Advertisment

BREAKING NEWS ಧರ್ಮಸ್ಥಳ ಕೇಸ್ ಬಗ್ಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ, ಹೇಳಿದ್ದೇನು?

ಧರ್ಮಸ್ಥಳದ ಸುತ್ತ ಈಗ ವಿವಾದದ ಹುತ್ತ ಬೆಳೆದಿದೆ. ಕಳೆದ 15 ದಿನದಿಂದ ಎಸ್‌ಐಟಿ ನಿತ್ಯ ಭೂಮಿ ಅಗೆಯುವ ಕೆಲಸ ಮಾಡಿತ್ತು. ಈಗ ಇದೆಲ್ಲದರ ಬಗ್ಗೆ ಮೊದಲ ಭಾರಿಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯಿಸಿದ್ದಾರೆ. ಏನು ಹೇಳಿದ್ರು?

author-image
Chandramohan
Updated On
veerrendra hegde 022

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

Advertisment
  • ಧರ್ಮಸ್ಥಳದ ವಿವಾದದ ಬಗ್ಗೆ ಮೌನ ಮುರಿದ ವೀರೇಂದ್ರ ಹೆಗ್ಗಡೆ
  • ಧರ್ಮಸ್ಥಳದ ಬಗ್ಗೆ ಆರೋಪಗಳೆಲ್ಲಾ ಸುಳ್ಳು, ಹುಟ್ಟು ಹಾಕಿರುವವು ಎಂದ ಧರ್ಮಾಧಿಕಾರಿ
  • ಯಾರಿಗೂ ನನ್ನ ಮೇಲೆ ಅನುಮಾನಗಳಿಲ್ಲ ಎಂದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದಲ್ಲಿ ನಾನು ನೂರಾರು ಶವಗಳನ್ನು ಹೂತಿದ್ದೇನೆ. ಈಗ ಅವುಗಳ ಜಾಗವನ್ನೆಲ್ಲಾ ತೋರಿಸುತ್ತೇನೆ ಎಂದು ಅನಾಮಿಕ ವ್ಯಕ್ತಿ ಬಂದು ಪೊಲೀಸರಿಗೆ ದೂರು ನೀಡಿದ್ದಾನೆ. ಈ ದೂರಿನ ಆಧಾರದ ಮೇಲೆ ಶವಗಳ ಬಗ್ಗೆ ತನಿಖೆಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ಯನ್ನೇ ರಚಿಸಿದೆ. ಎಸ್‌ಐಟಿ ಯು ಕಳೆದ 15 ದಿನದಿಂದ ಅನಾಮಿಕ ವ್ಯಕ್ತಿ ತೋರಿಸಿದ ಸ್ಥಳಗಳನ್ನೆಲ್ಲಾ ಅಗೆದು ಶವಗಳಿಗಾಗಿ ಹುಡುಕಾಟ ನಡೆಸುತ್ತಿದೆ. ಒಂದು ಅಸ್ಥಿಪಂಜರ ಮಾತ್ರ ಸಿಕ್ಕಿದೆ. ಮತ್ತೊಂದೆಡೆ ಕೆಲ ಮೂಳೆಗಳು ಮಾತ್ರ ಸಿಕ್ಕಿವೆ. ಅನಾಮಿಕ ಹೇಳಿದಂತೆ ಹತ್ತಾರು, ನೂರಾರು ಶವಗಳ ಅಸ್ಥಿಪಂಜರಗಳು ಸಿಕ್ಕಿಲ್ಲ. 
ಇದರ ಮಧ್ಯೆ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಹಿಂದೂ ಶ್ರದ್ದಾ ಕೇಂದ್ರಗಳ ಬಗ್ಗೆ ಸಮಾಜದಲ್ಲಿ ತಪ್ಪು ಭಾವನೆಯನ್ನು ಹರಡಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯ ವಿಧಾನಸಭೆಯಲ್ಲೂ ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆ, ಅನಾಮಿಕನ ದೂರು ಬಗ್ಗೆ ಚರ್ಚೆಯಾಗಿದೆ.
ಇದರ ಮಧ್ಯೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕಳೆದೊಂದು ತಿಂಗಳಿನಿಂದ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸಾರ್ವಜನಿಕವಾಗಿ ಮೌನಕ್ಕೆ ಶರಣಾಗಿದ್ದರು. ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ. 
ಇದೇ ಮೊದಲ ಭಾರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ  ಅವರು ತಮ್ಮ ಮೌನ ಮುರಿದು ಈ ಎಲ್ಲ ವಿವಾದಗಳ ಬಗ್ಗೆ ಮಾತನಾಡಿದ್ದಾರೆ. ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟ ಆರೋಪ ಕೇಸ್ ಗೆ ಸಂಬಂಧಿಸಿದಂತೆ, ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈ ಆರೋಪಗಳೆಲ್ಲಾ ಸುಳ್ಳು, ಹುಟ್ಟು ಹಾಕಿರುವವು ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ನನಗೆ ಇದರಿಂದ ತುಂಬಾ ನೋವು ಉಂಟಾಗಿದೆ. ಯಾರಿಗೂ ನನ್ನ ಮೇಲೆ,  ಕ್ಷೇತ್ರದ ಮೇಲೆ ಯಾವ ಅನುಮಾನಗಳಿಲ್ಲ. ಭಕ್ತರು ಕೂಡ ಇದನ್ನೆಲ್ಲಾ ನೋಡಿ ನೋವು ಅನುಭವಿಸಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಪಿಟಿಐ ಜೊತೆ ಮಾತನಾಡುತ್ತಾ ಹೇಳಿದ್ದಾರೆ. 
ನನಗೆ ಮೂವರು ಸೋದರರು, ಓರ್ವ ಸೋದರಿ ಇದ್ದಾರೆ. ನನ್ನ 2ನೇ ಸೋದರ ಬೆಂಗಳೂರಿನಲ್ಲಿದ್ದು, ಶಿಕ್ಷಣ ಸಂಸ್ಥೆ ನೋಡಿಕೊಳ್ತಾರೆ. ಮೂರನೇ ಸೋದರ ಇಲ್ಲೇ ಧರ್ಮಸ್ಥಳದಲ್ಲೇ  ಇದ್ದು, ಆಡಳಿತಾತ್ಮಕ ವಿಷಯ ನೋಡಿಕೊಳ್ತಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. 

Advertisment

veerrendra hegde 01

 



ನಾನು ಧರ್ಮಸ್ಥಳದಲ್ಲಿ ಇಲ್ಲದೇ ಇದ್ದ ಸಂದರ್ಭದಲ್ಲಿ ನನ್ನ ಸೋದರ   ಇಲ್ಲಿನ ಉಸ್ತುವಾರಿಯನ್ನೂ ವಹಿಸಿಕೊಳ್ತಾರೆ. ಪ್ರಮುಖವಾಗಿ ಅನ್ನ ಸಂತರ್ಪಣೆಯ ಬಗ್ಗೆ, ಸ್ವಚ್ಛತೆ, ಯಕ್ಷಗಾನ ಹೊಣೆಯನ್ನು ನಿಭಾಯಿಸುತ್ತಾರೆ. ಅವರ ಮೇಲೆ ಸಾಕಷ್ಟು ಜವಾಬ್ದಾರಿಗಳಿದ್ದು, ಎಲ್ಲಾ ನಿಭಾಯಿಸುತ್ತಾರೆ. 
ಇನ್ನಿಬ್ಬರು, ಸ್ವತಂತ್ರವಾಗಿದ್ದಾರೆ. ನನ್ನ ಸೋದರಿ ಧಾರವಾಡದಲ್ಲಿದ್ದಾರೆ. ನನ್ನ ಬಾವ, ಧಾರವಾಡ ಮೆಡಿಕಲ್ ಕಾಲೇಜ್​ ವಿವಿಯ ವೈಸ್ ಚಾನ್ಸಲರ್ ಆಗಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ  ಅವರು ಹೇಳಿದ್ದಾರೆ. 
ನಾವು ಆರಂಭದಲ್ಲೇ ಎಸ್​ಐಟಿಯನ್ನ ಸ್ವಾಗತ ಮಾಡಿದ್ದೇವೆ. ಈ ಜನರು ಸಾಕಷ್ಟು ಅನುಮಾನಗಳನ್ನ ಹುಟ್ಟುಹಾಕಿದ್ದಾರೆ . ಅನುಮಾನ, ಗೊಂದಲಗಳನ್ನ ಭಕ್ತರಲ್ಲಿ ಹುಟ್ಟುಹಾಕಿದ್ದಾರೆ.  ಸೂಕ್ತ ತನಿಖೆಯಿಂದ ಇದೆಲ್ಲವೂ ಬಗೆಹರಿದರೆ ಒಳ್ಳೆಯದು ಅಂತ ನಾನು ಭಾವಿಸಿದ್ದೇನೆ. ಸರ್ಕಾರ ತನಿಖಾ ತಂಡ ರಚಿಸಿ, ಇದಕ್ಕೆ ಪರಿಹಾರ ಕಂಡುಕೊಂಡ್ರೆ ಒಳ್ಳೆಯದೆಂಬ ಭಾವನೆ ಇತ್ತು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ  ಅವರು ಇದೇ ಮೊದಲ ಭಾರಿಗೆ ಈ ಎಲ್ಲ ವಿವಾದಗಳ ಬಗ್ಗೆ ಬಹಿರಂಗವಾಗಿ ಮಾಧ್ಯಮದ ಮೂಲಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. 
ಈ ಸಂದರ್ಶನದಲ್ಲಿ ಮುಖ್ಯವಾಗಿ ಎಸ್‌ಐಟಿ ತನಿಖೆಯನ್ನು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕೂಡ ಸ್ವಾಗತಿಸಿರುವುದು ವಿಶೇಷ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

dharmasthala Dharmasthala case
Advertisment
Advertisment
Advertisment