/newsfirstlive-kannada/media/media_files/2025/08/25/karnataka-mlc-nomination-2025-08-25-19-52-36.jpg)
ಜಕ್ಕಪ್ಪ, ಆರತಿ ಕೃಷ್ಣ, ರಮೇಶ್ ಬಾಬು ಪರಿಷತ್ ಗೆ ನಾಮನಿರ್ದೇಶನ
ಕರ್ನಾಟಕ ರಾಜ್ಯ ವಿಧಾನ ಪರಿಷತ್ ಗೆ ನಾಲ್ವರನ್ನು ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಹೈಕಮ್ಯಾಂಡ್ ಒಪ್ಪಿಗೆ ನೀಡಿದೆ. ತೀವ್ರ ಹಗ್ಗಜಗ್ಗಾಟದ ನಡುವೆಯೂ ನಾಲ್ವರ ನಾಮನಿರ್ದೇಶನಕ್ಕೆ ಕಾಂಗ್ರೆಸ್ ಹೈಕಮ್ಯಾಂಡ್ ನಿಂದ ಒಪ್ಪಿಗೆ ಸಿಕ್ಕಿದೆ.
ಹುಬ್ಬಳ್ಳಿ ಧಾರವಾಡದ ಕಾಂಗ್ರೆಸ್ ಪಕ್ಷದ ದಲಿತ ಮುಖಂಡ ಜಕ್ಕಪ್ಪರನ್ನು ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡಲು ಕಾಂಗ್ರೆಸ್ ಹೈಕಮ್ಯಾಂಡ್ ಒಪ್ಪಿಗೆ ನೀಡಿದೆ. ಇನ್ನೂ ಕಾಂಗ್ರೆಸ್ ನಿಂದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಆರತಿ ಕೃಷ್ಣರನ್ನು ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡಲು ಕಾಂಗ್ರೆಸ್ ಹೈಕಮ್ಯಾಂಡ್ ಒಪ್ಪಿಗೆ ನೀಡಿದೆ. ಜೊತೆಗೆ ಕಾಂಗ್ರೆಸ್ ಮಾಧ್ಯಮ ವಕ್ತಾರ ರಮೇಶ್ ಬಾಬುಗೆ ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ ನಾಮನಿರ್ದೇಶನ ಮಾಡಲಾಗುತ್ತಿದೆ. ಜೊತೆಗೆ ಮೈಸೂರಿನ ಪತ್ರಕರ್ತ ಶಿವಕುಮಾರ್ ರನ್ನು ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡಲಾಗುತ್ತಿದೆ. ಜಕ್ಕಪ್ಪ, ಆರತಿ ಕೃಷ್ಣ, ರಮೇಶ್ ಬಾಬು ಹಾಗೂ ಪತ್ರಕರ್ತ ಶಿವಕುಮಾರ್ ರನ್ನು ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡುವುದಕ್ಕೆ ಕಾಂಗ್ರೆಸ್ ಹೈಕಮ್ಯಾಂಡ್ ಒಪ್ಪಿಗೆ ನೀಡಿದೆ.
ಜಕ್ಕಪ್ಪ ಮತ್ತು ಆರತಿ ಕೃಷ್ಣ ಕಾಂಗ್ರೆಸ್ ಪಕ್ಷದ ಹೈಕಮ್ಯಾಂಡ್ ಕೋಟಾದ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದರೇ, ಇನ್ನೂ ಸಿಎಂ ಕೋಟಾದಿಂದ ರಮೇಶ್ ಬಾಬು ಮತ್ತು ಪತ್ರಕರ್ತ ಶಿವಕುಮಾರ್ ಆಯ್ಕೆಯಾಗಿದ್ದಾರೆ.
ಜಕ್ಕಪ್ಪ ಮತ್ತು ಪತ್ರಕರ್ತ ಶಿವಕುಮಾರ್ ದಲಿತ ಬಲಗೈ ಸಮುದಾಯದವರು. ಶಿವಕುಮಾರ್ ಸದ್ಯ ಮೈಸೂರಿನಲ್ಲಿ ಇಂಗ್ಲೀಷ್ ದಿನಪತ್ರಿಕೆಯ ಹಿರಿಯ ಪತ್ರಕರ್ತರಾಗಿದ್ದಾರೆ.
ಪತ್ರಕರ್ತ ಶಿವಕುಮಾರ್ ಹಾಗೂ ವಿಧಾನಪರಿಷತ್
ಆರತಿ ಕೃಷ್ಣ ಒಕ್ಕಲಿಗ ಸಮುದಾಯದವರಾಗಿದ್ದು, ಮಾಜಿ ಸಚಿವ ಬೇಗಾನೆ ರಾಮಯ್ಯನವರ ಮಗಳು. ಸದ್ಯ ಅನಿವಾಸಿ ಭಾರತೀಯ ಸೆಲ್ ಉಪಾಧ್ಯಕ್ಷೆಯಾಗಿದ್ದಾರೆ.
ಇನ್ನೂ ರಮೇಶ್ ಬಾಬು ಕಾಂಗ್ರೆಸ್ ಪಕ್ಷದ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಗೆ ಆಯ್ಕೆಯಾಗಿದ್ದರು. ಬಳಿಕ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಪಕ್ಷ ಸೇರಿದ್ದರು. ವೃತ್ತಿಯಲ್ಲಿ ವಕೀಲರು. ರಮೇಶ್ ಬಾಬು ಓಬಿಸಿ ಸಮುದಾಯದವರು. ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಟೌನ್ ನಿವಾಸಿ.
ಈ ಮೊದಲು ಕಾಂಗ್ರೆಸ್ ಹೈಕಮ್ಯಾಂಡ್ ವಿಧಾನಪರಿಷತ್ ನಾಮನಿರ್ದೇಶನ ಸ್ಥಾನಗಳಿಗೆ ದಲಿತ ಹೋರಾಟಗಾರ ಡಿ.ಜಿ.ಸಾಗರ್ ಮತ್ತು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೆಸರು ಅನ್ನು ಅಂತಿಮಗೊಳಿಸಿತ್ತು. ಆದರೇ, ಪಟ್ಟಿಗೆ ವಿರೋಧ ವ್ಯಕ್ತವಾದ ಬಳಿಕ ಪಟ್ಟಿಯನ್ನು ತಡೆ ಹಿಡಿಯಲಾಗಿತ್ತು. ಈಗ ಅಂತಿಮವಾಗಿ ಪಟ್ಟಿಯಲ್ಲಿ ಡಿ.ಜಿ.ಸಾಗರ್ ಮತ್ತು ದಿನೇಶ್ ಅಮೀನುಮಟ್ಟ ಬದಲು ಜಕ್ಕಪ್ಪ ಹಾಗೂ ಪತ್ರಕರ್ತ ಶಿವಕುಮಾರ್ ಸ್ಥಾನ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ