/newsfirstlive-kannada/media/media_files/2025/10/10/maria-corina-machado-2025-10-10-15-00-40.jpg)
ವೆನಿಜುವೆಲಾ ದೇಶದ ಮರಿಯಾ ಕೊರಿನಾ ಮಚಾಡೋಗೆ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆ
ಕೊನೆಗೂ ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟವಾಗಿದೆ. ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಗೆ ಮತ್ತೆ ಭಾರಿ ನಿರಾಶೆಯಾಗಿದೆ. ನೊಬೆಲ್ ಶಾಂತಿ ಪ್ರಶಸ್ತಿಯನ್ನು ತಮಗೆ ನೀಡಬೇಕೆಂದು ಪದೇ ಪದೇ ಆಗ್ರಹಿಸಿದ್ದ ಡೋನಾಲ್ಡ್ ಟ್ರಂಪ್‌ಗೆ ನಿರಾಶೆಯಾಗಿದೆ. ಡೋನಾಲ್ಡ್ ಟ್ರಂಪ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಕ್ಕಿಲ್ಲ. ವೆನಿಜುವೆಲಾ ದೇಶದ ಮರಿಯಾ ಕೊರಿನಾ ಮಚಾಡೋ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ. ವೆನಿಜುವೆಲಾ ದೇಶದಲ್ಲಿ ಜನರ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದ ಮರಿಯಾ ಕೊರಿನಾ ಮಚಾಡೋ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಕ್ಕಿದೆ.
ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಗೆ ಶುಕ್ರವಾರ, ಗುಡ್ ಪ್ರೈಡೇ ಆಗಲಿಲ್ಲ. ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಮುಂದಿನ ವರ್ಷದವರೆಗೂ ಡೋನಾಲ್ಡ್ ಟ್ರಂಪ್ ಮತ್ತೆ ಕಾಯಬೇಕಾಗಿದೆ. ಮುಂದಿನ ವರ್ಷವೂ ಡೋನಾಲ್ಡ್ ಟ್ರಂಪ್‌ಗೆ ನೊಬೆಲ್ ಶಾಂತಿ ಪುರಸ್ಕಾರ ಸಿಗುತ್ತೆ ಎಂಬ ಗ್ಯಾರಂಟಿಯೂ ಇಲ್ಲ.
ಈ ಹಿಂದೆ 2014 ರಲ್ಲಿ ಭಾರತದ ಕೈಲಾಸ್ ಸತ್ಯಾರ್ಥಿ ಅವರು ಮಕ್ಕಳ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಕ್ಕಾಗಿ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗಿತ್ತು. 2009 ರಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ನೊಬೆಲ್ ಶಾಂತಿ ಪುರಸ್ಕಾರ ಘೋಷಿಸಲಾಗಿತ್ತು.