ಹನುಮಾನ್ ಮೂರ್ತಿಗೆ ರೌಂಡ್ ಹೊಡೆದ ಶ್ವಾನ : ಈಗ ಶ್ವಾನಕ್ಕೆ ಜನರಿಂದ ಪೂಜೆ, ಶ್ವಾನ ಪಾದಕ್ಕೆ ನಮಸ್ಕಾರ

ಉತ್ತರ ಪ್ರದೇಶದ ಬಿಜ್ನೂರ್ ಜಿಲ್ಲೆಯಲ್ಲಿ ಶ್ವಾನವೊಂದು ವಿಚಿತ್ರ ವರ್ತನೆ ತೋರಿದೆ. ಮೊದಲಿಗೆ ಹನುಮಾನ್ ಮೂರ್ತಿಗೆ ಪ್ರದಕ್ಷಿಣೆ ಹಾಕಿದೆ. ದಿನಪೂರ್ತಿ ಹನುಮಾನ್ ಮೂರ್ತಿಗೆ ಪ್ರದಕ್ಷಿಣೆ ಹಾಕಿದೆ. ಬಳಿಕ ದೇವಸ್ಥಾನದಲ್ಲಿ ಮಲಗಿಕೊಂಡಿದೆ. ಈಗ ಜನರು ಶ್ವಾನ ಪಾದಕ್ಕೆ ನಮಸ್ಕರಿಸಿ, ಪೂಜೆ ಸಲ್ಲಿಸುತ್ತಿದ್ದಾರೆ.

author-image
Chandramohan
DOG ROUNDS HANUMAN STATUE IN BIJANOOR (1)
Advertisment

ಉತ್ತರಪ್ರದೇಶದ ಬಿಜ್ನೋರ್‌ನ ಪುರಾತನ ದೇವಾಲಯವೊಂದರಲ್ಲಿ ನಾಯಿಯ ವಿಚಿತ್ರ ವರ್ತನೆ ಗ್ರಾಮಸ್ಥರನ್ನು ಅಚ್ಚರಿಗೊಳಿಸಿದ್ದು, ಚರ್ಚೆಯ ಕೇಂದ್ರ ಬಿಂದುವಾಗಿದೆ. ಬಿಜ್ನೋರ್​​ ಹನುಮಾನ್ ಮತ್ತು ದುರ್ಗಾ ದೇವಿಯ ವಿಗ್ರಹಗಳನ್ನು ಕಳೆದ ಮೂರ್ನಾಲ್ಕು ದಿನಗಳಿಂದ ಪ್ರದಕ್ಷಿಣೆ ಹಾಕಿದ ಶ್ವಾನ.. ನಂತರ ಏಕಾಏಕಿ ಒಂದು ಮೂಲೆಯಲ್ಲಿ ಬಂದು ಮಲಗಿದೆ. ಶ್ವಾನದ ನಿಗೂಢ ನಡೆಯಿಂದ ಅಚ್ಚರಿಗೊಂಡ ಜನರು, ಇದು ದೈವಿಶಕ್ತಿ ಇರುವ ಶ್ವಾನ.. ಇದು ದೇವರ ಪವಾಡ ಎಂದು ಭಾವಿಸಿ ಜನರು, ಶ್ವಾನಕ್ಕೆ ಪೂಜೆ ಸಲ್ಲಿಸಿ, ಅದರ ಪಾದಗಳಿಗೆ ನಮಸ್ಕರಿಸುತ್ತಿದ್ದಾರೆ. ಈ ಸುದ್ದಿ ಎಲ್ಲೆಡೆ ಪರಸರಿಸಿದ್ದು, ಸುತ್ತಮುತ್ತಲ ಗ್ರಾಮಗಳ ಜನರು ಕೂಡ ಬಂದು ಶ್ವಾನದ ದರ್ಶನ ಪಡೆದು, ಪೂಜಿಸುತ್ತಿದ್ದಾರೆ.

DOG ROUNDS HANUMAN STATUE IN BIJANOOR





ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

street dog stray dogs dog hanuman rounds
Advertisment