ಕೋರ್ಟ್ ಆದೇಶ ಕೊಟ್ಟರೂ, ಈಗಲೂ ಯಾವ ಸೌಲಭ್ಯನೂ ಕೊಟ್ಟಿಲ್ಲ: ಜೈಲು ಅಧಿಕಾರಿಗಳ ವಿರುದ್ಧ ನಟ ದರ್ಶನ್ ಆರೋಪ

ಬೆಂಗಳೂರಿನ 64ನೇ ಸೆಷನ್ಸ್ ಕೋರ್ಟ್ ನಲ್ಲಿ ಇಂದು ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ ನಡೆಯಿತು. ನಟ ದರ್ಶನ್‌ ತಮಗೆ ಬೆನ್ನು ನೋವು ಇದೆ ಎಂದು ತೋರಿಸಿಕೊಳ್ಳುವ ಯತ್ನ ಮಾಡಿದ್ದರು. ಕೋರ್ಟ್ ಆದೇಶ ಕೊಟ್ಟರೂ, ಜೈಲಿನಲ್ಲಿ ತನಗೆ ಸೌಲಭ್ಯ ಕೊಟ್ಟಿಲ್ಲ ಎಂದು ಆರೋಪಿಸಿದ್ದರು.

author-image
Chandramohan
actor darshan pavithra photos

ವಿಚಾರಣೆಗೆ ಹಾಜರಾಗಿದ್ದ ನಟ ದರ್ಶನ್, ಪವಿತ್ರಾಗೌಡ

Advertisment

ಬೆಂಗಳೂರಿನ 64ನೇ ಸೆಷನ್ಸ್ ಕೋರ್ಟ್ ನಲ್ಲಿ ಇಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ ಆರಂಭವಾಗಿದೆ. ಕೊಲೆ ಕೇಸ್ ಆರೋಪಿ ನಟ ದರ್ಶನ್ ಸೇರಿದಂತೆ ಉಳಿದ ಅರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದಾರೆ. 
57ನೇ ಸೆಷನ್ಸ್ ಕೋರ್ಟ್ ಜಡ್ಜ್ ಇಲ್ಲದ ಕಾರಣ ಇಂದು ಆರೋಪಿಗಳನ್ನು 64ನೇ ಸೆಷನ್ಸ್ ಕೋರ್ಟ್ ಜಡ್ಜ್ ಮುಂದೆ ಹಾಜರುಪಡಿಸಲಾಗಿದೆ.  ಬಿಳಿ ಬಣ್ಣದ ಜಾಕೆಟ್ ಧರಿಸಿ ನಟ ದರ್ಶನ್  ವಿಚಾರಣೆಗೆ ಹಾಜರಾಗಿದ್ದಾರೆ. ಕೋರ್ಟ್  ಆರೋಪಿಗಳ ಹಾಜರಾತಿ ಪಡೆದಿದೆ. 
ಈ ವೇಳೆ ನಟ ದರ್ಶನ್ ಪರ ವಕೀಲರು ಈ ಕೊಲೆ ಕೇಸ್ ನಲ್ಲಿ ದರ್ಶನ್ ಡಿಸ್ಚಾರ್ಜ್ ಮಾಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ. 
ಇನ್ನೂ ವಿಡಿಯೋ ಕಾನ್ಪರೆನ್ಸ್ ನಲ್ಲೇ ನಟ ದರ್ಶನ್ ತಮಗೆ ಬೆನ್ನು ನೋವು ಇದೆ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಪದೇ ಪದೇ ಬೆನ್ನು ಮುಟ್ಟಿಕೊಂಡು ಜಡ್ಜ್ ಗೆ ಬೆನ್ನು ನೋವಿದೆ ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ. 

bangalore central jail

ವಿಚಾರಣೆ ಆರಂಭವಾದ ಬಳಿಕ ನಟ ದರ್ಶನ್ ನೇರವಾಗಿ ಜಡ್ಜ್ ಜೊತೆ ಮಾತನಾಡಿದ್ದಾರೆ. 


ಕೋರ್ಟ್ ಹೇಳಿದಂತೆ ನನಗೆ ಜೈಲಿನಲ್ಲಿ  ಯಾವ ಸೌಲಭ್ಯವನ್ನು ಕಲ್ಪಿಸಿಲ್ಲ . ನೀವು ಹೇಳಿದಂತೆ,  ವಾಕಿಂಗ್ ಗೆ ಕೂಡ ಅವಕಾಶ ಕೊಟ್ಟಿಲ್ಲ .  ಏನೂ ಸೌಲಭ್ಯ ಕೊಟ್ಟಿಲ್ಲ ಸರ್.. ವಾಕ್ ಕೂಡ ನೀವು ಹೇಳಿದ್ರಿ ಅದು ಕೂಡ 15 ಅಡಿ ಇರೋ ಜಾಗದಲ್ಲಿ ವಾಕ್ ಮಾಡಿಸ್ತಾರೆ. ಅಲ್ಲಿ ಬಿಸಿಲು ಬರೋದಿಲ್ಲ ಸರ್ ಎಂದು ದರ್ಶನ್ ಅಳಲು ತೋಡಿಕೊಂಡಿದ್ದಾರೆ.  ಬೆಂಗಳೂರಿನ  ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳು ಸೌಲಭ್ಯ ಕೊಡ್ತಿಲ್ಲ ಎಂದು ದರ್ಶನ್ ಆರೋಪ ಮಾಡಿದ್ದಾರೆ. ಕೈ ಕಟ್ಟಿಕೊಂಡು ಜೈಲಾಧಿಕಾರಿಗಳ ಮೇಲೆ  ನಟ ದರ್ಶನ್  ಆರೋಪ ಮಾಡಿದ್ದಾರೆ.  ಕೋರ್ಟ್ ಆದೇಶ ಕೊಟ್ಟರೂ, ಜೈಲು ಅಧಿಕಾರಿಗಳು ಮಾತ್ರ ಯಾವುದೇ ಸೌಲಭ್ಯ ಕೊಡುತ್ತಿಲ್ಲ ಎಂದು ನಟ ದರ್ಶನ್ ಆರೋಪಿಸಿದ್ದರು. 
ವಿಡಿಯೋ ಕಾನ್ಪರೆನ್ಸ್ ಮೂಲಕ ನಟಿ ಹಾಗೂ ಕೇಸ್‌ನ ಎ1 ಆರೋಪಿ ಪವಿತ್ರಾಗೌಡ ಕೂಡ ವಿಚಾರಣೆಗೆ ಹಾಜರಾಗಿದ್ದರು. ಕೊನೆಗೆ  ಆಕ್ಟೋಬರ್‌  9 ನೇ ತಾರೀಖಿಗೆ ವಿಚಾರಣೆಯನ್ನು ಕೋರ್ಟ್  ಮುಂದೂಡಿತು. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Actor Darshan Darshan in jail
Advertisment