/newsfirstlive-kannada/media/media_files/2025/09/24/dasratha-died-on-stage-2025-09-24-11-59-20.jpg)
ವೇದಿಕೆಯ ಮೇಲೆಯೇ ದಶರಥ ಪಾತ್ರಧಾರಿಗೆ ಹಾರ್ಟ್ ಅಟ್ಯಾಕ್
ರಿಯಲ್ ಲೈಫ್ ನ ದುರಂತವೊಂದು ರಾಮಲೀಲಾ ನಾಟಕದ ವೇದಿಕೆಯ ಮೇಲೆಯೇ ನಡೆದಿದೆ. ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಮಹಾರಾಜ ದಶರಥನ ಪಾತ್ರಧಾರಿ ಹಾರ್ಟ್ ಅಟ್ಯಾಕ್ ನಿಂದ ಸಿಂಹಾಸದ ಮೇಲೆ ಕುಳಿತಿದ್ದಾಗಲೇ ಸಾವನ್ನಪ್ಪಿದ್ದಾರೆ. ಸಿಂಹಾಸನದ ಮೇಲೆ ಕುಳಿತಿದ್ದ ದಶರಥ್ ಮಹಾರಾಜ ಪಾತ್ರಧಾರಿ ತಮ್ಮ ಎಡಭಾಗಕ್ಕೆ ಉರುಳಿಬಿದ್ದರು. ಪಕ್ಕದಲ್ಲಿದ್ದ ಮತ್ತೊಬ್ಬ ಪಾತ್ರಧಾರಿ ತಕ್ಷಣವೇ ಅವರನ್ನು ಹಿಡಿದುಕೊಂಡರು. ತಕ್ಷಣವೇ ನಾಟಕಕ್ಕೆ ಪರದೆ ಎಳೆದು, ಉಳಿದವರು ಮಹಾರಾಜ ದಶರಥ ಪಾತ್ರಧಾರಿಯ ನೆರವಿಗೆ ಧಾವಿಸಿದ್ದರು. ದಶರಥ ಪಾತ್ರಧಾರಿ ಅಮರೇಶ್ ಮಹಾಜನ್ ರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೇ, ವೈದ್ಯರು ಅಮರೇಶ್ ಮಹಾಜನ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದರು.
ದಶರಥ ಮಹಾರಾಜ ಪಾತ್ರಧಾರಿ ಅಮರೇಶ್ ಮಹಾಜನ್ ಗೆ ಹಾರ್ಟ್ ಅಟ್ಯಾಕ್ ಆದ ದೃಶ್ಯದ ವಿಡಿಯೋ ಲಿಂಕ್ ಅನ್ನು ಇಲ್ಲಿ ನೀಡಿದ್ದೇವೆ. ತಾವು ನೋಡಬಹುದು.
हिमाचल प्रदेश के चंबा में आयोजित रामलीला में दशरथ का रोल प्ले कर रहे 73 साल के अमरेश की अचानक मौत हो गई। उन्होंने इस बार पहले की कह दिया था कि ये उनकी आखिरी रामलीला होगी। राम–सीता स्वयंवर से पहले दशरथ दरबार के दौरान ये घटनाक्रम हुआ। pic.twitter.com/oBFoqslcEA
— Sachin Gupta (@SachinGuptaUP) September 24, 2025
ದಶರಥ ಪಾತ್ರಧಾರಿ ಅಮರೇಶ್ ಮಹಾಜನ್ ಕಳೆದ 25 ವರ್ಷಗಳಿಂದ ರಾಮಲೀಲಾ ನಾಟಕದಲ್ಲಿ ದಶರಥ ಇಲ್ಲವೇ ರಾವಣನ ಪಾತ್ರ ಮಾಡುತ್ತಿದ್ದಾರೆ. ವಯಸ್ಸಾಗುತ್ತಿದ್ದರೂ, ಪ್ರತಿ ವರ್ಷವೂ ನಾಟಕದ ರಿಹರ್ಸಲ್ ಮಾಡಿ, ನಾಟಕದಲ್ಲಿ ಅದ್ಭುತವಾಗಿ ಅಭಿನಯಿಸುತ್ತಿದ್ದರು. ಈ ವರ್ಷ ತಮ್ಮ ಕೊನೆಯ ನಾಟಕ ಆಡುವುದಾಗಿ ಹೇಳಿದ್ದರು. ಈ ವರ್ಷದ ನಾಟಕದ ಬಳಿಕ ಮತ್ತೆ ನಾಟಕ ಆಡಲ್ಲ ಎಂದು ಹೇಳಿದ್ದರು. ಆದರೇ, ವಿಪರ್ಯಾಸವೆಂದರೇ, ಅದು ನಿಜವಾಗಿದೆ.
ಕಳೆದ ರಾತ್ರಿ ರಾಮಲೀಲಾ ಮೈದಾನ ಅದ್ದೂರಿಯಾಗಿ ನಡೆಯುತ್ತಿತ್ತು. ದಶರಥ ಮಹಾರಾಜನ ಪಾತ್ರಧಾರಿ ಅಮರೇಶ್ ಮಹಾಜನ್, ಸಿಂಹಾಸನದ ಮೇಲೆ ಕುಳಿತು ಡೈಲಾಗ್ ಗಳನ್ನು ಹೊಡೆಯುತ್ತಿದ್ದರು. ಆದರೇ, ತಮ್ಮ ಡೈಲಾಗ್‌ನ ಮಧ್ಯೆಭಾಗದಲ್ಲಿ ತಮ್ಮ ಎಡಭಾಗಕ್ಕೆ ವಾಲಿ ಕುಸಿದುಬಿದ್ದರು. ಪಕ್ಕದಲ್ಲಿದ್ದ ಪಾತ್ರಧಾರಿಗೆ ಏನೂ ಮಾಡಬೇಕೆಂದು ಗೊತ್ತಾಗದೇ, ಗೊಂದಲಕ್ಕೀಡಾದರು. 10 ಸೆಕೆಂಡ್ ಕಳೆದ ಬಳಿಕ ಅಕ್ಕಪಕ್ಕದವರನ್ನು ನೆರವಿಗೆ ಕರೆದಿದ್ದಾರೆ. ತಕ್ಷಣವೇ ನಾಟಕದ ಪರದೆ ಎಳೆದು, ದಶರಥ ಪಾತ್ರಧಾರಿ ಅಮರೇಶ್ ಮಹಾಜನ್ ರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೇ, ಆಸ್ಪತ್ರೆಯಲ್ಲಿ ವೈದ್ಯರು ಅಮರೇಶ್ ಮಹಾಜನ್ ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.