಸಿಕ್ಕಿದೆ..
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಶೀತಗಾಳಿ ಇರಲಿದ್ದು ಹಲವು ಜಿಲ್ಲೆಗಳಿಗೆ ಅಲರ್ಟ್​​ ಘೋಷಣೆ ಮಾಡಲಾಗಿದೆ.. ರಾಜ್ಯ ರಾಜಧಾನಿ ಬೆಂಗಳೂರಲ್ಲಂತು ಸೂರ್ಯನ ಸುಳಿವೇ ಇಲ್ಲದಾಗಿದ್ದು ಅತೀವ ಚಳಿ ಜೊತೆ ತುಂತುರು ಮಳೆಯಾಗುವ ಸಾಧ್ಯತೆ ಕೂಡ ಇದೆ..
ಗಢಗಢ.. ಜನ ತತ್ತರ!
ಬೆಂಗಳೂರಲ್ಲಿ 24 ಡಿಗ್ರಿ, 16 ಕ್ಕೆ ಕುಸಿಯುವ ಸಾಧ್ಯತೆ
ಹಾಸನ : 25 ಡಿಗ್ರಿ
ಶಿವಮೊಗ್ಗ : 27 ಡಿಗ್ರಿ
ಬೆಳಗಾವಿ : 27 ಡಿಗ್ರಿ
ತುಮಕೂರು : 24 ಡಿಗ್ರಿ
ಮಂಡ್ಯ : 26 ಡಿಗ್ರಿ
ಗದಗ : 27 ಡಿಗ್ರಿ
ಚಿತ್ರದುರ್ಗ : 25 ಡಿಗ್ರಿ
ಸದ್ಯ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಚಳಿ ತೀವ್ರವಾಗಿದ್ದು, ಬೆಂಗಳೂರಿನಲ್ಲಿ 24 ಡಿಗ್ರಿ ವರದಿಯಾಗಿದೆ ಹಾಗೂ ನಾಳೆ ಮತ್ತು ನಾಡಿದ್ದಿಗೆ 16 ಡಿಗ್ರಿಗೆ ಕುಸಿಯುವ ಸಾಧ್ಯತೆ ಇದೆ.. ಮತ್ತು ಹಾಸನದಲ್ಲಿ 25 ಡಿಗ್ರಿ, ಶಿವಮೊಗ್ಗ 27, ಬೆಳಗಾವಿ 27, ತುಮಕೂರು 24, ಮಂಡ್ಯ 26, ಗದಗ 27 ಮತ್ತು ಚಿತ್ರದುರ್ಗ 25 ಡಿಗ್ರಿ ವರದಿಯಾಗಿದೆ..
ರಾಷ್ಟ್ರ ರಾಜಧಾನಿಯಲ್ಲೂ ಚಳಿಯ ಸಂಕಟ
ದೆಹಲಿಯಲ್ಲಿ 3 ಡಿಗ್ರಿಗೆ ಕುಸಿದ ತಾಪಮಾನ
ಇನ್ನು ರಾಷ್ಟ್ರರಾಜಧಾನಿಯಲ್ಲೂ ಕೂಡ ಅತೀವ ಚಳಿ ಆವರಿಸಿಕೊಂಡಿದೆ.. ಸದ್ಯ ಚಳಿಯ ತಾಪಮಾನ 3 ಡಿಗ್ರಿಗೆ ಕುಸಿದಿದ್ದು ಹಲವು ಪ್ರದೇಶದಲ್ಲಿ ಎರಡರಿಂದ ಮೂರು ಡಿಗ್ರಿಗೂ ತಾಪಮಾನ ಕುಸಿತ ಕಂಡಿದೆ.. ದೆಹಲಿ ನಗರದ ಎಲ್ಲೆಡೆ ದಿಟ್ಟ ಮಂಜು ಕವಿದಿದ್ದು, ತೀವ್ರ ಚಳಿಯಿಂದಾಗಿ ಜನ ಮನೆಯಿಂದ ಹೊರ ಬರೋದಕ್ಕು ಕೂಡ ಕಷ್ಟ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ..
ದೇಶದ ಉತ್ತರ ಭಾಗಕ್ಕೂ ಚಳಿ ಸಂಕಷ್ಟl̥
ದೇಶದ ಉತ್ತರ ಭಾಗದಲ್ಲೂ ಶೀತಗಾಳಿಯ ಪರಿಣಾಮ ಚಳಿ ತೀವ್ರತೆ ಹೆಚ್ಚಿದ್ದು, ಉತ್ತರ ಪ್ರದೇಶ, ಜಮ್ಮು, ಹರಿಯಾಣ, ಚಂಡೀಗರ್​​, ದೆಹಲಿ ಮತ್ತು ಉತ್ತರಖಾಂಡ್​​​ನಲ್ಲೂ ಸಹ ತೀವ್ರ ಚಳಿಗೆ ಜನಸಾಮಾನ್ಯರು ತತ್ತರಿಸಿದ್ದಾರೆ.
/filters:format(webp)/newsfirstlive-kannada/media/media_files/2026/01/12/cold-wave-in-north-karnataka-2026-01-12-17-53-33.jpg)
ಒಟ್ಟಾರೆ ಎಲ್ಲೆಡೆ ತಾಪಮಾನ ಕುಸಿತ ಕಾಣುತ್ತಿದ್ದು ಅತೀವ ಚಳಿ ಎಲ್ಲರನ್ನ ನಡುಗಿಸಿದೆ.. ಆದ್ರೆ ಪ್ರಕೃತಿಯ ಪರೀದಿಗೆ ಪರ್ಯಾಯವಿಲ್ಲವಾಗಿದ್ದು.. ಆದಷ್ಟು ಜನ ಎಚ್ಚರಿಕೆಯಿಂದ ಇರಬೇಕು.
ನ್ಯೂಸ್​​ಫಸ್ಟ್​​ ಬ್ಯೂರೋ..
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us