/newsfirstlive-kannada/media/media_files/2025/12/02/siddaramiah-and-dk-shivakumar-1-2025-12-02-12-08-59.jpg)
ರಾಜ್ಯ ರಾಜಕೀಯದ ಬಿಗ್​ ಬಾಸ್​​ ಪಟ್ಟಕ್ಕೆ ಹಣಾಹಣಿ ಜೋರಾಗ್ತಿದೆ.. ಎರಡೂವರೆ ವರ್ಷ ಕಳೆದ ಬಳಿಕ ಸಂಕ್ರಾಂತಿ ಬಳಿಕ ಡಿಕೆಶಿ ಕ್ಯಾಂಪ್​​​, ಶುಭ ಸುದ್ದಿಯ ನಿರೀಕ್ಷೆಯಲ್ಲಿದೆ.. ರಾಜಕೀಯ ಚಟುವಟಿಕೆಗಿಳಿದ ಡಿಕೆಶಿ, ಅಸ್ಸಾಂ ಎಲೆಕ್ಷನ್​​ಗೆ ಉಸ್ತುವಾರಿ ನೆಪ ಮಾಡ್ಕೊಂಡು ರಾಜ್ಯದ ಕುರ್ಚಿಗೆ ಟೀ ಪ್ಲಾಂಟೇಷನ್​​ ಮಾಡ್ತಿದ್ದಾರೆ.. ಬಣ್ಣ-ರುಚಿ-ಶಕ್ತಿಯ ಕಥೆ ಹೇಳಿ ಮನವೊಲಿಕೆ ಪ್ಲಾನ್​​​ಗೆ ಮುಂದಾಗಿದ್ದಾರೆ.
ಸಂಕ್ರಾಂತಿ ಮರುದಿನವೇ ರಾಜ್ಯ ರಾಜಕೀಯವು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿದೆ.. ವಿಫಲವಾದ ಪ್ರಯತ್ನಗಳ ಬಳಿಕ ಪ್ರಾರ್ಥನೆಯ ಬಲದ ಮೇಲೆ ನಂಬಿಕೆಯಿಟ್ಟ ಬಂಡೆ ಬ್ರದರ್ಸ್​​​ ಅದರ ಫಲದ ನಿರೀಕ್ಷೆಯಲ್ಲಿದ್ದಾರೆ.. ಡೆಲ್ಲಿಯಲ್ಲಿ ಕನಕಾಧಿಪತಿ ಡಿಸಿಎಂ ಡಿಕೆಶಿ ಅರಸೊತ್ತಿಗೆ ಅಖಾಡಕ್ಕಿಳಿದು ತ್ಯಾಗ ಪರಿಶ್ರಮ, ಸ್ವಾಮಿನಿಷ್ಠೆಯ ದಾಳ ಉರುಳಿಸ್ತಿದ್ದಾರೆ.
ಅಸ್ಸಾಂ ಎಲೆಕ್ಷನ್​​ಗೆ ರಾಜಕೀಯದ ಟೀ ಪ್ಲಾಂಟೇಷನ್​​
ವರ್ಷದ ಮೊದಲ ಹಬ್ಬ ಮುಗಿಸಿ ಡೆಲ್ಲಿ ತಲುಪಿದ ಡಿಸಿಎಂ ಡಿಕೆಶಿಗೆ ಅಸ್ಸಾಂ ಎಲೆಕ್ಷನ್​ ಕಾರಣ ಕೊಟ್ಟಿದೆ.. ತ್ರಿಮೂರ್ತಿ ಹೈಕಮಾಂಡ್​​​ ಮನವೊಲಿಕೆಗೆ ಸರಿಯಾದ ಮುಹೂರ್ತ ಪಡೆದು ಬಂದ ಡಿಕೆಶಿ ಸಿಎಂ ಸ್ಥಾನದ ಬಗ್ಗೆ ಡಿಕೆಶಿ ವರಿಷ್ಠರ ಜೊತೆ ಚರ್ಚೆ ನಡೆಸಲಿದ್ದಾರೆ.
ಡೆಲ್ಲಿಯಲ್ಲಿ ಕುರ್ಚಿ ಆಟ!
ಸಿಎಂ ಹುದ್ದೆಗೆ ಪರಿಗಣಿಸಿ. ಪಕ್ಷದ ಭವಿಷ್ಯದ ಬಗ್ಗೆ ಗಮನ ಹರಿಸಿ ಅಂತ ಹೇಳ್ತಿರುವ ಡಿಕೆಶಿ, ಕೇವಲ ಅಸ್ಸಾಂ ಚುನಾವಣೆಗೆ ನನ್ನನ್ನು ಸೀಮಿತ ಮಾಡಬೇಡಿ.. ರಾಜ್ಯದ ಗೊಂದಲ ನಡುವೆ ಅಸ್ಸಾಂ ಉಸ್ತುವಾರಿಯನ್ನ ಹೇಗೆ ನಿರ್ವಹಣೆ ಮಾಡ್ಲಿ ಅಂತ ಕೇಳ್ತಿದ್ದಾರೆ.. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪ ಇದೆ.. ಹೀಗಾಗಿ ಸಿಎಂ ಸೀಟ್​​​ ಬಗ್ಗೆ ಕ್ಲಾರಿಟಿ ನೀಡಿ.. ಭವಿಷ್ಯದಲ್ಲಿ ಬಿಜೆಪಿ-ದಳ ಮೈತ್ರಿಗೆ ತಕ್ಕ ತಿರುಗೇಟು ನೀಡಲು ಇದು ಅಗತ್ಯ ಅಂತಿದ್ದಾರೆ ಡಿಕೆಶಿ.. ಜೊತೆಗೆ ನನ್ನ ತ್ಯಾಗ, ಪರಿಶ್ರಮ ಪರಿಗಣಿಸಿ ಅಂತಿರುವ ಡಿಕೆಶಿ, ಪಕ್ಷದ ಚೌಕಟ್ಟನ್ನ ಮೀರಿಲ್ಲ ಅನ್ನೋ ಮೂಲಕ ಲಾಯಲ್ಟಿಯ ದಾಳ ಉರುಳಿಸ್ತಿದ್ದಾರೆ.. ಇನ್ನು, ನನ್ನ ಪರವೂ ಡೆಲ್ಲಿಗೆ ಬರಲು ಶಾಸಕರಿದ್ದಾರೆ, ಪ್ರಬಲ ಸಮುದಾಯವು ನನ್ನ ಬೆನ್ನಿಗಿದೆ.. ಸದ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಆಗಿದೆ.. ಅಧಿಕಾರ ಹಂಚಿಕೆಗೆ ಇದು ಸುಸಂದರ್ಭ.. ಸಿಎಂ ಸ್ಥಾನ ವಿಚಾರದಲ್ಲಿ ರಾಜಸ್ಥಾನ, ಮಧ್ಯಪ್ರದೇಶದಂತೆ ಪರಿಸ್ಥಿತಿ ನಿರ್ಮಾಣ ಆಗೋದು ಬೇಡ ಅಂತ ವರಿಷ್ಠರ ಬಳಿ ಮನವಿ ಮಾಡ್ಲಿದ್ದಾರೆ.
ಇನ್ನು, ಅಧಿಕಾರ ಹಸ್ತಾಂತರ ವಿಚಾರವಾಗಿ ಡೆಲ್ಲಿಯಲ್ಲಿ ಮಾತ್ನಾಡಿದ ಡಿಸಿಎಂ ಡಿಕೆಶಿ, ನನ್ನ, ಸಿಎಂ ಹಾಗೂ ಹೈಕಮಾಂಡ್ ನಡುವಣ ವಿಚಾರ.. ಬಹಿರಂಗ ಚರ್ಚೆ ಮಾಡುವ ವಿಷಯ ಅಲ್ಲ ಅಂತಿದ್ದಾರೆ..ಡೆಲ್ಲಿಗೆ ತೆರಳ್ತಿದ್ದಂತೆ ಡಿಸಿಎಂ ಕ್ಯಾಂಪ್​ನಲ್ಲಿ ಸಂಭ್ರಮ ಕಾಣಿಸ್ತಿದೆ.. ಸಿಎಂ ಬದಲಾವಣೆ ಆಗಬಹುದು.. ಸಂಕ್ರಾಂತಿಗೆ ಪಥ ಬದಲಾವಣೆ ಆಗುತ್ತೆ, ನಮ್ಮಲ್ಲಿ ಶುರುವಾಗಿದೆ ಅಂತ ಡಿಕೆಶಿ ಆಪ್ತ ಶಿವಗಂಗಾ ಹೇಳ್ತಿದ್ದಾರೆ.. ಆದ್ರೆ, ಡಿಕೆಶಿ ಡೆಲ್ಲಿ ವಿಸಿಟ್​​ ಏನಂತ ವಿಶೇಷ ಇಲ್ಲ ಅನ್ನೋದು ಸಿಎಂ ಕ್ಯಾಂಪ್​​ನ ವಾದ.
ಸಿಎಂ ಸ್ಥಾನದ ಬಗ್ಗೆ ಖರ್ಗೆ ಸಮ್ಮುಖದಲ್ಲಿ ರಾಹುಲ್ ಜೊತೆಗೆ ಡಿಕೆಶಿ ಚರ್ಚೆ ನಡೆಸಲಿದ್ದಾರೆ ಅಂತ ಗೊತ್ತಾಗಿದೆ.. ಜೊತೆಗೆ ಸೋನಿಯಾ ಭೇಟಿಗೂ ಸಜ್ಜಾಗಿದ್ದು, ಸಿಎಂ ಸ್ಥಾನ ಯಾವಾಗ ಸಿಗುತ್ತದೆ ಹೇಳಿ ಅಂತ ವಾದ ಮಂಡಿಸಲು ಮುಂದಾಗಿದ್ದಾರೆ.. ಒಟ್ಟಾರೆ, ಸಿಎಂ ಪಟ್ಟದ ವಿಚಾರದಲ್ಲಂತು ಬಿಗ್ ಡೇ ಹತ್ತಿರವಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us