/newsfirstlive-kannada/media/media_files/2025/09/08/davanagere-thieves-areested-02-2025-09-08-19-35-50.jpg)
ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆ
ದಾವಣಗೆರೆಯ ವಿದ್ಯಾನಗರ ಠಾಣೆಯ ಪೊಲೀಸರು ಮನೆ ಬೀಗ ಮುರಿದು ಕಳ್ಳತನ ಮಾಡಿದ್ದ ಮೂವರು ಕುಖ್ಯಾತ ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.
ದಾವಣಗೆರೆಯ ವಿದ್ಯಾನಗರ ನಿವಾಸಿ ರಂಗನಾಥ ಎಂಬುವವರು ಆಗಸ್ಟ್ 30ರಂದು ಕುಟುಂಬ ಸಮೇತ ಬೆಂಗಳೂರಿಗೆ ತೆರಳಿದ್ರು. ಈ ವೇಳೆ ಮನೆಗೆ ನುಗ್ಗಿದ ಮೂವರು ಕಳ್ಳರು ಮನೆಯ ಇಂಟರ್‌ಲಾಕ್ ಒಡೆದು ಮನೆಯೊಳಗೆ ನುಗ್ಗಿ ಚಿನ್ನಾಭರಣ, ಬೆಳ್ಳಿ ಆಭರಣ ದೋಚಿ ಪರಾರಿಯಾಗಿದ್ದರು.
ಸೆಪ್ಟೆಂಬರ್ ಒಂದರಂದು ರಂಗನಾಥ ಮನೆಗೆ ವಾಪಸ್ ಆದ ವೇಳೆ ಪ್ರಕರಣ ಬೆಳಕಿಗೆ ಬಂದಿದ್ದು, ಅಂದೇ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ಪತ್ತೆಗೆ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ರವರು ವಿದ್ಯಾನಗರ ಠಾಣೆ ಸಿಪಿಐ ಶಿಲ್ಪಾ ವೈ.ಎಸ್ ರವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು. ಅದ್ರಂತೆ ಪೊಲೀಸರು ಪ್ರಕರಣದ ಸಂಬಂಧ ಗುಜರಾತ್ ರಾಜ್ಯದ ಸೂರತ್ ಸಿಟಿ ಸಾರೋಲಿ ಪೊಲೀಸ್ ಠಾಣೆಯ ಪೊಲೀಸರ ಸಹಕಾರದಿಂದ ರಾಜಸ್ಥಾನ ಮೂಲದ 28 ವರ್ಷದ ಶ್ಯಾಮ್ ಸಿಂಗ್, 24 ವರ್ಷದ ಕವರ್ ಪಾಲ್ ಹಾಗೂ 33 ವರ್ಷದ ಪ್ರತಾಪ್ ಸಿಂಗ್ನನ್ನ ಬಂಧಿಸಿದ್ದಾರೆ.
ಸದ್ಯ ಬಂಧಿತರಿಂದ 12 ಲಕ್ಷದ 97 ಸಾವಿರದ 200 ರೂಪಾಯಿ ಮೌಲ್ಯದ 162.150 ಗ್ರಾಂ ತೂಕದ ಬಂಗಾರದ ಆಭರಣಗಳು, 1 ಲಕ್ಷ 8 ಸಾವಿರ ಮೌಲ್ಯದ 1350 ಗ್ರಾಂ ತೂಕದ ಬೆಳ್ಳಿ ವಸ್ತುಗಳು, 95 ಸಾವಿರದ 600 ರೂ. ಮೌಲ್ಯದ ನಗದು, 34 ಸಾವಿರ ರೂ ಬೆಲೆಯ 6 ಮೊಬೈಲ್ ಪೋನಗಳು, 3 ಸಾವಿರ ಬೆಲೆಯ ಎರಡು ವಾಚ್ ಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಮೂವರು ಅಂತರ್ ರಾಜ್ಯ ಕಳ್ಳರು
ಇನ್ನು, ಆರೋಪಿಗಳ ವಿರುದ್ಧ ದಾವಣಗೆರೆ ಜಿಲ್ಲೆಯ ಹರಿಹರ ನಗರ ಠಾಣೆ, ಹಳಿಯಾಳ ಠಾಣೆ, ಧಾರವಾಡ, ತುಮಕೂರು ಹೊಸ ಬಡಾವಣೆ, ತಿಪಟೂರು, ಮದ್ಯಪ್ರದೇಶದ ಭೋಪಾಲ್ ನಲ್ಲಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದ ಬಗ್ಗೆ ತನಿಖೆ ವೇಳೆ ಗೊತ್ತಾಗಿದೆ.
ಅಂತಾರಾಜ್ಯ ಕಳ್ಳರ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶಿಲ್ಪಾ ವೈ.ಎಸ್. ಪಿಎಸ್‌ಐ ರೂಪಾ ತೆಂಬದ್, ಸಿಬ್ಬಂದಿಗಳಾದ ಶಂಕರ ಆರ್ ಜಾಧವ, ಆನಂದ ಎಮ್, ಬೋಜಪ್ಪ, ಗೋಪಿನಾಥ ನಾಯ್ಕ, ಮಲ್ಲಿಕಾರ್ಜುನ ಚಂದ್ರಪ್ಪ, ಬಸವರಾಜ, ಸೀಮಾರವರ ಕಾರ್ಯಕ್ಕೆ ಎಸ್‌ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.