/newsfirstlive-kannada/media/media_files/2025/09/16/foreingers-deportation03-2025-09-16-13-33-34.jpg)
NCB ವರದಿ ಆಧರಿಸಿ 16 ಸಾವಿರ ವಿದೇಶಿಯರ ಗಡೀಪಾರು!
ಭಾರತದಲ್ಲಿರುವ 16 ಸಾವಿರ ವಿದೇಶಿಯರನ್ನು ಗಡೀಪಾರು ಮಾಡಲು ಭಾರತ ಸರ್ಕಾರ ಈಗ ನಿರ್ಧರಿಸಿದೆ. ಭಾರತದಲ್ಲಿ ಇವರೆಲ್ಲಾ ಆಕ್ರಮವಾಗಿ ಡ್ರಗ್ಸ್ ಸಾಗಣೆಯಲ್ಲಿ ತೊಡಗಿದ್ದರು. ಈ ಬಗ್ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. 16 ಸಾವಿರ ವಿದೇಶಿಯರು ಭಾರತದಲ್ಲಿದ್ದುಕೊಂಡು ಆಕ್ರಮವಾಗಿ ಡ್ರಗ್ಸ್ ಸಾಗಾಟ, ಡ್ರಗ್ಸ್ ಮಾರಾಟ ಹಾಗೂ ಡ್ರಗ್ಸ್ ಸೇವನೆಯಲ್ಲಿ ತೊಡಗಿದ್ದಾರೆ. ಭಾರತದಲ್ಲಿ ಹೊಸದಾಗಿ ಜಾರಿಗೆ ತಂದಿರುವ ವಲಸೆ ಕಾಯಿದೆಯಡಿ 16 ಸಾವಿರ ವಿದೇಶಿಯರ ಗಡೀಪಾರಿಗೆ ಈಗ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.
ಬಾಂಗ್ಲಾದೇಶ, ಫಿಲಿಪ್ಪೈನ್ಸ್, ಮಯನ್ಮಾರ್, ಮಲೇಷ್ಯಾ, ಘಾನಾ, ನೈಜಿರಿಯಾದ ಪ್ರಜೆಗಳನ್ನು ಗುರುತಿಸಿ ಅವರವರ ದೇಶಕ್ಕೆ ಗಡೀಪಾರು ಮಾಡಲಾಗುತ್ತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ವರದಿಯ ಆಧಾರದ ಮೇಲೆ ಅತಿ ದೊಡ್ಡ ಕ್ರಮವನ್ನ ವಿದೇಶಿ ನಾಗರಿಕರ ವಿರುದ್ಧ ಭಾರತ ಸರ್ಕಾರ ಕೈಗೊಳ್ಳುತ್ತಿದೆ. 16 ಸಾವಿರ ಮಂದಿಯ ಪೈಕಿ ಬಹುತೇಕರು ವಿವಿಧ ರಾಜ್ಯಗಳಲ್ಲಿರುವ ವಿದೇಶಿಯರ ಡೀಟೇನ್ಸನ್ ಸೆಂಟರ್ ಗಳಲ್ಲಿ ಇದ್ದಾರೆ. ಈ ವಿದೇಶಿಯರ ಪಟ್ಟಿಯನ್ನು ಈಗಾಗಲೇ ಕೇಂದ್ರ ಗೃಹ ಇಲಾಖೆಗೆ ಹಾಗೂ ಸಂಬಂಧಪಟ್ಟ ಏಜೆನ್ಸಿಗಳಿಗೆ ಸಲ್ಲಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.