/newsfirstlive-kannada/media/post_attachments/wp-content/uploads/2024/11/ELAN-MUSK-NET-WORTH-2.jpg)
500 ಬಿಲಿಯನ್ ಡಾಲರ್ ದಾಟಿದ ಎಲಾನ್ ಮಸ್ಕ್ ಸಂಪತ್ತು
ಟೆಸ್ಲಾ ಕಂಪನಿಯ ಸಿಇಓ ಎಲಾನ್ ಮಸ್ಕ್ ಸಂಪತ್ತಿನಲ್ಲಿ ಭಾರಿ ಏರಿಕೆಯಾಗಿದೆ. ವಿಶ್ವದಲ್ಲಿ 500 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಮೊದಲ ವ್ಯಕ್ತಿಯಾಗಿ ಎಲಾನ್ ಮಸ್ಕ್ ಹೊರಹೊಮ್ಮಿದ್ದಾರೆ. ಇದೇ ಮೊದಲ ಭಾರಿಗೆ ಎಲಾನ್ ಮಸ್ಕ್ ಸಂಪತ್ತಿನ ಮೌಲ್ಯವು ಬರೋಬ್ಬರಿ 500 ಬಿಲಿಯನ್ ಡಾಲರ್ ದಾಟಿದೆ. ಪೋರ್ಬ್ಸ್ ನ ರಿಯಲ್ ಟೈಮ್ ಬಿಲಿಯನೇರ್ಸ್ ಟ್ರ್ಯಾಕರ್ ಪ್ರಕಾರ, ಭೂಮಿಯ ಮೇಲೆ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಎಲಾನ್ ಮಸ್ಕ್ ಸಂಪತ್ತು ಬರೋಬ್ಬರಿ 500.1 ಬಿಲಿಯನ್ ಡಾಲರ್ ಆಗಿದೆ.
ಕಳೆದ ವರ್ಷದ ಡಿಸೆಂಬರ್ ನಲ್ಲಿ ಎಲಾನ್ ಮಸ್ಕ್ ಸಂಪತ್ತು 400 ಬಿಲಿಯನ್ ಡಾಲರ್ ಆಗಿತ್ತು. ಎಲಾನ್ ಮಸ್ಕ್ ಅವರ ನಿವ್ವಳ ಸಂಪತ್ತು, ಎರಡನೇ ಸ್ಥಾನದಲ್ಲಿರುವ ಒರಾಕಲ್ ಕಂಪನಿಯ ಸಹ ಸಂಸ್ಥಾಪಕ ಲ್ಯಾರಿ ಎಲಿಸನ್ ಅವರ ನಿವ್ವಳ ಸಂಪತ್ತಿಗಿಂತ 150 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಇತಿಹಾಸದಲ್ಲೇ ಮೊದಲ ಭಾರಿಗೆ ಅರ್ಧ ಟ್ರಿಲಿಯನ್ ಡಾಲರ್ ನಿವ್ವಳ ಸಂಪತ್ತು ಸಾಧಿಸಿದ ಮೊದಲ ವ್ಯಕ್ತಿ ಎಲಾನ್ ಮಸ್ಕ್ ಆಗಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಬಿಲಿಯನೇರ್ ಎಲಾನ್ ಮಸ್ಕ್ ಅವರ ಸಂಪತ್ತು ಅವರ ವಿದ್ಯುತ್ ವಾಹನ ತಯಾರಿಕಾ ಕಂಪನಿ ಟೆಸ್ಲಾಗೆ ನಿಕಟ ಸಂಬಂಧ ಹೊಂದಿದೆ. ಟೆಸ್ಲಾದಲ್ಲಿ ಅವರು ಸೆಪ್ಟೆಂಬರ್ 15 ರ ಹೊತ್ತಿಗೆ 12.4 ಪ್ರತಿಶತಕ್ಕಿಂತ ಹೆಚ್ಚು ಪಾಲನ್ನು ಹೊಂದಿದ್ದಾರೆ. ಈ ವರ್ಷ ಇಲ್ಲಿಯವರೆಗೆ ಕಂಪನಿಯ ಷೇರುಗಳು ಶೇಕಡಾ 14 ಕ್ಕಿಂತ ಹೆಚ್ಚು ಏರಿಕೆಯಾಗಿ ಬುಧವಾರ ಸುಮಾರು ಶೇಕಡಾ 4 ರಷ್ಟು ಏರಿಕೆಯಾಗಿ, ಮಸ್ಕ್ ಅವರ ಸಂಪತ್ತಿಗೆ ಅಂದಾಜು $9.3 ಬಿಲಿಯನ್ ಸೇರ್ಪಡೆಯಾಗಿದೆ.
ಮಸ್ಕ್ ಅವರ ಅದೃಷ್ಟದತ್ತ ಒಂದು ನೋಟ
ವರ್ಷದ ಪ್ರಕ್ಷುಬ್ಧ ಆರಂಭದ ನಂತರ, ಅಧ್ಯಕ್ಷ ಟ್ರಂಪ್ ಅವರ ಸರ್ಕಾರಿ ದಕ್ಷತೆ ಇಲಾಖೆಯ (DOGE) ಮುಖ್ಯಸ್ಥ ಸ್ಥಾನದಿಂದ ಹಿಂದೆ ಸರಿಯುವುದಾಗಿ ಮಸ್ಕ್ ಘೋಷಿಸಿದ ನಂತರ ಹೂಡಿಕೆದಾರರ ಭಾವನೆ ಸುಧಾರಿಸಿದ್ದರಿಂದ ಟೆಸ್ಲಾ ಷೇರುಗಳು ಹೆಚ್ಚಿನ ಏರಿಕೆ ಕಂಡಿವೆ.
ಟೆಸ್ಲಾ ಮಂಡಳಿಯ ಅಧ್ಯಕ್ಷ ರಾಬಿನ್ ಡೆನ್ಹೋಮ್ ಕಳೆದ ತಿಂಗಳು ಎಲಾನ್ ಮಸ್ಕ್ ಶ್ವೇತಭವನದಲ್ಲಿ ಹಲವಾರು ತಿಂಗಳುಗಳ ನಂತರ ಕಂಪನಿಯಲ್ಲಿ "ಫ್ರಂಟ್ ಮತ್ತು ಸೆಂಟರ್" ಆಗಿದ್ದಾರೆ ಎಂದು ಹೇಳಿದರು. ಕೆಲವು ದಿನಗಳ ನಂತರ, ಎಲಾನ್ ಮಸ್ಕ್ ಅವರು ಸುಮಾರು $1 ಬಿಲಿಯನ್ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ಬಹಿರಂಗಪಡಿಸಿದರು, ಇದು ಟೆಸ್ಲಾ ವಾಹನ ತಯಾರಕರಿಂದ AI ಮತ್ತು ರೊಬೊಟಿಕ್‌ನಲ್ಲಿ ನಾಯಕನಾಗಿ ರೂಪಾಂತರಗೊಳ್ಳಲು ಶ್ರಮಿಸುತ್ತಿರುವಾಗ ಅದರ ಭವಿಷ್ಯದಲ್ಲಿ ಗಮನಾರ್ಹ ಮಟ್ಟದ ವಿಶ್ವಾಸವನ್ನು ಪ್ರದರ್ಶಿಸುತ್ತದೆ.
ಟೆಸ್ಲಾ ಬೋರ್ಡ್ ಕಳೆದ ತಿಂಗಳು ಎಲಾನ್ ಮಸ್ಕ್ ಗೆ 1 ಟ್ರಿಲಿಯನ್ ಡಾಲರ್ ವೇತನ ನೀಡುವ ಪ್ರಸ್ತಾಪ ಮಾಡಿದೆ. ಈ ಮೂಲಕ ದೊಡ್ಡ ಹಣಕಾಸು ಮತ್ತು ಅಪರೇಷನ್ ಟಾರ್ಗೆಟ್ ಅನ್ನು ಎಲಾನ್ ಮಸ್ಕ್ ಗೆ ನೀಡುತ್ತಿದೆ.
ಟೆಸ್ಲಾ ಕಂಪನಿಯಿಂದ ಮಾತ್ರವೇ ಎಲಾನ್ ಮಸ್ಕ್ ಸಂಪತ್ತಿನಲ್ಲಿ ಏರಿಕೆಯಾಗಿಲ್ಲ. ಎಐ ಸ್ಟಾರ್ಟ್ ಅಪ್ xAI ಮತ್ತು ರಾಕೆಟ್ ಕಂಪನಿ ಸ್ಪೇಸ್ ಎಕ್ಸ್ ನಿಂದಾಗಿ ಎಲಾನ್ ಮಸ್ಕ್ ಸಂಪತ್ತಿನಲ್ಲಿ ಏರಿಕೆಯಾಗಿದೆ.
xAI ಈ ವರ್ಷದ ಜುಲೈನಲ್ಲಿ 75 ಬಿಲಿಯನ್ ಡಾಲರ್ ಮೌಲ್ಯ ಹೊಂದಿತ್ತು ಇನ್ನೂ ಫಂಡ್ ಸಂಗ್ರಹದ ಬಳಿಕ 200 ಬಿಲಿಯನ್ ಡಾಲರ್ ಗೆ ಮೌಲ್ಯ ಏರಿಕೆ ಮಾಡುವ ಉದ್ದೇಶ ಹೊಂದಿತ್ತು ಎಂದು ಸಿಎನ್‌ಬಿಸಿ ಸೆಪ್ಟೆಂಬರ್ ನಲ್ಲಿ ವರದಿ ಮಾಡಿದೆ. ಆದರೇ, ಕಂಪನಿಗೆ ಸದ್ಯಕ್ಕೆ ಯಾವುದೇ ಫಂಡ್ ಸಂಗ್ರಹ ಮಾಡುತ್ತಿಲ್ಲ ಎಂದು ಎಸಾನ್ ಮಸ್ಕ್ ಹೇಳಿದ್ದಾರೆ.
ಇನ್ನೂ ಬ್ಲೂಮ್ ಬರ್ಗ್ ವರದಿಯ ಪ್ರಕಾರ, ಸ್ಪೇಸ್ ಎಕ್ಸ್ ಕಂಪನಿಯಯು ಫಂಡ್ ಸಂಗ್ರಹಿಸಿ, ಇನ್ ಸೈಡರ್ ಷೇರುಗಳನ್ನು ಮಾರಾಟ ಮಾಡುವ ಪ್ಲ್ಯಾನ್ ಮಾಡಿದ್ದು, ಕಂಪನಿಯ ಮೌಲ್ಯ 400 ಬಿಲಿಯನ್ ಡಾಲರ್ ಎಂದು ಅಂದಾಜಿಸಿದೆ.
ಅಂದರೇ, ಎಕ್ಸ್ ಎಐ ಮತ್ತು ಸ್ಪೇಸ್ ಎಕ್ಸ್ ಕಂಪನಿಗಳೆರೆಡೂ ಬರೋಬ್ಬರಿ 600 ಬಿಲಿಯನ್ ಡಾಲರ್ ಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿವೆ. ಇನ್ನೂ ಟೆಸ್ಲಾ, ಟ್ವೀಟರ್ ಸೇರಿದಂತೆ ಅನೇಕ ಕಂಪನಿಗಳನ್ನು ಎಲಾನ್ ಮಸ್ಕ್ ಹೊಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.