/newsfirstlive-kannada/media/media_files/2025/09/13/udupi-murder-2025-09-13-16-13-28.jpg)
ಹತ್ಯೆಯಾದ ರಕ್ಷಿತಾ, ಆತ್ಮಹತ್ಯೆ ಮಾಡಿಕೊಂಡ ಕಾರ್ತಿಕ್
ಅವರಿಬ್ಬರು ಅಕ್ಕ-ಪಕ್ಕದ ಮನೆಯವರು. ದಿನವೂ ನೋಡುವ ಮುಖ, ಹದಿಹರೆಯಾದ ಪ್ರೀತಿ, ಆಕರ್ಷಣೆ. ಆದರೆ ಹುಡುಗಿ ಮನೆಯಲ್ಲಿ ಮದುವೆಗೆ ಒಪ್ಪಿಗೆ ಇರಲಿಲ್ಲ.. ಇದರಿಂದ ಕೋಪಗೊಂಡ ಪಾಗಲ್ ಪ್ರೇಮಿ.. ಏನ್ ಮಾಡಿದ್ದಾನೆ ಗೊತ್ತಾ..
ಮನೆಯಲ್ಲಿ ಮದುವೆಗೆ ಆಕ್ಷೇಪ.. ನಂಬರ್ ಬ್ಲಾಕ್ ಮಾಡಿದ್ದ ಯುವತಿ
ಹುಟ್ಟುಹಬ್ಬದ ದಿನವೇ ಪ್ರೀತಿಸಿದವಳ ಕತ್ತು ಸೀಳಿದ ಕೊಂದ ಪ್ರೇಮಿ
ಪಾಗಲ್ ಪ್ರೇಮಿಯೊಬ್ಬನ ಹುಚ್ಚಾಟಕ್ಕೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.. ಪ್ರೀತಿಗೆ ಹುಡುಗಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದಕ್ಕೆ, ಯುವಕನೊಬ್ಬ ಪ್ರಿಯತಮೆಯನ್ನೂ ಭೀಕರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ
ಕೊಲೆ ಆರೋಪಿ ಕಾರ್ತಿಕ್
ಈ ಪೋಟೋದಲ್ಲಿರುವ ಯುವಕನೇ ಕಾರ್ತಿಕ್.. ಈತ ತಮ್ಮ ಸಂಬಂಧಿಕಳಾದ ರಕ್ಷಿತಾ ಎಂಬ ಯುವತಿಯನ್ನ ಪ್ರೀತಿಸುತ್ತಿದ್ದ.. ಅಕ್ಕ-ಪಕ್ಕದ ಮನೆಯವರಾದ ಇವ್ರು ಬಾಲ್ಯದಿಂದಲೂ ಜೊತೆಗೆ ಆಡಿಕೊಂಡು ಬೆಳೆದಿದ್ರು. ಹದಿಹರಯದ ವಯಸ್ಸು ಇಬ್ಬರ ನಡುವೆ ಮಧ್ಯೆ ಪ್ರೀತಿ ಮೂಡಿಸಿತ್ತು.
ಕಳೆದ ಐದು ವರ್ಷಗಳಿಂದ ಕಾರ್ತಿಕ್ ಮತ್ತು ರಕ್ಷಿತಾ ಪರಸ್ಪರ ಪ್ರೀತಿಸುತ್ತಿದ್ದರಂತೆ. ರಕ್ಷಿತಾ ತಾಲೂಕು ಪಂಚಾಯ್ತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿದ್ರೆ.. ಕಾರ್ತಿಕ್ಗೆ ಸರಿಯಾದ ಉದ್ಯೋಗ ಇರಲಿಲ್ಲ.. ಹೀಗಾಗಿ ಇಬ್ಬರೂ ಸಂಬಂಧಿಕರೇ ಆಗಿದ್ರೂ ರಕ್ಷಿತಾ ಮನೆಯವರು ಮದುವೆಗೆ ಒಪ್ಪಿರಲಿಲ್ಲ. ಕಳೆದ 15 ದಿನದ ಹಿಂದೆ ಮಾತುಕತೆ ನಡೆದು, ಕಾರ್ತಿಕ್ಗೆ ಬುದ್ಧಿವಾದ ಹೇಳಿದ್ರು. ಮಗಳ ಸುದ್ದಿಗೆ ಬಾರದಂತೆ ಆತನಿಂದ ಪ್ರಮಾಣ ಕೂಡ ಮಾಡಿಸಿದ್ರಂತೆ. ಇನ್ನು ಕಾರ್ತಿಕ್ ಕೂಡ.. ಇನ್ಮೇಲೆ ಯಾವುದೇ ಕಾರಣಕ್ಕೂ ಆಕೆಯ ಬದುಕಿನಲ್ಲಿ ನಾನು ಬರಲ್ಲ. ಆಹ್ವಾನಿಸಿದ್ರೆ ಮದುವೆಗೆ ಬಂದು ಊಟ ಮಾಡಿ ಹೋಗ್ತೀನಿ ಎಂದು ಮಾತು ಕೊಟ್ಟಿದ್ದನಂತೆ.. ಯುವತಿ ಕೂಡ ಮನೆಯವರ ಆಗ್ರಹದಂತೆ ಕಾರ್ತಿಕ್ನನ್ನು ಬ್ಲಾಕ್ ಮಾಡಿದ್ದಳು.
ರಕ್ಷಿತಾಳ ಸಹವಾಸಕ್ಕೆ ನಾನು ಬರಲ್ಲ ಎಂದು ಮಾತುಕೊಟ್ಟಿದ್ದ ಕಾರ್ತಿಕ್ಗೆ ಅದೇನ್ ಆಯ್ತೋ ಏನೋ.ನಿನ್ನೆ ಬೆಳಗ್ಗೆ ಮಾಡಬಾರದ ಕೆಲ್ಸ ಮಾಡಿದ್ದಾನೆ. ಎಂದಿನಂತೆ ಕೆಲಸಕ್ಕೆ ಹೊರಟ ರಕ್ಷಿತಾಳನ್ನು ಬಸ್ನಿಲ್ದಾಣದವರೆಗೂ ಹಿಂಬಾಲಿಸಿಕೊಂಡು ಬಂದ ಕಾರ್ತಿಕ್, ಆಕೆಯ ಕೊಲೆಗೆ ಯತ್ನಿಸಿದ್ದಾನೆ. ಇವತ್ತು ಅವಳ ಬರ್ತ್ಡೇ.. ಇದು ಗೊತ್ತಿದ್ರೂ.. ಕಾರ್ತಿಕ್ ಅಮಾನುಷವಾಗಿ ಚಾಕುವಿನಿಂದ ರಕ್ಷಿತಾಳ ಕುತ್ತಿಗೆ, ಎದೆ ಮತ್ತು ಹೊಟ್ಟೆ ಭಾಗಕ್ಕೆ ಇರಿದು, ಬಳಿಕ ಸ್ನೇಹಿತನ ಬೈಕ್ನಲ್ಲಿ ಎಸ್ಕೇಪ್ ಆಗಿದ್ದಾನೆ.
ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಸಂಜೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಮೃತಪಟ್ಟಿದ್ದಾಳೆ.
ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗಿಯನ್ನು ಇಷ್ಟೊಂದು ಅಮಾನುಷವಾಗಿ ಹಲ್ಲೆ ಮಾಡಿದ್ದು.. ಅದೆಂತ ಪ್ರೇಮವೋ ಗೊತ್ತಿಲ್ಲ. ಹಿರಿಯರ ಮಾತು ಕೇಳಿ, ಪ್ರೀತಿಸಿದ ಹುಡುಗನಿಂದ ದೂರವಾಗಿದ್ದ ರಕ್ಷಿತಾ.. ಆತನ ಕೈಯಿಂದಲೇ.. ಅದು ಹುಟ್ಟಿದ ದಿನವೇ ದುರಂತ ಅಂತ್ಯಕಂಡಿದ್ದಾಳೆ.
ಇನ್ನೂ ಸಂಜೆ ವೇಳೆ ಆರೋಪಿ ಕಾರ್ತಿಕ್ ಕೂಡ ಮನೆಯ ಬಳಿಯ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ದೇಹಕ್ಕೆ ಹಗ್ಗ, ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಜೆ ವೇಳೆಗೆ ಕಾರ್ತಿಕ್ ಶವವನ್ನು ಬಾವಿಯಿಂದ ಹೊರತೆಗೆಯಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.