/newsfirstlive-kannada/media/media_files/2025/09/09/jail-manual-2025-09-09-17-00-22.jpg)
ಕರ್ನಾಟಕ ಜೈಲು ಮ್ಯಾನ್ಯುಯಲ್
ಜೈಲು ಮ್ಯಾನ್ಯುಯಲ್ ಪ್ರಕಾರ ನಟ ದರ್ಶನ್ ಗೆ ಜೈಲಿನಲ್ಲಿ ನೀಡಬಹುದಾದ ಸೌಲಭ್ಯಗಳು ಏನೇನು ಗೊತ್ತಾ? ಕರ್ನಾಟಕ ಜೈಲು ಮ್ಯಾನ್ಯುಯಲ್ ನಲ್ಲಿ ವಿಚಾರಣಾಧೀನ ಖೈದಿಗಳಿಗೆ ಜೈಲಿನಲ್ಲಿ ಏನೇನು ಸೌಲಭ್ಯ ನೀಡಬಹುದು ಎಂಬ ಬಗ್ಗೆ ಸ್ಪಷ್ಟ ಉಲ್ಲೇಖ ಇದೆ. ಆದರೇ, ಜೈಲು ಮ್ಯಾನ್ಯುಯಲ್ ನಲ್ಲಿರುವ ಸೌಲಭ್ಯಗಳನ್ನು ತನಗೆ ನೀಡುತ್ತಿಲ್ಲ ಎಂದು ನಟ ದರ್ಶನ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈಗ ಬೆಂಗಳೂರಿನ 64ನೇ ಸಿಸಿಎಚ್ ಕೋರ್ಟ್ , ಜೈಲು ಮ್ಯಾನ್ಯುಯಲ್ ನಲ್ಲಿರುವ ಸೌಲಭ್ಯಗಳನ್ನು ನಟ ದರ್ಶನ್ ಗೆ ನೀಡಬೇಕೆಂದು ಜೈಲು ಅಧಿಕಾರಿಗಳಿಗೆ ಆದೇಶ ನೀಡಿದೆ. ಹಾಗಾದರೇ, ಜೈಲು ಮ್ಯಾನ್ಯುಯಲ್ ಪ್ರಕಾರ, ನಟ ದರ್ಶನ್ ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಏನೇನು ಸೌಲಭ್ಯ ಸಿಗುತ್ತೆ ಅನ್ನೋ ವಿವರ ಇಲ್ಲಿದೆ ಓದಿ.
ಚಾಪೆ, ದಿಂಬು, ಬೆಡ್ ಶೀಟ್, ಚಪ್ಪಲಿ,ಚಳಿಗಾಲದಲ್ಲಿ ಸ್ವಲ್ಪ ದಪ್ಪನೆಯ ಹಾಸಿಗೆ ನೀಡಬೇಕು.
ಜೈಲು ಅಧಿಕಾರಿಗಳೇ ಇದೆಲ್ಲವನ್ನೂ ನೀಡಬೇಕು
ಹೆಚ್ಚಿನ ಅವಶ್ಯಕತೆ ಇದ್ದರೆ ನಿಯಮಿತವಾಗಿ ಸ್ವಂತವಾಗಿ ಖರೀದಿ ಮಾಡಬಹುದು.
ಮ್ಯಾನ್ಯುಯಲ್ ಪ್ರಕಾರ ಜೈಲಿನ ಊಟ ಕೊಡಬೇಕು
ವಾಕಿಂಗ್ ಮಾಡಲು ಅವಕಾಶ ಕೊಡಬೇಕು
ಮನೆಯವರ ಭೇಟಿಗೆ ವಾರದಲ್ಲಿ ಎರಡು ದಿನ ಅವಕಾಶ ನೀಡಬೇಕು
ವಾರದಲ್ಲಿ ಎರಡು ದಿನ ಫ್ಯಾಮಿಲಿಗೆ ಲ್ಯಾಂಡ್ ಲೈನ್ ನಿಂದ ಪೋನ್ ಕರೆ ಮಾಡಬಹುದು
ಕಾಮನ್ ಏರಿಯಾದಲ್ಲಿ ಟಿವಿ ನೋಡಲು ಅವಕಾಶ
ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗಲು ಅವಕಾಶ
ಕೇರಮ್,ವಾಲಿಬಾಲ್,ಶಟಲ್,ಚೆಸ್ ಆಡಲು ಅವಕಾಶ
ಪುಸ್ತಕಗಳು ಮತ್ತು ಪೇಪರ್ ಓದಲು ಅವಕಾಶ ನೀಡಬೇಕು
ಮನಿಯಾರ್ಡರ್ ನಲ್ಲಿ 10 ಸಾವಿರದ ವರೆಗೆ ಹಣ ತರಿಸಿಕೊಳ್ಳಬಹುದು
ಜೈಲಿನ ಕಾಂಡಿಮೆಂಟ್ ನಲ್ಲಿ ಹಣ ನೀಡಿ ಸಿಹಿ ತಿಂಡಿ ಬೇಕರಿ ಉತ್ಪನ್ನಗಳನ್ನ ತಿನ್ನಲು ಅವಕಾಶ ನೀಡಬಹುದು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.