/newsfirstlive-kannada/media/media_files/2025/10/03/biruru-karnika-bhavishya-vani-2025-10-03-14-25-39.jpg)
ಬೀರೂರು ಮೈಲಾರಲಿಂಗೇಶ್ವರಸ್ವಾಮಿಯ ಕಾರ್ಣಿಕ ಭವಿಷ್ಯವಾಣಿ
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬೀರೂರು ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ಭವಿಷ್ಯ ನುಡಿದಿದೆ. ಇಂದು ಬೆಳಗಿನ ಜಾವ ಕಾರ್ಣಿಕದ ಭವಿಷ್ಯ ನುಡಿ ಹೊರ ಬಿದ್ದಿದೆ. ಬೀರೂರಿನ ಮಹಾನವಮಿ ಬಯಲಿನಲ್ಲಿ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ಭವಿಷ್ಯ ನುಡಿದಿದೆ.
ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ
ಧರ್ಮ - ಅಧರ್ಮ ಸಂಕಷ್ಟವಾಯಿತು
ವಿಶ್ವಕ್ಕೆ ಶಾಂತಿಯ ಭಂಗವಾಯಿತು
ಧರೆಗೆ ವರುಣನ ಆಗಮನವಾಯಿತು
ಸರ್ವರು ಎಚ್ಚರದಿಂದಿರಬೇಕು ಪರಾಕ್
ಹೀಗೆ ದೇವಸ್ಥಾನದ ಅರ್ಚಕ ದಶರಥ ಪೂಜಾರ್ ಅವರು ಕಾರ್ಣಿಕ ನುಡಿ ನುಡಿದಿದ್ದಾರೆ.
ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸಿದ್ದರು. ಇಲ್ಲಿನ ಕಾರ್ಣಿಕ ನುಡಿ ವರ್ಷದೊಳಗೆ ನಡೆಯುತ್ತೆ ಎಂಬ ನಂಬಿಕೆ ಇದೆ. ಕಡೂರು ತಾಲೂಕಿನ ಬೀರೂರಿನಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.