/newsfirstlive-kannada/media/media_files/2025/08/30/government-engineering-colleges02-2025-08-30-11-56-22.jpg)
ಬೀದರ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು
ಪಿಯುಸಿ ಸೈನ್ಸ್ ಮುಗಿದ ಬಳಿಕ ಬಹುತೇಕ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಸೇರುತ್ತಾರೆ. ಅದಕ್ಕಾಗಿ ವಿದ್ಯಾರ್ಥಿಗಳು ಸಿಇಟಿ, ಜೆಇಇ, ಸಿಯುಇಟಿ ಮತ್ತು ಕಾಮೆಡ್ ಕೆ ಪ್ರವೇಶ ಪರೀಕ್ಷೆಗಳು ಬರೆಯಲಿದ್ದಾರೆ. ಈ ಎಂಟ್ರೇನ್ಸ್ ಎಕ್ಸಾಂಗಳಲ್ಲಿ RANK ಪಡೆದವರು ದೇಶದ ಟಾಪ್ ಐಐಟಿ ಮತ್ತು ಎನ್‌ಐಟಿಗಳಲ್ಲಿ ಪ್ರವೇಶ ಪಡೆಯುತ್ತಾರೆ.
ಅದರಲ್ಲೂ ಹೆಚ್ಚಿನವರು ಕಂಪ್ಯೂಟರ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್ ಮತ್ತು ಕೆಮಿಕಲ್ ಇಂಜಿನಿಯರಿಂಗ್ ಆಪ್ಟ್ (OPT) ಮಾಡಿಕೊಳ್ಳುತ್ತಾರೆ. ಈ ಕೋರ್ಸುಗಳು ಮಾಡಲು ಲಕ್ಷ ಲಕ್ಷ ಫೀಸ್ ಬೇಕು. ಈಗ ಕಡಿಮೆ ಫೀಸ್ನಲ್ಲಿ ಇಂಜಿನಿಯರಿಂಗ್ ಮುಗಿಸಲು ಹಲವು ಸರ್ಕಾರಿ ಕಾಲೇಜುಗಳು ಇವೆ. ಆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಯಾವುವು? ಅಂತ ಈಗ ವಿವರ ನೀಡುತ್ತಿದ್ದೇವೆ, ಓದಿ.
ಹೂವಿನಹಡಗಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು
ಇಂಜಿನಿಯರಿಂಗ್ ಕೋರ್ಸ್‌ಗೆ ಪ್ರವೇಶ ಪಡೆಯಲು ಎಂಟ್ರೇನ್ಸ್ ಎಕ್ಸಾಂ ಕಡ್ಡಾಯ. ಕೆಸಿಇಟಿ, ಕಾಮೇಡ್-ಕೆ, ಸಿಯುಇಟಿ ಮತ್ತು ಜೆಇಇ ಹೀಗೆ ಹಲವು ಪ್ರವೇಶ ಪರೀಕ್ಷೆಗೆ ಹಾಜರಾದ ಬಳಿಕ ರಿಸಲ್ಟ್ ಬರಲಿದೆ. ಈ ಪರೀಕ್ಷೆಗಳಲ್ಲಿ RANK ಪಡೆದ ವಿದ್ಯಾರ್ಥಿಗಳು ಕೌನ್ಸಲಿಂಗ್‌ನಲ್ಲಿ ಉತ್ತಮ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅದ್ರಲ್ಲೂ ರಾಜ್ಯದ ಈ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಶ್ರೀ ಕೃಷ್ಣರಾಜೇಂದ್ರ ಸಿಲ್ವರ್ ಜುಬಿಲಿ ತಾಂತ್ರಿಕ ಸಂಸ್ಥೆ. ಇದನ್ನು SKSJTI ಬೆಂಗಳೂರು ಎಂದು ಕೂಡ ಕರೀತಾರೆ. ಈ ಇಂಜಿನಿಯರಿಂಗ್ ಕಾಲೇಜಲ್ಲಿ ಸಿಎಸ್, ಸಿಇ, ಇಸಿ ಇಂಜಿನಿಯರಿಂಗ್ ಕೋರ್ಸ್ ಮಾಡಬಹುದು. ಇಷ್ಟೇ ಅಲ್ಲ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮೊಸಳೆಹೊಸಳ್ಳಿ. ಇದು ಸಖತ್ ಫೇಮಸ್ ಕಾಲೇಜು. ಇಲ್ಲಿ ಸಿಎಸ್, ಸಿಇ, ಇಸಿ, ಇಇ, ಎಂಇ ವಿಭಾಗಗಳು ಇವೆ. ತಳಕಲ್ಲು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಗಂಗಾವತಿ, ರಾಮನಗರ ಸರ್ಕಾರಿ ಇಂಜಿನಿಯರಿಂಗ್, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಚಳ್ಳೆಕೆರೆ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಬೀದರ್, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನರಗುಂದ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಚಾಮರಾಜನಗರ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾಸನ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾವೇರಿ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹುವಿನಹಡಗಲಿ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಾರವಾರ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕೆ.ಆರ್.ಪೇಟೆ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕುಶಾಲನಗರ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ರಾಯಚೂರು ಕೂಡ ಇದೆ. ಎಲ್ಲಾ ಕಾಲೇಜುಗಳಲ್ಲಿ ಸಿಎಸ್, ಸಿಇ, ಇಸಿ, ಇಇ, ಎಂಇ ವಿಭಾಗಗಗಳಲ್ಲಿ ತಲಾ 60 ಸೀಟುಗಳು ಇವೆ.
ಬೆಂಗಳೂರಿನ ಯುವಿಸಿಇ ಕಾಲೇಜು, ಹಾವೇರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು
ರಾಜ್ಯದಲ್ಲಿ ಒಟ್ಟಾರೆ 3,730 ಸೀಟುಗಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಲಭ್ಯ ಇವೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಮೊದಲ ವರ್ಷದ ಸಂಪೂರ್ಣ ಪ್ರವೇಶ ಶುಲ್ಕ 38,200 ರೂಪಾಯಿ ಇದೆ. ಉಳಿದ ವರ್ಷಕ್ಕೆ ಪ್ರವೇಶ ಶುಲ್ಕ 30,350 ರೂಪಾಯಿ ಇದೆ. ಈ ಎಲ್ಲಾ ಕಾಲೇಜುಗಳಲ್ಲೂ ಕಡಿಮೆ ಫೀಸ್ನಲ್ಲಿ ಇಂಜಿನಿಯರಿಂಗ್ ಮುಗಿಸಬಹುದಾಗಿದೆ.
ವಿಶೇಷ ಸೂಚನೆ-ಎಲ್ಲ ಕೇಬಲ್ ಮತ್ತು ಡಿಟಿಎಚ್‌ನಲ್ಲಿ ನ್ಯೂಸ್‌ಫಸ್ಟ್ ಲಭ್ಯ.