/newsfirstlive-kannada/media/media_files/2025/08/01/prajwal-revanna-crying-2025-08-01-14-05-21.jpg)
ಪ್ರಜ್ವಲ್ ರೇವಣ್ಣ
ರೇಪ್ ಕೇಸ್ ನಲ್ಲಿ ಅಪರಾಧಿ ಆಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ಹಾಸನದ ಮಾಜಿ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ, ಕೊನೆಗೂ ಜೈಲಿನಲ್ಲಿ ಏನು ಕೆಲಸ ಮಾಡುತ್ತೇನೆ ಎಂದು ಆಯ್ಕೆ ಮಾಡಿಕೊಂಡಿದ್ದಾರೆ. ಜೈಲಿನಲ್ಲಿ ಆರೋಪ ಸಾಬೀತಾದ ಅಪರಾಧಿಗಳು ಯಾವುದಾದರೊಂದು ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕು. ಜೈಲಿನಲ್ಲಿ ಈ ಕೂಲಿ ಕೆಲಸ ಮಾಡಿದ್ದಕ್ಕೆ ಕೂಲಿ ಹಣವನ್ನು ನೀಡಲಾಗುತ್ತೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಜೈಲಿನಲ್ಲಿ ಈಗ ತಾನು ಕೃಷಿ ಕೆಲಸ ಮಾಡುತ್ತೇನೆ. ಜೊತೆಗೆ ಅಡ್ಮಿನಿಸ್ಟ್ರೇಟೀವ್ ಕೆಲಸಗಳನ್ನು ಮಾಡುತ್ತೇನೆ ಎಂದು ಜೈಲು ಅಧಿಕಾರಿಗಳಿಗೆ ಹೇಳಿದ್ದಾರೆ. ಹೀಗಾಗಿ ಈಗ ಪ್ರಜ್ವಲ್ , ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೃಷಿ ಕೂಲಿ ಕೆಲಸಗಾರ. ಜೊತೆಗೆ ಅಡ್ಮಿನಿಸ್ಟ್ರೇಟಿವ್ ಕೆಲಸಗಳ ಕೂಲಿ ಕೆಲಸಗಾರ.
ಪ್ರಜ್ವಲ್ ಗೆ ಜೈಲಿನಲ್ಲಿ ಮಾಡಿದ ಕೆಲಸಕ್ಕೆ ದಿನಕ್ಕೆ 540 ರೂಪಾಯಿ ಕೂಲಿ ಸಿಗಲಿದೆ. ಒಂದು ವರ್ಷ ಆದ ನಂತರ ದಿನಕ್ಕೆ 615 ರೂಪಾಯಿ ಕೂಲಿ ನಿಗದಿಯಾಗಲಿದೆ.
ಜೈಲಿನ ಹೊರಗೆ ಹತ್ತಾರು ಜನಕ್ಕೆ ತನ್ನ ತೋಟದಲ್ಲೇ ಪ್ರಜ್ವಲ್ ರೇವಣ್ಣ ಕೆಲಸ ಕೊಟ್ಟಿದ್ದ. ಇಡೀ ಲೋಕಸಭಾ ಕ್ಷೇತ್ರಕ್ಕೆ ಎಂಪಿಯಾಗಿದ್ದ. ಪ್ರಜ್ವಲ್ ಗೆ ಜೈಲು ಹೊರಗೆ ಎಲ್ಲದ್ದಕ್ಕೂ ಅಳುಗಳು ಇದ್ದರು. ಆದರೇ, ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣನೇ ಕೂಲಿ ಕೆಲಸ ಮಾಡಿ, ನಿತ್ಯದ ಕೂಲಿಯಾಗಿ 540 ರೂಪಾಯಿ ಹಣವನ್ನು ಪಡೆಯಬೇಕಾದ ಸ್ಥಿತಿ ಬಂದಿದೆ.
ಜೈಲು ಕಾಯ್ದೆ ಪ್ರಕಾರ ಜೈಲು ಅಧಿಕಾರಿಗಳು ನೀಡುವ ಕೆಲಸವನ್ನು ಸಜಾ ಬಂಧಿಗಳು ಮಾಡಬೇಕು ಅಥವಾ ವ್ಯಾಸಂಗಕ್ಕೆ ಅನುಗುಣವಾಗಿ ಕೆಲಸ ಮಾಡ್ತೀನಿ ಅಂತ ಜೈಲು ಅಧಿಕಾರಿಗಳಿಗೆ ತಿಳಿಸಬೇಕು. ಈಗ ಪ್ರಜ್ವಲ್ ರೇವಣ್ಣ ತಾನು ಕೃಷಿ ಕೆಲಸ ಹಾಗೂ ಅಡ್ಮಿನಿಸ್ಟ್ರೇಟಿವ್ ಕೆಲಸ ಮಾಡುವುದಾಗಿ ಜೈಲು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.