/newsfirstlive-kannada/media/media_files/2025/12/27/darshan-sudeep-1-2025-12-27-17-18-01.jpg)
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ದರ್ಶನ್ ತೂಗುದೀಪ ನಡುವಿನ ಸ್ನೇಹ ಸಂಬಂಧ ಸರಿಯಾಗಿಲ್ಲ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಸುದೀಪ್ ಮತ್ತು ದರ್ಶನ್ ದೂರವಾಗಿದ್ದು ಮಾತ್ರವಲ್ಲದೇ ಇವರ ಅಭಿಮಾನಿಗಳ ನಡುವೆಯೂ ಬಿರುಕು ಬಿಟ್ಟಿದೆ. ಬರೋಬ್ಬರಿ 17 ವರ್ಷಗಳ ಹಿಂದಿನಿಂದಲೂ ಇವರಿಬ್ಬರ ಫ್ಯಾನ್ಸ್ ವಾರ್ ನಡೆಯುತ್ತಿದೆ. ಅಂದು ಶುರುವಾಗಿದ್ದ ವಾರ್​, ಇಂದಿಗೂ ನಡೆಯುತ್ತಲೇ ಇದೆ.
ಇತ್ತೀಚೆಗೆ ಮಾರ್ಕ್ ಸಿನಿಮಾ ಪ್ರಚಾರದ ವೇಳೆ ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್, ಹೊರಗಡೆ ಒಂದು ಪಡೆಯಿದೆ.. ಅದರ ವಿರುದ್ಧ ಯುದ್ಧಕ್ಕೆ ಸಿದ್ಧ ಎಂಬ ಮಾತನ್ನು ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೆಲವು ವ್ಯಕ್ತಿಗಳು ದರ್ಶನ್​ ಅವರು ಇಲ್ಲದೇ ಇರುವಾಗ ಅವರ ಬಗ್ಗೆ ಅವರ ಫ್ಯಾನ್ಸ್​ ಬಗ್ಗೆ ವೇದಿಕೆ ಮೇಲೆ ನಿಂತು ಮಾತನಾಡುವುದು, ಹೊರಗಡೆ ಮಾತನಾಡುವುದು ಎಲ್ಲಾ ಮಾಡ್ತಿದ್ದಾರೆ. ಅದೇ ಜನಗಳು ದರ್ಶನ್​ ಇದ್ದಾಗ ಅವರು ಬೆಂಗಳೂರಲ್ಲಿ ಇರ್ತಾರಾ ಇಲ್ವಾ ಅಂತಾನೇ ಗೊತ್ತಾಗಲ್ಲ. ಎಲ್ಲಿ ಮಾಯ ಆಗಿರ್ತಾರೆ ಅಂತಾನೂ ಗೊತ್ತಾಗಲ್ಲ.. ದರ್ಶನ್​ ಅವರು ಹೇಳಿರೋ ಹಾಗೇ ತಲೆ ಕೆಡಿಸಿಕೊಳ್ಳಬಾರದು ಎಂದಿದ್ದರು.
ಈ ಬಗ್ಗೆ ಸುದೀಪ್ ಮಾತನಾಡಿ, ಯಾರಿಗಾದ್ರೂ ವಾರ್ನಿಂಗ್ ಮಾಡಬೇಕಿದ್ರೇ ವೇದಿಕೆ ಬೇಕಿಲ್ಲ. ಪೈರಸಿ ಎಂದು ಹೇಳುವ ಅವಶ್ಯಕತೆ ಇರಲಿಲ್ಲ.. ಪೈರಸಿ ಬಗ್ಗೆ ವಾರ್ನ್​ ಮಾಡಿದ್ದು ತಪ್ಪಾ. ನಾನು ಪೈರಸಿ ಮಾಡುವವರ ಬಗ್ಗೆ ಈ ಹೇಳಿಕೆ ನೀಡಿದ್ದೆ ಎಂದು ಸ್ಪಷ್ಟೀಕರಣ ನೀಡಿದ್ದರು. ಇಷ್ಟಾದ್ರೂ ಕೂಡ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ವಾರ್ ತಾರಕಕ್ಕೇರಿದೆ. ಈ ಬೆನ್ನಲ್ಲೇ ಹಿರಿಯ ನಟಿ ತಾರಾ ಫ್ಯಾನ್ಸ್ ವಾರ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ....
/filters:format(webp)/newsfirstlive-kannada/media/media_files/2025/12/27/darshan-sudeep-2-2025-12-27-17-19-23.jpg)
‘ಅವರಿಬ್ಬರ ನಡುವೆ ವೈಮನಸ್ಸು ಇಲ್ಲಾ’ ಎಂದ ನಟಿ ತಾರಾ
ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್​ಗೆ ಸಂಬಂಧಿಸಿದಂತೆ ಹಿರಿಯ ನಟಿ ತಾರಾ ಮಾತನಾಡಿ, ನಮಗೆಲ್ಲರಿಗೋ ಒಂದೇ ಸ್ಟಾರ್​.. ಅದು ಕನ್ನಡ ಸಿನಿಮಾ​.. ಅದು ಮಾತ್ರ ಪರ್ಮನೆಂಟ್​ ಸ್ಟಾರ್​.. ಅವರಿಬ್ಬರು ಒಳ್ಳೆಯವರು. ನನಗೆ ಗೊತ್ತಿರುವ ರೀತಿ ಅವರ ನಡುವೆ ಆ ರೀತಿಯಾಗಿ ಏನು ಇಲ್ಲ. ಇಬ್ಬರು ಒಬ್ಬರನೊಬ್ಬರು ಗೌರವಿಸಿಕೊಳ್ತಾರೆ. ಇಬ್ಬರಲ್ಲೂ ಆ ರೀತಿಯ ವೈಮನಸ್ಸು ಇಲ್ಲ ಎಂದು ಹೇಳಿದ್ದಾರೆ. ಜೊತೆಗೆ ನನಗೆ ಇದರಲೆಲ್ಲ ನಂಬಿಕೆ ಇಲ್ಲ... ನಮಗಿರುವುದು ಒಳ್ಳೆಯ ಸಿನಿಮಾ ಬರಬೇಕು.. ಒಳ್ಳೆಯ ಸಿನಿಮಾನ ಪ್ರೋತ್ಸಾಹ ಮಾಡೋಣ ಎಂದಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us