/newsfirstlive-kannada/media/media_files/2025/10/06/supreme-court-and-cji-gavai-2025-10-06-15-51-07.jpg)
CJI ಬಿ.ಆರ್.ಗವಾಯಿ ಮತ್ತು ಸುಪ್ರೀಂಕೋರ್ಟ್
ಸಿಜೆಐ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ಕಿಶೋರ್ ರಾಕೇಶ್ ಇಂದು ಶೂ ಎಸೆಯುವ ಯತ್ನ ಮಾಡಿದ್ದಾನೆ. ಇದಕ್ಕೆ ಕಾರಣವೇನು? ಕಿಶೋರ್ ರಾಕೇಶ್ ಸನಾತನ ಧರ್ಮಕ್ಕೆ ಅಪಮಾನ ಸಹಿಸಲ್ಲ ಎಂದು ಕೂಗುತ್ತಾ ಕೋರ್ಟ್ ಹಾಲ್ ನಿಂದ ಹೊರಗೆ ಬಂದಿದ್ದಾನೆ. ಭದ್ರತಾ ಸಿಬ್ಬಂದಿಯು ಕಿಶೋರ್ ರಾಕೇಶ್ ನನ್ನು ವಶಕ್ಕೆ ಪಡೆದಿದ್ದಾರೆ. ಸಿಜೆಐ ಬಿ.ಆರ್. ಗವಾಯಿ ನೀಡುವ ಸೂಚನೆ ಪ್ರಕಾರ ಕಿಶೋರ್ ರಾಕೇಶ್ ಮೇಲೆ ಕ್ರಮ ಜರುಗಿಸಲಾಗುತ್ತೆ.
ಆದರೇ, ಕೋರ್ಟ್ ಹಾಲ್ ನಿಂದ ಹೊರಗೆ ಹೋಗುವಾಗ ಶೂ ಎಸೆದ ಆರೋಪಿ ಕಿಶೋರ್ ರಾಕೇಶ್, ಸನಾತನ ಧರ್ಮಕ್ಕೆ ಅಪಮಾನವನ್ನು ಸಹಿಸಲ್ಲ ಎಂದು ಹೇಳಿರುವುದರ ಆಧಾರದ ಮೇಲೆ ವಿಶ್ಲೇಷಣೆ ನಡೆಸಲಾಗುತ್ತಿದೆ.
ಆದರೇ, ಈ ಘಟನೆಗೆ ಸಿಜೆಐ ಬಿ.ಆರ್.ಗವಾಯಿ ಅವರು ಈ ಹಿಂದೆ ನೀಡಿದ್ದ ಹೇಳಿಕೆಗಳು ಕಾರಣವಾಗಿರಬಹುದು ಎಂಬ ಚರ್ಚೆ ನಡೆಯುತ್ತಿದೆ. ಮಧ್ಯಪ್ರದೇಶದ ಖಜುರಾಹೋದಲ್ಲಿ 7 ಅಡಿ ಎತ್ತರದ ವಿಷ್ಣುವಿನ ಶಿರಚ್ಛೇದಿತ ವಿಗ್ರಹದ ಪುನರ್ ಸ್ಥಾಪನೆಗೆ ಸಂಬಂಧಿಸಿದಂತೆ ಅರ್ಜಿಯನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಲಾಗಿತ್ತು. ಈ ಅರ್ಜಿಯು ಸುಪ್ರೀಂಕೋರ್ಟ್ ಸಿಜೆಐ ಬಿ.ಆರ್.ಗವಾಯಿ ಅವರ ನೇತೃತ್ವದ ಪೀಠದ ಮುಂದೆಯೇ ವಿಚಾರಣೆಗೆ ಬಂದಿತ್ತು. ಅರ್ಜಿ ವಿಚಾರಣೆಯ ವೇಳೆ ಸಿಜೆಐ ಬಿ.ಆರ್.ಗವಾಯಿ ಅವರು ಅರ್ಜಿಗೆ ಮಾನ್ಯತೆ ನೀಡಲಿಲ್ಲ. ಹೋಗಿ, ದೇವರನ್ನೇ ಏನಾದರೂ ಮಾಡಲು ಕೇಳಿ ಎಂದು ಹೇಳಿದ್ದರು.
ಸಿಜೆಐ ಬಿ.ಆರ್.ಗವಾಯಿ ಅವರ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದ ಸಿಜೆಐ ಬಿ.ಆರ್.ಗವಾಯಿ, ನಾನು ಎಲ್ಲ ಧರ್ಮವನ್ನು ಗೌರವಿಸುತ್ತೇನೆ. ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದರು.
ಇನ್ನೂ ಇಂದು ಸಿಜೆಐ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರತಿಯೊಂದು ಘಟನೆಗಳಿಗೂ ಸಾಮಾಜಿಕ ಮಾಧ್ಯಮಗಳಲ್ಲಿ ಅತಿರೇಕದ ಪ್ರತಿಕ್ರಿಯೆಗಳು ಬರುತ್ತಿವೆ ಎಂದಿದ್ದಾರೆ.
ಸುಪ್ರೀಂಕೋರ್ಟ್ ಸಿಜೆಐ ಹುದ್ದೆಯಲ್ಲಿರುವವರ ಮೇಲೆ ಶೂ ಎಸೆದ ಘಟನೆ ಇದೇ ಮೊದಲೇನೂ ಅಲ್ಲ. ಈ ಹಿಂದೆ ಸುಪ್ರೀಂಕೋರ್ಟ್ ಸಿಜೆಐ ಆಗಿದ್ದ ಜಸ್ಟೀಸ್ ಹಿದಾಯತುಲ್ಲಾ ಅವರ ಮೇಲೆ ಕಕ್ಷಿದಾರರೊಬ್ಬರು ಶೂ ಎಸೆದಿದ್ದಾರಂತೆ. ಆಗ ಸಿಜೆಐ ಹಿದಾಯತುಲ್ಲಾ ಆ ಕಕ್ಷಿದಾರ ಈಗಾಗಲೇ ತಮ್ಮ ಕೇಸ್ ಅನ್ನು ಕಳೆದುಕೊಂಡಿದ್ದಾರೆ. ಈಗ ಶೂ ಅನ್ನು ಅವರು ಕಳೆದುಕೊಳ್ಳುವುದು ಬೇಡ, ಅವರ ಶೂ ಅನ್ನು ಅವರಿಗೆ ವಾಪಸ್ ಕೊಡಿ ಎಂದು ಹೇಳಿದ್ದಾರಂತೆ. ಇದನ್ನು ಹಿರಿಯ ವಕೀಲ, ಕರ್ನಾಟಕ ಮೂಲದ ಸಂಜಯ ಹೆಗಡೆ ಇಂದು ಟ್ವೀಟ್ ಮಾಡಿ ನೆನಪಿಸಿಕೊಂಡಿದ್ದಾರೆ.
Full marks to the calm and composed demeanour with which the CJI continued the proceedings. Such odd events have happened before as well. CJI Hidayatullah, also from Nagpur had a shoe thrown by a disgruntled litigant. He ordered the shoe to be returned saying, “The man has lost… https://t.co/9XXfBjOwDV
— SANJAY HEGDE (@sanjayuvacha) October 6, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.