/newsfirstlive-kannada/media/media_files/2025/09/29/power-cut-in-bangalore-2025-09-29-12-47-40.jpg)
ರಾಜ್ಯದಲ್ಲಿ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ!
ಬೆಂಗಳೂರು ಮತ್ತು ರಾಜ್ಯದ ವಿವಿಧ ನಗರಗಳಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಕಾರಣದಿಂದಾಗಿ ಸಿ.ಸಿ ಮತ್ತು ಓ.ಸಿ. ಇಲ್ಲದೇ ಇರೋ ಮನೆಗಳಿಗೆ ವಿದ್ಯುತ್ ಸಂಪರ್ಕವೇ ಸಿಗುತ್ತಿಲ್ಲ. ರಾಜ್ಯದಲ್ಲಿ 10 ಲಕ್ಷ ಮನೆಗಳು ಹೊಸದಾಗಿ ನಿರ್ಮಾಣವಾಗಿದ್ದು, ಇವುಗಳಿಗೆ ವಿದ್ಯುತ್ ಸಂಪರ್ಕವನ್ನು ನೀಡಲು ಸುಪ್ರೀಂಕೋರ್ಟ್ ತೀರ್ಪು ಅಡ್ಡಿಯಾಗಿದೆ. ಆದರೇ, 1,200 ಚದರ ಅಡಿಯವರೆಗಿನ ಹೊಸ ಮನೆಗಳಿಗೆ ಸಿ.ಸಿ ಮತ್ತು ಓ.ಸಿ. ಅಗತ್ಯವಿಲ್ಲ ಎಂದು ರಾಜ್ಯದ ಕ್ಯಾಬಿನೆಟ್ ನಲ್ಲಿ ವಿನಾಯಿತಿ ನೀಡಿ ಆದೇಶ ನೀಡಲಾಗಿದೆ. ಆದರೂ, ವಿದ್ಯುತ್ ಇಲಾಖೆಯಿಂದ ವಿವಿಧ ಎಸ್ಕಾಂಗಳು ತಮ್ಮ ವ್ಯಾಪ್ತಿಯಲ್ಲಿ 1,200 ಚದರ ಅಡಿವರೆಗಿನ ಮನೆಗಳಿಗೂ ವಿದ್ಯುತ್ ಸಂಪರ್ಕವನ್ನೇ ನೀಡುತ್ತಿಲ್ಲ. ರಾಜ್ಯದ ಕ್ಯಾಬಿನೆಟ್ ನಲ್ಲಿ ತೀರ್ಮಾನವಾಗಿದ್ದರೂ, ಈ ಬಗ್ಗೆ ಎಸ್ಕಾಂ ಬೋರ್ಡ್ ನಲ್ಲಿ ತೀರ್ಮಾನವಾಗಿಲ್ಲ. ಎಸ್ಕಾಂ ಬೋರ್ಡ್ ನಲ್ಲಿ ತೀರ್ಮಾನವಾಗಿ ಆದೇಶ ನೀಡಬೇಕೆಂದು ಎಸ್ಕಾಂಗಳ ಇಂಜಿನಿಯರ್ ಗಳು ಹೇಳುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ 10 ಲಕ್ಷ ಮನೆಗಳು ವಿದ್ಯುತ್ ಸಂಪರ್ಕ ಇಲ್ಲದೇ ಕತ್ತಲಲ್ಲಿ ಮುಳುಗುವಂತಾಗಿದೆ.
ಪವರ್​ ಕನೆಕ್ಷನ್​ ಸಿಗದೆ ಸಂಕಷ್ಟಕ್ಕೆ ಸಿಲುಕಿದ ಜನತೆ..!
ಅತ್ಯಗತ್ಯ ಸೇವೆ ನೀಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ. ಬೆಂಗಳೂರಿನಲ್ಲೂ ಹೊಸ ಕಟ್ಟಡಗಳಗೆ ಬೆಸ್ಕಾಂನಿಂದ ವಿದ್ಯುತ್​ ಸಂಪರ್ಕ ಸಿಗುತ್ತಿಲ್ಲ. -ಸರ್ಕಾರ ಆದೇಶ ಹೊರಡಿಸಿದ್ರೂ ಹೊಸ ಕನೆಕ್ಷನ್​ಗಳನ್ನು ನೀಡಲು ಎಸ್ಕಾಂಗಳು ಹಿಂದೇಟು ಹಾಕುತ್ತಿವೆ. 1200 ಚದರಡಿ ಕಟ್ಟಡಗಳಿಗೆ ಒಸಿ ಪಡೆಯೋದು ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ. ಇತ್ತೀಚೆಗಷ್ಟೇ 30 * 40 ಸೈಟ್​ಗಳಿಗೆ ಒಸಿಯಿಂದ ವಿನಾಯಿತಿ ನೀಡಿ ಸರ್ಕಾರ ಆದೇಶಿಸಿದೆ. ಇಷ್ಟಾದ್ರು ಸಂಪರ್ಕ ನೀಡಲು ಸರ್ಕಾರದಿಂದ ಸೂಕ್ತ ಮಾರ್ಗದರ್ಶನ ಬಂದಿಲ್ಲ ಅಂತಿರುವ ಬೆಸ್ಕಾಂ ವ್ಯಾಪ್ತಿಯೊಂದ್ರಲ್ಲೇ ಲಕ್ಷಾಂತರ ಮನೆಗಳಿಗೆ ವಿದ್ಯುತ್​​ ಸಂಪರ್ಕ ಸಿಗಬೇಕಿದೆ . ರಾಜ್ಯವ್ಯಾಪಿ 10 ಲಕ್ಷ ಮನೆಗಳಿಗೆ ವಿದ್ಯುತ್​​ ಸಂಪರ್ಕ ಇಲ್ಲ . ಬೆಸ್ಕಾಂ ವ್ಯಾಪ್ತಿಯೊಂದರಲ್ಲೇ 4 ಲಕ್ಷಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಗಬೇಕಿದೆ. 2024 ಡಿಸೆಂಬರ್​​​ ನಿಂದ ಒಸಿ ಮತ್ತು ಪ್ಲಾನ್​​ ಇಲ್ಲದ ಕಟ್ಟಡಗಳಿಗೆ ವಿದ್ಯುತ್​ ಸಂಪರ್ಕವನ್ನು ಸುಪ್ರೀಂಕೋರ್ಟ್ ಆದೇಶದ ಕಾರಣದಿಂದ ಸ್ಥಗಿತ ಮಾಡಲಾಗಿದೆ.
ಹೊಸ ಮನೆ ಕಟ್ಟಿ ಗೃಹ ಪ್ರವೇಶ ಮಾಡಲಾಗದೆ ಅತಂತ್ರ ಸ್ಥಿತಿಯಲ್ಲಿ ಸಾರ್ವಜನಿಕರು ಸಿಲುಕಿದ್ದಾರೆ. ಸಕಾಲಕ್ಕೆ ನಿರ್ಧಾರ ತೆಗದುಕೊಳ್ಳುವಲ್ಲಿ ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಮಾಡುತ್ತಿದ್ದಾರೆ. 9 ತಿಂಗಳು ಕಳೆದ್ರೂ ಸಮಸ್ಯೆ ಬಗೆಹರಿಸದೇ ಸರ್ಕಾರ ಸುಮ್ಮನಾಗಿದೆ. ಸರ್ಕಾರದ ವಿಳಂಬ ನೀತಿಯಿಂದ ಜನತೆ ಸಂಕಷ್ಟದಲ್ಲಿದ್ದಾರೆ.
600 ಚದರ ಅಡಿ ಮನೆಗೆ ಕರೆಂಟ್ ಕನೆಕ್ಷನ್ ನೀಡಲು ಸಿಎಸ್ ಆದೇಶ
ಇನ್ನೂ 50 ಸ್ಕ್ವೇರ್ ಮೀಟರ್ (600 ಚದರಡಿ) ಒಳಗಿನ ಕಟ್ಟಡಕ್ಕೆ ಯಾವುದೇ ಕಟ್ಟಡ ನಕ್ಷೆ ಪಡೆಯುವಂತಿಲ್ಲ. ಕಟ್ಟಡ ನಕ್ಷೆ ಇಲ್ಲದಿದ್ರೂ ವಿದ್ಯುತ್ ಸಂಪರ್ಕ ನೀಡುವಂತೆ ಮುಖ್ಯ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನ ಇದ್ರೂ ಇಲ್ಲಿವರೆಗೂ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ನೀಡಿಲ್ಲ. ಇತ್ತೀಚೆಗಷ್ಟೇ ಸರ್ಕಾರ 1200 ಅಡಿ ಒಳಗಿನ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡುವಂತೆ ಆದೇಶಿಸಿತ್ತು. ಓಸಿ ವಿನಾಯಿತಿ ನೀಡಿ ವಿದ್ಯುತ್​​ ಸಂಪರ್ಕ ನೀಡಲು ಸರ್ಕಾರದ ಆದೇಶ ನೀಡಿತ್ತು. ಆದೇಶ ಬಂದು ತಿಂಗಳೇ ಕಳೆದ್ರೂ ವಿದ್ಯುತ್​​​ ಸಂಪರ್ಕ ಮಾತ್ರ ಸಿಕ್ಕಿಲ್ಲ. ಬಿಬಿಎಂಪಿ ಎಡಿಟಿಪಿ ಚಿಕ್ಕ ಕಟ್ಟಡಗಳಿಗೆ ಪ್ಲಾನ್ ಅವಶ್ಯಕತೆ ಇಲ್ಲ ಎಂಬ NOCಗಳನ್ನು ನೀಡಿದ್ದಾರೆ. ಹೀಗಿದ್ರೂ ಬೆಸ್ಕಾಂ ಇಲ್ಲಿಯವರೆಗೂ ತಾತ್ಕಾಲಿಕ ಸಂಪರ್ಕ ಹಾಗೂ ಶಾಶ್ವತ ಸಂಪರ್ಕ ನೀಡದೆ ಸತಾಯಿಸಲಾಗುತ್ತಿದೆ.
ಈ ಸಮಸ್ಯೆ ಬಗ್ಗೆ ಇಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಚಿವರ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ಜನರ ಸಮಸ್ಯೆಗೆ ಪರಿಹಾರ ಸಿಗುತ್ತೋ ಹೇಗೆ ಎಂಬ ಕುತೂಹಲದಿಂದ ಲಕ್ಷಾಂತರ ಜನರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.