/newsfirstlive-kannada/media/media_files/2025/09/22/infosys-sudha-murthy-2025-09-22-18-13-32.jpg)
ಇನ್ಪೋಸಿಸ್ ಫೌಂಡೇಷನ್ ಮಾಜಿ ಮುಖ್ಯಸ್ಥೆ ಸುಧಾಮೂರ್ತಿ
ಬೆಂಗಳೂರಿನ ಇನ್ಫೋಸಿಸ್ ಫೌಂಡೇಷನ್ ಮಾಜಿ ಮುಖ್ಯಸ್ಥೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿಗೆ ಸೈಬರ್ ವಂಚಕರು ಯಾಮಾರಿಸಲು ಯತ್ನಿಸಿ ವಿಫಲವಾಗಿದ್ದಾರೆ. ದೂರ ಸಂಪರ್ಕ ಸಚಿವಾಲಯದ ಉದ್ಯೋಗಿ ಅಂತ ಹೇಳಿ ವಂಚನೆ ಯತ್ನ ಮಾಡಿದ್ದಾರೆ. ಸೆಪ್ಟೆಂಬರ್ 5 ರಂದು ಕರೆ ಮಾಡಿದ್ದ ವಂಚಕರು, ಸೈಬರ್ ವಂಚನೆಗೆ ಯತ್ನಿಸಿದ್ದಾರೆ. ನಿಮ್ಮ ನಂಬರ್ ಆಧಾರ್ ಗೆ ಲಿಂಕ್ ಮಾಡದೆ ನೋಂದಾಯಿಸಲಾಗಿದೆ ಎಂದು ಹೇಳಿ ವೈಯಕ್ತಿಕ ಮಾಹಿತಿ ಪಡೆಯಲು ಸೈಬರ್ ಖದೀಮ ಯತ್ನಿಸಿದ್ದ. ಜೊತೆಗೆ ನಿಮ್ಮ ನಂಬರ್ ನಿಂದ ಅಶ್ಲೀಲ ವಿಡಿಯೋ ಕಳಿಸಲಾಗ್ತಿದೆ. ಅದನ್ನು ನಿಲ್ಲಿಸಲಾಗಿದೆ ಎಂದು ಬೆದರಿಕೆ ಹಾಕಿದ್ದಾನೆ ಅಂತ ದೂರು ನೀಡಿದ್ದಾರೆ. ಟ್ರೂಕಾಲರ್ ನಲ್ಲಿ ಆ ನಂಬರ್ ಚೆಕ್ ಮಾಡಿದಾಗ ಟೆಲಿಕಾಂ ಡೆಪಾರ್ಟ್ ಮೆಂಟ್ ಅಂತ ಬಂದಿದೆ. ಡಾಕ್ಟರ್ ಸುಧಾಮೂರ್ತಿ ಅವರು ಸೈಬರ್ ವಂಚಕರ ಟ್ರ್ಯಾಪ್ ಗೆ ಒಳಗಾಗದೆ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಧಾಮೂರ್ತಿ ಅವರು ಯಾವುದೇ ಹಣವನ್ನು ಸೈಬರ್ ವಂಚಕರಿಗೆ ನೀಡಿಲ್ಲ. ತಕ್ಷಣವೇ ಎಚ್ಚೆತ್ತುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ