/newsfirstlive-kannada/media/media_files/2025/11/12/delhi-case-2025-11-12-18-28-46.jpg)
ನವದೆಹಲಿ: ದೆಹಲಿಯ ಕೆಂಪು ಕೋಟೆ ಕಾರು ಸ್ಫೋಟ ಕೇಸ್​ಗೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಇದೇ ಕೇಸ್​​ನಲ್ಲಿ ಮತ್ತೊಂದು ಕಾರ್​ ರೆಡ್​ ಕಲರ್​ ಎಕೋ ಸ್ಪೋರ್ಟ್​ಗಾಗಿ ಎನ್​ಐಎ ಅಧಿಕಾರಿಗಳು ಶೋಧಕಾರ್ಯ ಮುಂದುವರಿಸಿದ್ದಾರೆ.
ಇನ್ನೂ, ಇಡೀ ದೆಹಲಿ ಹೈ ಅಲರ್ಟ್​​ನಲ್ಲಿದೆ. ​​​ಎಲ್ಲಾ ಪೊಲೀಸ್ ಠಾಣೆಗಳು, ಪೋಸ್ಟ್‌ಗಳು ಮತ್ತು ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಬಂದೋಬಸ್ತ್​​ ಮಾಡಲಾಗಿದೆ. ಶಂಕಿತರು ಬ್ಲ್ಯಾಸ್ಟ್​ ಮಾಡಲು ಹುಂಡೈ i20 ಜೊತೆಗೆ ಎಕೋ ಸ್ಪೋರ್ಟ್​​ ಕಾರ್​ ಬಳಸಿದ್ದಾರೆ ಎಂದು ಎನ್​ಐಎ ತನಿಖೆಯಿಂದ ತಿಳಿದು ಬಂದಿದೆ.
/filters:format(webp)/newsfirstlive-kannada/media/media_files/2025/09/06/delhi_police_1-2025-09-06-11-49-02.jpg)
ಎಕೋ ಸ್ಪೋರ್ಟ್​​ಗಾಗಿ 5 ಪೊಲೀಸ್​​​ ತಂಡಗಳ ರಚನೆ
ಸದ್ಯ ಕೇಂದ್ರ ಸರ್ಕಾರ ಎಕೋ ಸ್ಪೋರ್ಟ್​ ಕಾರ್​ ಶೋಧಕಾರ್ಯಕ್ಕೆ ಐದು ಪೊಲೀಸ್ ತಂಡಗಳು ರಚನೆ ಮಾಡಿದೆ. ಈಗಾಗಲೇ ದೆಹಲಿ ಪೊಲೀಸ್ರು ಉತ್ತರ ಪ್ರದೇಶ ಮತ್ತು ಹರಿಯಾಣದ ಪೊಲೀಸ್ ಪಡೆಗಳಿಗೂ ಈ ಕುರಿತು ಮಾಹಿತಿ ನೀಡಿದ್ದಾರೆ.
ಕಾರ್​ ಓನರ್​ ಯಾರು..?
DL10CK0458 ಸಂಖ್ಯೆಯನ್ನು ಹೊಂದಿರೋ ಎಕೋ ಸ್ಪೋರ್ಟ್​ ಕಾರ್​ ಇದಾಗಿದೆ. ಈ ಪ್ರಕರಣದ ಪ್ರಮುಖ ಶಂಕಿತ ಉಮರ್ ಉನ್ ನಬಿ ಹೆಸರಿನಲ್ಲಿ ಕಾರ್​ ರಿಜಿಸ್ಟರ್​ ಮಾಡಲಾಗಿದೆ. ಕಾರ್​ ಈಗ ನಾಪತ್ತೆಯಾಗಿದ್ದು, ಹಲವಾರು ಶಂಕಿತರನ್ನು ಜೈಲಿಗಟ್ಟಲಾಗಿದೆ. ದಾಳಿಯ ಹಿಂದಿನ ಜಾಲ ಪತ್ತೆಹಚ್ಚಲು ಎನ್​ಐಎ ತನಿಖೆ ತೀವ್ರಗೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us