/newsfirstlive-kannada/media/media_files/2025/09/27/big-boss-set-reveal02-2025-09-27-14-04-29.jpg)
ಬಿಗ್ ಬಾಸ್ ಶೋ ಸೆಟ್ ಡಿಸೈನ್ ರೀವೀಲ್ ಮಾಡಿದ ಕಲರ್ಸ್ ಕನ್ನಡ
ಈ ಭಾರಿಯ ಕಲರ್ಸ್ ಕನ್ನಡದ ಬಿಗ್ ಬಾಸ್ ಷೋನ ಸೆಟ್ ಹೇಗಿರಲಿದೆ ಎಂಬ ಕುತೂಹಲ ಅನೇಕರಿಗೆ ಇದೆ. ಇದನ್ನು ತಣಿಸುವ ಪ್ರಯತ್ನವನ್ನು ಕಲರ್ಸ್ ಕನ್ನಡ ಈಗ ಮಾಡಿದೆ. ಕಲರ್ಸ್ ಕನ್ನಡ ಚಾನಲ್ ಬಿಗ್ ಬಾಸ್ ನ ಸೆಟ್ ವಿಡಿಯೋ ಬಿಡುಗಡೆ ಮಾಡಿದೆ.
ಕರುನಾಡನ್ನು ಬಿಂಬಿಸುವ ಬಿಗ್ ಬಾಸ್ ಅರಮನೆಗೆ ಅಧಿಪತಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ❤️ ಅಂತ ಟೈಟಲ್ ಕೊಟ್ಟು ವಿಡಿಯೋ ಒಂದು ಅನ್ನು ಕಲರ್ಸ್ ಕನ್ನಡ ಇನ್ಸಾಟಾಗ್ರಾಮ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆ ಮಾಡಿದೆ.
ಈ ಭಾರಿಯ ಬಿಗ್ ಬಾಸ್ ಸೆಟ್ ಅನ್ನು ಮೈಸೂರು ಅರಮನೆಯ ಥೀಮ್ ನಲ್ಲಿ ನಿರ್ಮಾಣ ಮಾಡಿರುವುದು ವಿಶೇಷ. ಮೈಸೂರು ದಸರಾ ನಡೆಯುವಾಗ ಬಿಗ್ ಬಾಸ್ ಷೋ ಆರಂಭವಾಗುತ್ತಿರುವುದಕ್ಕೋ ಏನೋ ಮೈಸೂರು ಅರಮನೆಯ ಥೀಮ್ ನಲ್ಲೇ ಸೆಟ್ ನಿರ್ಮಾಣ ಮಾಡಲಾಗಿದೆ.
ಇನ್ನೂ ಬಿಗ್ ಬಾಸ್‌ನ ಸೆಟ್ ಅನ್ನು ಪರಿಚಯಿಸುವ ವಿಡಿಯೋದಲ್ಲಿ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಮಾತನಾಡಿದ್ದಾರೆ.
ನಮ್ಮ ಶ್ರೀಮಂತವಾಗಿರುವ ಕರ್ನಾಟಕವನ್ನು ಒಂದೇ ಜಾಗದಲ್ಲಿ ಸ್ಕೆಚ್ ಮಾಡಿದ್ರೇ, ನೋಡಲಿಕ್ಕೆ ಹೇಗಿರುತ್ತೆ, ಅಂತ ನೋಡಬೇಕು ಅಂದ್ರೆ, ಈಗಿರುತ್ತೆ. ಹೀಗೆ ಅರಮನೆಯನ್ನು ಉಳಿಸಿಕೊಳ್ಳಲಿಕ್ಕೆ ಎಷ್ಟೋ ಯುದ್ದಗಳು ನಡೆದು ಹೋಗಿವೆ. ಈ ಅರಮನೆಯಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲಿಕ್ಕೆ ಬಹಳ ಯುದ್ಧಗಳು ನಡೆಯಲಿವೆ. ನಮ್ಮ ನಾಡಿಗೆ ದಸರಾ ಹಬ್ಬ ಶುರುವಾಗಿ ಒಂದು ವಾರ ಆಯ್ತು. ನಮ್ಮ ಬಿಗ್ ಬಾಯ್ ಮನೆಯಲ್ಲಿ ಮಸ್ತಿ ಹಬ್ಬ ಈಗ ಶುರು ಎಂದು ನಿರೂಪಕ ಕಿಚ್ಚ ಸುದೀಪ್ ಹೇಳಿದ್ದಾರೆ.
ನಾಳೆ ( ಸೆಪ್ಟೆಂಬರ್ 28) ಸಂಜೆ 6 ಗಂಟೆಯಿಂದ ಬಿಗ್ ಬಾಸ್ ಷೋ ಆರಂಭವಾಗಲಿದೆ. ಈ ಭಾರಿಯ ಬಿಗ್ ಬಾಸ್ ನಲ್ಲಿ ಯಾರೆಲ್ಲಾ ಭಾಗಿಯಾಗುತ್ತಾರೆ ಎಂಬ ಬಗ್ಗೆ ರಾಜ್ಯದ ಜನರಿಗೂ ಕುತೂಹಲ ಇದೆ.
ಕಾಕ್ರೋಚ್ ಸುಧೀ ಭಾಗಿಯಾಗುವ ಬಗ್ಗೆ ನಿನ್ನೆ ವಿಡಿಯೋವೊಂದನ್ನು ಕಲರ್ಸ್ ಕನ್ನಡ ಬಿಡುಗಡೆ ಮಾಡಿ ಸುಳಿವು ನೀಡಿದೆ. ಇನ್ನುಳಿದಂತೆ ಬೇರೆ ಯಾರೆಲ್ಲಾ ಭಾಗಿಯಾಗುತ್ತಾರೆ ಎಂಬ ಸಸ್ಪೆನ್ಸ್ ಹಾಗೇ ಮುಂದುವರಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.