/newsfirstlive-kannada/media/media_files/2025/09/27/klb_rains_1-2025-09-27-15-22-10.jpg)
ನೀರಿನಲ್ಲಿ ಮುಳುಗಿರುವ ಅನೇಕ ಗ್ರಾಮಗಳ ಮನೆಗಳು
ಉತ್ತರ ಕರ್ನಾಟಕ ಹಾಗು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಭೀಮಾ ಹಾಗು ಮಾಂಜ್ರಾ ನದಿಗಳು ಅಪಾಯಮಟ್ಟವನ್ನು ಮೀರಿ ಹರಿಯುತ್ತಿವೆ. ಇದರಿಂದಾಗಿ ಜನ ಜೀವನ ಸಂಪೂರ್ಣ ಅಸ್ಥವ್ಯಸ್ತವಾಗಿದ್ದು. ಸಾವಿರಾರು ಎಕರೆ ಬೆಳೆ ಹಾನಿಯಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಹತ್ತಿ ಬೆಳೆ ಕೊಳೆತು ಹೋಗಿದೆ. ನಿಲೆಕೇರಿ ಗ್ರಾಮದ ರೈತ ನಾಗಪ್ಪ ಸುಮಾರು 1 ಲಕ್ಷ ಖರ್ಚು ಮಾಡಿ ಬೆಳೆದಿದ್ದ ಹತ್ತಿ ಬೆಳೆ ಸಂಪೂರ್ಣವಾಗಿ ಕೊಳೆತು ಹೋಗಿದೆ. ಸುಮಾರು 5 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ತೀವ್ರ ನಷ್ಟವಾಗಿದೆ.
ಇನ್ನೂ ವಿಜಯಪುರ ಜಿಲ್ಲೆಯಲ್ಲಿಯು ಮಳೆರಾಯ ಅವಾಂತರಗಳನ್ನೇ ಸೃಷ್ಟಿಸಿದ್ದು, ತೊಗರಿ, ಕಬ್ಬು ಮತ್ತು ಮೆಕ್ಕೆಜೋಳ ಬೆಳೆಗಳು ಜಲಾವೃತವಾಗಿವೆ. ಅಲಮೇಲ ತಾಲೂಕಿನ ಶಂಬೇವಾಡ ಗ್ರಾಮದಲ್ಲಿ ಭೀಮಾ ನದಿಯ ನೀರಿನಲ್ಲಿ ಸಿಲುಕಿದ್ದ ಮೂವರು ಗರ್ಭಿಣಿ, ಇಬ್ಬರು ಬಾಲಕರು, ಒಂದು ಮಗು ಸೇರಿದಂತೆ 10ಕ್ಕು ಹೆಚ್ಚು ಜನರನ್ನು ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ.
ಇತ್ತ ಕೊಪ್ಪಳ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಮುಂದುವರೆದಿದೆ, ಮುದ್ಲಾಪುರ ಡ್ಯಾಂ ನಿಂದು ಹಿರೇಹಳ್ಳಕ್ಕೆ ಏಕಾಏಕಿ ನೀರು ಹರಿಸಿದ ಪರಿಣಾಮ, ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮದಲ್ಲಿ ಬೋಜಪ್ಪ ಉಳ್ಳಾಗಡ್ಡಿ ಎಂಬ ವ್ಯಕ್ತಿ ಹಳ್ಳದಲ್ಲಿ ಸಿಲುಕಿದ್ದರು. ನಡು ಬಂಡೆಯ ಮೇಲೆ ಈಜು ಬಾರದೆ ಕುಳಿತಿದ್ದ ಬೊಜಪ್ಪನನ್ನು ಬೋಟ್ ಹಾಗೂ ಹಗ್ಗದ ಮೂಲಕ ಅಗ್ನಿಶಾಮಕ ಸಿಬ್ಬಂದಿಗಳು ಹಾಗು ಪೊಲೀಸರು ಹೊರತಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.