/newsfirstlive-kannada/media/media_files/2025/08/23/mask-man-face-revealed022-2025-08-23-12-53-07.jpg)
ಮಾಸ್ಕ್ ಮ್ಯಾನ್ ಅಸಲಿ ಮುಖ ಬಹಿರಂಗ
ಮಾಸ್ಕ್ ಮ್ಯಾನ್ ನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಸುಳ್ಳು ದೂರು ನೀಡಿದ ಆರೋಪ ಹಾಗೂ ಮೊದಲ ಬುರುಡೆಯನ್ನು ಎಲ್ಲಿಂದ ತಂದ ಎಂಬ ಮಾಹಿತಿಯನ್ನು ಪೊಲೀಸರಿಗೆ ನೀಡದೇ ಇರೋ ಕಾರಣದಿಂದ ಕೇಸ್ ದಾಖಲಿಸಿ, ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು ಎಸ್‌ಐಟಿ ಅಧಿಕಾರಿಗಳು ಇಂದು ಬೆಳಿಗ್ಗೆ ಬಂಧಿಸಿದ್ದಾರೆ. ಈಗ ಧರ್ಮಸ್ಥಳದ ಕೇಸ್ ನಲ್ಲಿ ದೂರುದಾರ, ಸಾಕ್ಷಿಯಾಗಿದ್ದ ಚಿನ್ನಯ್ಯ ಅಲಿಯಾಸ್ ಚೆನ್ನ ಈಗ ಎಸ್‌ಐಟಿಯ ಅತಿಥಿಯಾಗಿದ್ದಾನೆ. ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು ಬಂಧಿಸುತ್ತಿದ್ದಂತೆ, ಧರ್ಮಸ್ಥಳದಲ್ಲಿ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳದಲ್ಲಿ ಜೈ ಧರ್ಮಸ್ಥಳ ಎಂಬ ಪ್ಲೇಕಾರ್ಡ್ ಹಿಡಿದ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳ ಹಾಗೂ ವೀರೇಂದ್ರ ಹೆಗಡೆಯವರಿಗೆ ಜೈಕಾರವನ್ನು ಭಕ್ತರು ಕೂಗಿದ್ದಾರೆ. ಮಂಜುನಾಥ್ ಸ್ವಾಮಿ, ಅಣ್ಣಪ್ಪ ಸ್ವಾಮಿ ಯಾರನ್ನೂ ಬಿಡಲ್ಲ. ಜನ್ಮ, ಜನ್ಮಕ್ಕೂ ಕರ್ಮದ ಪಾಪ ಅನುಭವಿಸುತ್ತಾರೆ ಎಂದು ಭಕ್ತಾದಿಗಳು ಸುಳ್ಳು ದೂರು ನೀಡಿದ ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.