/newsfirstlive-kannada/media/media_files/2025/11/07/up-kanpur-dysp-corruption-case-2025-11-07-17-37-08.jpg)
ಪೊಲೀಸ್ ಇಲಾಖೆಯ ಓರ್ವ ಡಿವೈಎಸ್ಪಿ ಬಳಿ ಎಷ್ಟು ಕೋಟಿ ರೂಪಾಯಿ ಸಂಪತ್ತು ಇರಬಹುದು? ಐದು ಕೋಟಿ ರೂಪಾಯಿ, ಹತ್ತು ಕೋಟಿ ರೂಪಾಯಿ ಸಂಪತ್ತು ಇರಬಹುದು ಎಂದು ನೀವು ಊಹಿಸಬಹುದು. ಆದರೇ, ಉತ್ತರ ಪ್ರದೇಶದ ಡಿವೈಎಸ್ಪಿ ರಿಷಿಕಾಂತ್ ಶುಕ್ಲಾ ಬಳಿ ಬರೋಬ್ಬರಿ 100 ಕೋಟಿ ರೂಪಾಯಿ ಸಂಪತ್ತು ಪತ್ತೆಯಾಗಿದೆ. ಇದೆಲ್ಲವೂ ಸಕ್ರಮ ಸಂಪತ್ತು ಅಂತೂ ಅಲ್ಲವೇ ಅಲ್ಲ. ಇದೆಲ್ಲಾ ಆಕ್ರಮ, ಆದಾಯ ಮೀರಿದ ಆಸ್ತಿ ಗಳಿಕೆ. ಎಲ್ಲವೂ ಭ್ರಷ್ಟಾಚಾರ, ಜನರಿಗೆ ಬೆದರಿಕೆ ಹಾಕಿ, ಕ್ರಿಮಿನಲ್ ಗಳ ಜೊತೆ ಶಾಮೀಲಾಗಿ ಗಳಿಸಿರುವ ಸಂಪತ್ತು.
ರಿಷಿಕಾಂತ್ ಶುಕ್ಲಾ ಉತ್ತರ ಪ್ರದೇಶದಲ್ಲಿ ಒಂದು ಕಾಲದಲ್ಲಿ ಎನ್ ಕೌಂಟರ್ ಸ್ಪೆಷಲಿಸ್ಟ್ ಆಗಿ ಹೆಸರು ಗಳಿಸಿದ್ದವರು. ಆದರೇ, ಎನ್ ಕೌಂಟರ್ ಗಳನ್ನೇ ಜನರಿಂದ ಆಸ್ತಿ ವಸೂಲಿ, ಹಣ ವಸೂಲಿಗೆ ಬಳಸಿದ್ದಾರೆ. ಎನ್ ಕೌಂಟರ್ ಪದ ಬಳಸಿ, ರಿಷಿಕಾಂತ್ ಶುಕ್ಲಾ ತನ್ನಿಂದ ತೊಂದರೆಗೊಳಗಾದವರು ಸೈಲೆಂಟ್ ಆಗುವಂತೆ ಮಾಡಿದ್ದಾರೆ. ಕಾನ್ಪುರ ಸುತ್ತ ತನ್ನದೇ ಆದ ರಿಯಲ್ ಎಸ್ಟೇಟ್ ಸಾಮ್ರಾಜ್ಯವನ್ನೇ ಕಟ್ಟಿಕೊಂಡಿದ್ದಾರೆ.
ಡಿವೈಎಸ್ಪಿ ರಿಷಿಕಾಂತ್ ಶುಕ್ಲಾ ಆಕ್ರಮಗಳ ಬಗ್ಗೆ ತನಿಖೆಗೆ ಯುಪಿ ಸರ್ಕಾರ, ಎಸ್‌ಐಟಿ ರಚಿಸಿದೆ. ತನಿಖೆಯ ವೇಳೆ ಸ್ಪೋಟಕ ಅಂಶಗಳ ಬೆಳಕಿಗೆ ಬಂದಿವೆ. ರಿಷಿಕಾಂತ್ ಶುಕ್ಲಾ , ಬಿಲ್ಡರ್ ಗಳು, ಬ್ಯುಸಿನೆಸ್ ಮೆನ್ ಗಳು, ಪ್ರಾಪರ್ಟಿ ಮಾಲೀಕರಿಗೆ ವ್ಯವಸ್ಥಿತವಾಗಿ ಎನ್ ಕೌಂಟರ್ ಹೆಸರಿನಲ್ಲಿ ಬೆದರಿಸಿದ್ದಾರೆ. ಜನರನ್ನು ಸುಳ್ಳು ಕೇಸ್ ನಲ್ಲಿ ಸಿಲುಕಿಸಿ, ಅವರ ಆಸ್ತಿಗಳನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡುವಂತೆ ಮಾಡಿದ್ದಾರೆ. ಕೆಲವೊಮ್ಮೆ ತಲೆಗೆ ಗನ್ ಇಟ್ಟು ಹೆದರಿಸಿದ್ದಾರೆ.
/filters:format(webp)/newsfirstlive-kannada/media/media_files/2025/11/07/up-kanpur-dysp-corruption-case02-2025-11-07-17-39-13.jpg)
ರಿಷಿಕಾಂತ್ ಶುಕ್ಲಾನಿಂದ ತೊಂದರೆಗೊಳಗಾದ ಮನೋಹರ್ ಎಂಬಾತನ ಹೇಳುವ ಪ್ರಕಾರ, ಮನೋಹರ್- ರಿಷಿಕಾಂತ್ ಜೊತೆಯಾಗಿಯೇ ಆಸ್ತಿ ಖರೀದಿ ಮಾಡಿದ್ದರು. ಆಸ್ತಿ ಬೆಲೆ ಏರಿಕೆಯಾದಾಗ, ಮನೋಹರ್ ತನ್ನ ಪಾಲಿನ 7 ಕೋಟಿ ರೂಪಾಯಿ ಪಡೆಯಲು ಹೋದಾಗ, ರಿಷಿಕಾಂತ್ ಶುಕ್ಲಾ ನನ್ನ ಹಣೆಗೆ ಪಿಸ್ತೂಲ್ ಇಟ್ಟು ಹೆದರಿಸಿದ್ದರು. ನೀನು ಯಾವುದೇ ಹಣ ಪಡೆಯಲಾಗಲ್ಲ ಎಂದು ರಿಷಿಕಾಂತ್ ಶುಕ್ಲಾ ಹೇಳಿದ್ದರು . ಎಲ್ಲ 7 ಕೋಟಿ ರೂಪಾಯಿ ಹಣವನ್ನು ರಿಷಿಕಾಂತ್ ಶುಕ್ಲಾ ತೆಗೆದುಕೊಂಡು ಹೋದರು ಎಂದು ಮನೋಹರ್ ಹೇಳಿದ್ದಾರೆ.
ಬಹಳಷ್ಟು ಮಂದಿ ರಿಷಿಕಾಂತ್ ಶುಕ್ಲಾಗೆ ಹೆದರಿಕೊಂಡು ತಮಗಾದ ತೊಂದರೆ ಹೇಳಿಕೊಳ್ಳಲು ಮುಂದೆ ಬರುತ್ತಿಲ್ಲ.
ಇನ್ನೂ ಕಾನ್ಪುರದ ಲಾಯರ್ ಮತ್ತು ಕ್ರಿಮಿನಲ್ ಅಖಿಲೇಶ್ ದುಬೆ ಜೊತೆ ಸೇರಿಕೊಂಡು ತಮ್ಮದೇ ಆದ ಸಿಂಡಿಕೇಟ್ ನಡೆಸಿದ್ದಾರೆ. ಪೊಲೀಸ್ ಮತ್ತು ವಕೀಲರ ಜೊತೆ ಸೇರಿಕೊಂಡು ತಮ್ಮ ಸಿಂಡಿಕೇಟ್ ಮೂಲಕ ಜನರನ್ನು ಬೆದರಿಸಿದ್ದಾರೆ. ಸುಳ್ಳು ಕೇಸ್ ಹಾಕಿದ್ದಾರೆ. ಕೇಸ್ ನಿಂದ ರಿಲೀಫ್ ಬೇಕಾದರೇ, ದೊಡ್ಡ ಮೊತ್ತದ ಹಣ ನೀಡುವಂತೆ ಒತ್ತಡ ಹೇರಿದ್ದಾರೆ.
ಇನ್ನೂ ಕೆಲವರಿಗೆ ಸುಳ್ಳು ರೇಪ್ ಕೇಸ್ ಮತ್ತು ಭೂ ಕಬಳಿಕೆಯ ಕೇಸ್ ಕೂಡ ಹಾಕಿ ಆಸ್ತಿಯನ್ನು ತಮಗೆ ಸರೆಂಡರ್ ಮಾಡುವಂತೆ ಮಾಡಿದ್ದಾರೆ.
ತನ್ನ ಆಕ್ರಮ ಸಂಪಾದನೆಯ ಹಣ ಮತ್ತು ಆಸ್ತಿಯನ್ನು ಅಖಿಲೇಶ್ ದುಬೆಯ ಕನ್ಸಟ್ರಕ್ಷನ್ ಕಂಪನಿಯಲ್ಲಿ ರಿಷಿಕಾಂತ್ ಶುಕ್ಲಾ ಹೂಡಿಕೆ ಮಾಡಿದ್ದ. ಅಖಿಲೇಶ್ ದುಬೆಯ ಕನ್ಸಟ್ರಕ್ಷನ್ ಕಂಪನಿಗೆ ರಿಷಿಕಾಂತ್ ಶುಕ್ಲಾ ಪತ್ನಿ ಪ್ರಭಾ ಶುಕ್ಲಾ ಪಾರ್ಟನರ್ ಆಗಿದ್ದಾರೆ.
ಎಸ್‌ಐಟಿ ತನಿಖೆಯ ಪ್ರಕಾರ, ರಿಷಿಕಾಂತ್ ಶುಕ್ಲಾ ಆಸ್ತಿ, ಬೇನಾಮಿ ಆಸ್ತಿಗಳು ಕಾನ್ಪುರದ 12 ಕಡೆಗಳಲ್ಲಿ ಇವೆ. ಇವುಗಳ ಮೌಲ್ಯ ಬರೋಬ್ಬರಿ 92 ಕೋಟಿ ರೂಪಾಯಿ . ಇನ್ನೂ ಕೆಲ ಆಸ್ತಿಗಳು ಸಿಗದೇ ಇರಬಹುದು. ಆಕ್ರಮ ಆಸ್ತಿಯ ಮೌಲ್ಯ ಇನ್ನೂ ಹೆಚ್ಚಾಗಿಯೂ ಇರಬಹುದು ಎಂದು ಎಸ್‌ಐಟಿ ಅಧಿಕಾರಿಗಳು ಅಂದಾಜಿಸಿದ್ದಾರೆ.
ರಿಷಿಕಾಂತ್ ಶುಕ್ಲಾ ಕಾನ್ಪುರದಲ್ಲಿ 1998 ರಿಂದ 2008 ರವರೆಗೆ ಸಬ್ ಇನ್ಸ್ ಪೆಕ್ಟರ್ ಮತ್ತು ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡಿದ್ದಾನೆ. ಇನ್ನೂ ಉತ್ತರ ಪ್ರದೇಶ ರಾಜ್ಯ ಸರ್ಕಾರವು ಎಲ್ಲ ಆಸ್ತಿಗಳನ್ನು ಜಫ್ತಿ ಮಾಡಲು ಎಸ್‌ಐಟಿ ಗೆ ನಿರ್ದೇಶನ ನೀಡಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us