/newsfirstlive-kannada/media/media_files/2025/10/01/mysore-jambu-savari-02-2025-10-01-17-56-12.jpg)
ಮೈಸೂರಿನ ಅಂಬಾರಿಯಲ್ಲಿರುವ ಚಿನ್ನ ಎಷ್ಟು ಕೆಜಿ ಗೊತ್ತಾ?
ಮೈಸೂರಿನ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯೇ ಪ್ರಮುಖ ಆಕರ್ಷಣೆ. ಚಿನ್ನದ ಅಂಬಾರಿಯ ತೂಕ ಬರೋಬ್ಬರಿ 750 ಕೆಜಿ ಎಂದು ಹೇಳುವುದನ್ನು ಕೇಳಿದ್ದೇವೆ. ಆದರೇ, ವಾಸ್ತವವಾಗಿ ಎಲ್ಲ 750 ಕೆಜಿಯೂ ಸಂಪೂರ್ಣ ಚಿನ್ನದಿಂದ ಕೂಡಿಲ್ಲ ಎಂದು ಬಹಳ ಮಂದಿಗೆ ತಿಳಿದಿಲ್ಲ. ಅಂಬಾರಿಯಲ್ಲಿ 80 ಕೆಜಿ ಮಾತ್ರ ಚಿನ್ನವನ್ನು ಬಳಕೆ ಮಾಡಲಾಗಿದೆ. ಇನ್ನೂಳಿದಿದ್ದು ಮರಗಳನ್ನು ಬಳಕೆ ಮಾಡಿ ಅಂಬಾರಿಯನ್ನು ನಿರ್ಮಿಸಲಾಗಿದೆ.
ಅಂಬಾರಿಯ ಕೆಳಭಾಗದ ಅಧೀಷ್ಠಾನ ಮತ್ತು ಅಂಬಾರಿಯ ಒಳಭಾಗದಲ್ಲಿ ಮರಗಳನ್ನು ಬಳಸಿ ಅಂಬಾರಿ ನಿರ್ಮಿಸಲಾಗಿದೆ.
ಅಂಬಾರಿಯ ಬಗ್ಗೆ ಲಿಖಿತವಾದ ಇತಿಹಾಸ ಸಿಗಲ್ಲ. ಆದರೇ ಇದು ದೇವಗಿರಿಯಿಂದ ಬಂದಿದೆ ಎಂದು ಕೆಲವರು ಹೇಳಿದರೇ, ಇನ್ನೂ ಕೆಲವರು ವಿಜಯ ನಗರ ಅರಸರಿಂದ ಮೈಸೂರು ಅರಮನೆಗೆ ಬಂದಿದೆ ಎಂದು ಇನ್ನೂ ಕೆಲವರು ಹೇಳುತ್ತಾರೆ. ಆದರೇ, ಮೈಸೂರು ಅರಮನೆಯಲ್ಲಿ ಚಿನ್ನದ ಅಂಬಾರಿಗೆ 10ನೇ ಚಾಮರಾಜ ಒಡೆಯರ್ ಕಾಲದಿಂದ ಇದ್ದಿದ್ದಕ್ಕೆ ಇತಿಹಾಸದಲ್ಲಿ ದಾಖಲೆಗಳು ಸಿಗುತ್ತಾವೆ.
1881- 1894 ರ ಅವಧಿಯಲ್ಲಿ ಮೈಸೂರು ಸಂಸ್ಥಾನದಲ್ಲಿ 10ನೇ ಚಾಮರಾಜ ಒಡೆಯರ್ ಅಳ್ವಿಕೆ ನಡೆಸಿದ್ದರು. ಈ ಅವಧಿಯಲ್ಲಿ ಮೈಸೂರು ಅರಮನೆಯಲ್ಲಿ ಚಿನ್ನದ ಅಂಬಾರಿ ಇರೋದಕ್ಕೆ ದಾಖಲೆಗಳು ಸಿಕ್ಕಿವೆ. ಸಿಂಗಣ್ಣಾಚಾರ್ ಅವರಿಂದ 10ನೇ ಚಾಮರಾಜ ಒಡೆಯರ್ ಅಂಬಾರಿಯನ್ನು ನಿರ್ಮಿಸಿದ್ದಾರೆ. ಸಿಂಗಣ್ಣಾಚಾರ್ ಅವರು ಸ್ವರ್ಣ ಶಿಲ್ಪ ಕಲಾ ನಿಪುಣ ಎಂದೇ ಖ್ಯಾತರಾದವರು. ಸಿಂಗಣ್ಣಾಚಾರ್ ಅವರು ಮಹಾರಾಜರ ಆದೇಶದಂತೆ ಅಂಬಾರಿ ನಿರ್ಮಿಸಿದ್ದಾರೆ.
ಬಳಿಕ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಚಿನ್ನದ ಅಂಬಾರಿಯನ್ನು ಬಳಸಲಾಗುತ್ತಿತ್ತು.
ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಅವರ ಸೋದರ ಕಂಠೀರವ ನರಸರಾಜ ಒಡೆಯರ್ ಈ ಅಂಬಾರಿ ಮೇಲೆ ಕುಳಿತುಕೊಳ್ಳುತ್ತಿದ್ದರು. ಬಳಿಕ ಕಂಠೀರವ ನರಸರಾಜ ಒಡೆಯರ್ ಅವರ ಮಗ ಜಯಚಾಮರಾಜ ಒಡೆಯರ್ ಕೊನೆಯ ದೊರೆಯಾಗಿ ಈ ಅಂಬಾರಿಯ ಮೇಲೆ ಕುಳಿತುಕೊಳ್ಳುತ್ತಿದ್ದರು.
ಈ ಅಂಬಾರಿಯನ್ನು ಹಿಂದೂ ಹೊಯ್ಸಳ ಶೈಲಿಯಲ್ಲಿ ನಿರ್ಮಿಸಲಾಗಿದೆ. ಅಂಬಾರಿಯೂ ಷಡ್ ವರ್ಗಗಳಿಂದ ಕೂಡಿದೆ. ಅಂದರೇ, ಅಂಬಾರಿಯಲ್ಲಿ 6 ಭಾಗಗಳಿವೆ. ಅಂಬಾರಿಯ ಕೆಳಭಾಗದಲ್ಲಿ ಸಿಂಹಪಾದ, ಅಧೀಷ್ಠಾನ ನಿರ್ಮಿಸಲಾಗಿದೆ. ಇನ್ನೂ ಸ್ತಂಭ ಭಾಗದಲ್ಲಿ 16 ಸ್ತಂಭಗಳಿವೆ.
ಅಂಬಾರಿಯ ಮೇಲ್ಬಾಗದಲ್ಲಿ ಪಂಚ ಕಲಶಗಳಿವೆ. ಅಂಬಾರಿಯ ಒಳಗಡೆ ಮೂರು ಜನರು ಕುಳಿತುಕೊಳ್ಳುವಷ್ಟು ಸ್ಥಳಾವಕಾಶ ಇದೆ.
ಅನೆಯ ದಂತಗಳಿಗೆ ಮಾಡಿದ ಸುಮನಗಿರಿಗಳೂ ಎರಡೂ ಕಡೆ ಇವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.