/newsfirstlive-kannada/media/media_files/2025/09/04/harihara-mla-bp-harish-and-sp-uma-2025-09-04-16-39-42.jpg)
ಶಾಸಕ ಬಿ.ಪಿ. ಹರೀಶ್ ಹಾಗೂ ಎಸ್.ಪಿ. ಉಮಾ ಪ್ರಶಾಂತ್
ದಾವಣಗೆರೆ ಎಸ್‌ಪಿ ಉಮಾಪ್ರಶಾಂತ್ ರನ್ನು ನಾಯಿಗೆ ಹೋಲಿಸಿದ್ದ ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಬಂಧನ ಭೀತಿ ಎದುರಾಗಿದೆ. ಕಳೆದ ರಾತ್ರಿ ಬಿ.ಪಿ ಹರೀಶ್ ಗೆ ದಾವಣಗೆರೆ ನಗರದ ಕೆಟಿಜೆ ಪೊಲೀಸ್ ಠಾಣೆಯ ಪೊಲೀಸರು ನೋಟೀಸ್ ನೀಡಿದ್ದಾರೆ. ಕಳೆದ ರಾತ್ರಿ ಪೊಲೀಸರು ಬಿ.ಪಿ.ಹರೀಶ್ ಮನೆಗೆ ತೆರಳಿದ್ದರು. ಆದರೇ, ಮನೆಯಲ್ಲಿ ಶಾಸಕ ಬಿ.ಪಿ.ಹರೀಶ್ ಇರಲಿಲ್ಲ. ಹೀಗಾಗಿ ಮನೆಯವರಿಗೆ ನೋಟೀಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗಲು ನೋಟೀಸ್ ನಲ್ಲಿ ಪೊಲೀಸರು ತಿಳಿಸಿದ್ದಾರೆ.
ಶಾಸಕರನ್ನ ಬಂಧಿಸಲು ಸ್ಪೀಕರ್ ಅನುಮತಿ ಬೇಕು. ಈಗಾಗಲೇ ನೋಟಿಸ್ ನೀಡಿ ಸ್ಪೀಕರ್ ಅನುಮತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಶಾಸಕ ಬಿ.ಪಿ. ಹರೀಶ್ ಮೇಲೆ ಮೂರು ಸೆಕ್ಷನ್ ಅಡಿ ಪ್ರಕರಣ ದಾಖಲಿಸಿರುವ ಪೊಲೀಸರು ಬಂಧನಕ್ಕೂ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಗೆ ಈಗ ಬಂಧನದ ಭೀತಿ ಎದುರಾಗಿದೆ.
ತಮ್ಮನ್ನು ನಿಂದಿಸಿದ ಶಾಸಕ ಬಿ.ಪಿ.ಹರೀಶ್ ವಿರುದ್ಧ ಎಸ್ಪಿ ಉಮಾ ಪ್ರಶಾಂತ್, ಮಹಿಳಾ ಆಯೋಗಕ್ಕೂ ದೂರು ನೀಡುತ್ತೀರಿ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ್ದ ಎಸ್‌ಪಿ ಉಮಾ ಪ್ರಶಾಂತ್, ಈ ಬಗ್ಗೆ ಯೋಚನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ಉಮಾಪ್ರಶಾಂತ್ ಹೇಳಿದ್ದಾರೆ. ಈಗಾಗಲೇ ನಾನು ಕೆಟಿಜೆ ನಗರ ಠಾಣೆಗೆ ದೂರು ನೀಡಿದ್ದೇನೆ. ಮಹಿಳಾ ಆಯೋಗಕ್ಕೆ ದೂರು ನೀಡುವ ಬಗ್ಗೆ ಯೋಚನೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ. ದಾವಣಗೆರೆಯಲ್ಲಿ ತಮ್ಮ ದೂರಿನ ಬಗ್ಗೆ ಎಸ್.ಪಿ. ಉಮಾ ಪ್ರಶಾಂತ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್‌ರನ್ನು ಪೊಮೇರೇನಿಯನ್ ನಾಯಿಗೆ ಶಾಸಕ ಬಿ.ಪಿ.ಹರೀಶ್ ಹೋಲಿಸಿದ್ದರು. ಸಚಿವ ಎಸ್.ಎಸ್.ಮಲ್ಲಿಕಾರ್ಜುನ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಎಸ್.ಪಿ. ಉಮಾ ಪ್ರಶಾಂತ್ ರನ್ನು ಟೀಕೆ ಮಾಡಿದ್ದರು. 'ದಾವಣಗೆರೆ ಎಸ್‌ಪಿ ಪೊಮೇರೇನಿಯನ್ ನಾಯಿ ತರಹ ವರ್ತನೆ ಮಾಡ್ತಾರೆ' . 'ಶಾಮನೂರು ಮನೆತನದವರು ಒಂದೊಂದು ಗಂಟೆ ಗೇಟ್ ಬಳಿ ಕಾಯಿಸುತ್ತಾರೆ'. 'ಅವರ ಮನೆಯ ಪೊಮೇರೇನಿಯನ್ ನಾಯಿ ತರಹ ವರ್ತನೆ ಮಾಡ್ತಾರೆ'. ನಮ್ಮ ಕಡೆ ಬಂದ್ರೆ ಮುಖ ತಿರುಗಿಸಿಕೊಂಡು ಹೋಗ್ತಾರೆ ಎಂದು ಶಾಸಕ ಹರೀಶ್ ಹೇಳಿದ್ದರು. ಈ ವಿಚಾರವಾಗಿ ಕೆಟಿಜೆ ನಗರ ಪೊಲೀಸ್ ಠಾಣೆಗೆ ಉಮಾ ಪ್ರಶಾಂತ ದೂರು ನೀಡಿದ್ದಾರೆ. BNS u|s- 132,351(2),79 ಸೆಕ್ಷನ್ ಅಡಿ ಎಫ್ಐಆರ್ ದಾಖಲಾಗಿತ್ತು. ಈ ಕೇಸ್ ಬಗ್ಗೆ ಈಗ ದಾವಣಗೆರೆಯ ಕೆ.ಟಿ.ಜೆ. ನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.