ಮಹೇಶ್ ಶೆಟ್ಟಿ ತಿಮ್ಮರೋಡಿರನ್ನು 2 ಗಂಟೆ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ರನ್ನು ನಿಂದಿಸಿದ ಕೇಸ್ ನಲ್ಲಿ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮ್ಮರೋಡಿರನ್ನು ಬ್ರಹ್ಮಾವರ ಕೋರ್ಟ್ 2 ಗಂಟೆ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

author-image
Chandramohan
MAHESH_TIMARODI

ಮಹೇಶ್ ಶೆಟ್ಟಿ ತಿಮ್ಮರೋಡಿ 2 ಗಂಟೆ ಪೊಲೀಸ್ ಕಸ್ಟಡಿಗೆ

Advertisment
  • ಮಹೇಶ್ ಶೆಟ್ಟಿ ತಿಮ್ಮರೋಡಿರನ್ನು ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್
  • ಬ್ರಹ್ಮಾವರ ಕೋರ್ಟ್ ನಿಂದ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ
  • ಬಿಜೆಪಿಯ ಬಿ.ಎಲ್‌.ಸಂತೋಷ್ ನಿಂದನೆ ಕೇಸ್ ನಲ್ಲಿ ಪೊಲೀಸ್ ಕಸ್ಟಡಿಗೆ


 ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ರನ್ನು ನಿಂದಿಸಿದ ಆರೋಪದ ಕೇಸ್ ನಲ್ಲಿ ಮಹೇಶ್ ಶೆಟ್ಟಿ ತಿಮ್ಮರೋಡಿರನ್ನು   ಉಡುಪಿ ಜಿಲ್ಲೆಯ  ಬ್ರಹ್ಮಾವರ ಪೊಲೀಸರು ಬಂಧಿಸಿದ್ದರು. ಬಳಿಕ ಕೋರ್ಟ್ ಗೆ ಹಾಜರುಪಡಿಸಿದ್ದರು. ಕೋರ್ಟ್ ಮಹೇಶ್ ಶೆಟ್ಟಿ ತಿಮ್ಮರೋಡಿರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.  ಇಂದು ಮತ್ತೆ ಮಹೇಶ್ ಶೆಟ್ಟಿ ತಿಮ್ಮರೋಡಿರನ್ನು ಬ್ರಹ್ಮಾವರ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಆರೋಪಿ ಮಹೇಶ್ ಶೆಟ್ಟಿ ತಿಮ್ಮರೋಡಿರನ್ನು ಪೊಲೀಸ್ ವಶಕ್ಕೆ ನೀಡಬೇಕೆಂದು ಪ್ರಾಸಿಕ್ಯೂಷನ್ ಪರ ವಕೀಲರು ಕೋರ್ಟ್ ಗೆ ಮನವಿ ಮಾಡಿಕೊಂಡರು. ಮೊನ್ನೆಯೇ ಕೋರ್ಟ್ ಗೆ  ಹಾಜರುಪಡಿಸಿದಾಗ, ಆರೋಪಿ ಮಹೇಶ್ ಶೆಟ್ಟಿ ತಿಮ್ಮರೋಡಿರನ್ನು ಪೊಲೀಸ್ ವಶಕ್ಕೆ ಏಕೆ ಕೇಳಲಿಲ್ಲ ಎಂದು ಕೋರ್ಟ್ ಪೊಲೀಸರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.  ತನಿಖಾಧಿಕಾರಿಯನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಮಹೇಶ್ ಶೆಟ್ಟಿ ತಿಮ್ಮರೋಡಿ ಕಸ್ಟಡಿಗೆ  ಬೇಕಿದ್ದರೇ, ಬೆಳಿಗ್ಗೆಯೇ ಹಾಜರುಪಡಿಸಬೇಕಾಗಿತ್ತು ಎಂದು ಕೋರ್ಟ್ ಹೇಳಿದೆ. ಬಳಿಕ ಆರೋಪಿ ಮಹೇಶ್ ಶೆಟ್ಟಿ ತಿಮ್ಮರೋಡಿರನ್ನು 2 ಗಂಟೆಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.  ಇಂದು ಮಧ್ಯಾಹ್ನ 3.40 ರವರೆಗೆ ಮಹೇಶ್ ಶೆಟ್ಟಿ ತಿಮ್ಮರೋಡಿರನ್ನು ಪೊಲೀಸ್ ಕಸ್ಟಡಿಗೆ ನೀಡಿ  ಬ್ರಹ್ಮಾವರ  ತಾಲ್ಲೂಕು ಜೆಎಂಎಫ್‌ಸಿ ಕೋರ್ಟ್ ಆದೇಶಿಸಿದೆ. ಮಹಜರು ಮತ್ತು ರಿಕವರಿ ಏನೇ ಇದ್ದರೂ 2 ಗಂಟೆಯಲ್ಲಿ ಪೂರ್ಣಗೊಳಿಸಿ ಎಂದು ಕೋರ್ಟ್ ಪೊಲೀಸರಿಗೆ ಹೇಳಿದೆ. ಇಂದು ಮಧ್ಯಾಹ್ನ 3.40 ಕ್ಕೆ ಮತ್ತೆ ಮಹೇಶ್ ಶೆಟ್ಟಿ ತಿಮ್ಮರೋಡಿರನ್ನು ಕೋರ್ಟ್ ಗೆ ಹಾಜರುಪಡಿಸಬೇಕಾಗಿದೆ. 

Mahesh Thimaroddi
Advertisment