ನಾಳೆ ಕಾಂಗ್ರೆಸ್ ನಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ, ಲೋಕಭವನಕ್ಕೆ ಱಲಿ : ಮನರೇಗಾ ಮರು ಜಾರಿಗೆ ಆಗ್ರಹ

ದೇಶದಲ್ಲಿ ಮನರೇಗಾ ಮರುಜಾರಿಗೆ ಆಗ್ರಹಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟನಾ ಱಲಿ ಹಾಗೂ ಲೋಕಭವನಕ್ಕೆ ಮುತ್ತಿಗೆ ಹಮ್ಮಿಕೊಂಡಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಕಾಂಗ್ರೆಸ್ ನಾಯಕರು ಭಾಗಿಯಾಗುವರು.

author-image
Chandramohan
CONGRESS MNREGA REINSTATE RALLY
Advertisment

ಮನರೇಗಾ VS ವಿಬಿ ಜಿ ರಾಮ್ ಜಿ.. ಕಾಂಗ್ರೆಸ್​​ VS ಬಿಜೆಪಿ.. ರಾಜ್ಯದಲ್ಲಿ ಮಹಾ ಕದನವೇ ರ್ಪಟ್ಟಿದೆ.. ಜಂಟಿ ಅಧಿವೇಶದಲ್ಲಿ ಜಿ ರಾಮ್ ಜಿ ಕುರಿತಾಗಿ ಸರ್ಕಾರದ ಭಾಷಣವನ್ನ ರಾಜ್ಯಪಾಲರು ಕೈಬಿಟ್ಟ ಬಳಿಕ ಸರ್ಕಾರ ಇದನ್ನೇ ಅಸ್ತ್ರವಾಗಿಸಿದೆ.. ನಾಳೆ ಕೇಂದ್ರ ಸರ್ಕಾರದ ವಿರುದ್ಧ ಬೃಹತ್​​​ ಹೋರಾಟವನ್ನೇ ಕಾಂಗ್ರೆಸ್ ಹಮ್ಮಿಕೊಂಡಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ  ಲೋಕಭವನಕ್ಕೆ ಮುತ್ತಿಗೆ ಹಾಕಲು ನಿರ್ಧಾರ ಮಾಡಲಾಗಿದೆ..
ಫ್ರೀಡಂಪಾರ್ಕ್​ನಲ್ಲಿ ಮನರೇಗಾ ಹೋರಾಟಕ್ಕೆ ಸಜ್ಜಾಯ್ತು ಕೈಪಡೆ! 
ನಾಳೆ ಲೋಕಭವನ ಮುತ್ತಿಗೆ, ಜಿ ರಾಮ್ ಜಿ ಕಾಯ್ದೆ ವಿರುದ್ಧ ಕಹಳೆ! 
ವಿಧಾನಮಂಡಲ ಅಧಿವೇಶನದ ನಡುವೆ ಮನರೇಗಾ ಹೋರಾಟವನ್ನ ಕಾಂಗ್ರೆಸ್ ಹಮ್ಮಿಕೊಂಡಿದೆ.. ಫ್ರೀಡಂಪಾರ್ಕ್​ನಲ್ಲಿ ಸಭೆ ಸೇರಿ ಅಲ್ಲಿಂದ ರಾಜಭವನಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಪ್ಲಾನ್​​​ ಮಾಡಿದೆ.. 

ಜಂಟಿ ಅಧಿವೇಶನದಲ್ಲಿ ಪೂರ್ಣ ಭಾಷಣ ಮಾಡದ ರಾಜ್ಯಪಾಲರು
ಭಾಷಣವನ್ನ ಓದದೆ ಇದ್ದಿದ್ದಕ್ಕೆ ಪ್ರತಿಭಟನೆಯ ರೂಪದಲ್ಲಿ ಪ್ರತಿಕ್ರಿಯೆ
ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಮಾಡಿದ್ದ ನಿರ್ಧಾರ ಕೈಬಿಟ್ಟ ಹಸ್ತ 

ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸರ್ಕಾರದ ಭಾಷಣ ಓದದೆ ಇದ್ದಿದ್ದಕ್ಕೆ ಪ್ರತಿಭಟನೆ ರೂಪದಲ್ಲಿ ಕಾಂಗ್ರೆಸ್  ಪ್ರತಿಕ್ರಿಯೆ ನೀಡ್ತಿದೆ. ಈ ಮೊದಲು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಮಾಡಿದ್ದ ನಿರ್ಧಾರ ಕೈಬಿಟ್ಟಿದೆ. ನಾಳೆ ಬೆಳೆಗ್ಗೆ 10.30 ಗಂಟೆಗೆ ಫ್ರೀಡಂಪಾರ್ಕ್​ನಿಂದ ಲೋಕ ಭವನದವರೆಗೂ ಱಲಿ ನಡೆಯಲಿದೆ. ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಸಚಿವರು, ಎಲ್ಲಾ ಶಾಸಕರು, ಸಂಸದರು, ಮುಂಚೂಣಿ ಘಟಕಗಳ ಅಧ್ಯಕ್ಷರು, ಕೆಪಿಸಿಸಿ ಪದಾಧಿಕಾರಿಗಳು ಭಾಗಿ ಆಗ್ತಿದ್ದಾರೆ..
ನಾಳೆ ಮನರೇಗಾ ಮರು ಜಾರಿಗೆ ಆಗ್ರಹಿಸಿ ಹೋರಾಟ ಇದೆ. ಹೋರಾಟಕ್ಕೆ ರಾಜ್ಯ ಕಾಂಗ್ರೆಸ್  ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬರಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 
ಡಿಸಿಎಂ ಡಿ.ಕೆ  ಶಿವಕುಮಾರ್ ಮಾತನಾಡಿ,  ಫ್ರೀಡಂ ಪಾರ್ಕ್ ನಿಂದ ರಾಜಭವನ ಚಲೋ ಹಮ್ಮಿಕೊಂಡಿದ್ದೇವೆ. ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧಾರ ಮಾಡಿದೆವು. ಆದರೆ ಈಗ ಅದು ಬೇಡ ಅಂತ ಬಿಟ್ಟಿದ್ದೇವೆ. ನಾಳೆ ನಮ್ಮ ಎಲ್ಲಾ ಶಾಸಕರು, ಸಂಸದರು ಪಕ್ಷದ ನಾಯಕರು ಭಾಗಿಯಾಗ್ತಾರೆ. ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡ್ತೇವೆ. ಮಹಾತ್ಮ ಗಾಂಧಿಯ ಹೆಸರನ್ನು ಮತ್ತೆ ಜಾರಿಗೆ ತರಬೇಕು. ರಾಷ್ಟ್ರೀಯ ನಾಯಕರಾಗಿ ಸುರ್ಜೆವಾಲಾ ಬರ್ತಾರೆ, ಸಿಎಂ ರಾಷ್ಟ್ರೀಯ ನಾಯಕರೇ ಅಲ್ವಾ?. ನಾನು ಹಳ್ಳಿ ನಾಯಕ ಎಂದು ತಮಾಷೆಯಾಗಿ ಡಿ.ಕೆ‌ ಶಿವಕುಮಾರ್ ಹೇಳಿದರು. 
ಬಿಜೆಪಿ ರಾಜ್ಯಗಳು ಇವೆಯಲ್ಲ, ಅವರೇ ಹೊಸ ವಿಬಿಜಿ ಬಿಲ್ ಜಾರಿಗೆ ತರಲಿಕ್ಕೆ ಸಾಧ್ಯವೇ ಇಲ್ಲ . ಇದಕ್ಕೆ ಅನುದಾನ ಒದಗಿಸಿಕೊಡುವುದು ಯಾರು? ಯಾವ ರಾಜ್ಯಗಳೂ ಅನುದಾನ ನೀಡಲು ಸಾಧ್ಯವಿಲ್ಲ . ಕೆಲವರು ಚರ್ಚೆಗೆ ಬರ್ತೀವಿ ಅಂದಿದ್ದಾರೆ. ಅಸೆಂಬ್ಲಿಯಲ್ಲಿ ನಾವು ಅದಕ್ಕೆ ಎಲ್ಲ ಚರ್ಚೆಗೆ ಉತ್ತರವನ್ನು ಕೊಡುವುದಕ್ಕೆ ಸಿದ್ಧರಾಗಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. 
ನರೇಗಾದಲ್ಲಿ ಅಕ್ರಮ ಆಗಿದ್ರೆ ಚರ್ಚೆಗೆ ಸಿದ್ಧ ಎಂದು ಮತ್ತೆ ಕುಮಾರಸ್ವಾಮಿ ಹಾಗೂ ಬಿಜೆಪಿಗೆ ಡಿ.ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.  ಅಕ್ರಮ ಆಗಿದೆ ಅಂತ ಹೇಳುವ ಬಿಜೆಪಿಗರು ನಮ್ಮ ಜತೆ ಚರ್ಚೆಗೆ ಬರಲಿ. ನರೇಗಾ ಯೋಜನೆಯಲ್ಲಿ ಅಕ್ರಮ ಆಗಿದ್ದರೆ ತನಿಖೆ ಮಾಡಿಸಲಿ. ನಮ್ಮ ಕನಕಪುರಕ್ಕೆ ಅವಾರ್ಡ್ ಬೇರೆ ಸಿಕ್ಕಿದೆ. ಹೇಗೆ ಕೊಟ್ರು ಈ ಅವಾರ್ಡ್? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದರು. 
ಇಂದು ಡಿಸಿಎಂ  ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆದ  ಡಿ.ಕೆ.ಶಿವಕುಮಾರ್, ಫ್ರೀಡಂ ಪಾರ್ಕ್ ಗೆ ಭೇಟಿ ನೀಡಿ ನಾಳೆಯ ಪ್ರತಿಭಟನಾ ಸಭೆ, ಲೋಕಭವನ ಮುತ್ತಿಗೆ ಸಿದ್ದತೆಯನ್ನು ಪರಿಶೀಲಿಸಿದ್ದರು. 

CONGRESS MNREGA REINSTATE RALLY (1)


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Congress MNREGA NAME CHANGES AS VB RAM G SCHEME DCM DK SHIVAKUMAR mnrega
Advertisment