/newsfirstlive-kannada/media/media_files/2025/08/29/poland-f-16-crash-2025-08-29-12-28-57.jpg)
ಪೋಲೆಂಡ್ ನಲ್ಲಿ ಫೈಟರ್ ಜೆಟ್ ಪತನದಿಂದ ಪೈಲಟ್ ಸಾವು
ಈ ವರ್ಷದ ಆರಂಭದಲ್ಲಿ ಅಮೆರಿಕಾದ ಅಲಾಸ್ಕಾ ರನ್ ವೇನಲ್ಲಿ ಎಫ್-35 ಫೈಟಲ್ ಜೆಟ್ ವಿಮಾನ ಪತನವಾದ ವಿಡಿಯೋ ನಿನ್ನೆ ಬಿಡುಗಡೆಯಾಗಿತ್ತು. ಆದರೇ, ಈಗ ನಿನ್ನೆಯೇ ಮತ್ತೊಂದು ಎಫ್-16 ಯುದ್ಧ ವಿಮಾನ ಪತನವಾಗಿದೆ. ಪೋಲೆಂಡ್ ದೇಶದಲ್ಲಿ ನಡೆಯುತ್ತಿದ್ ಏರ್ ಷೋ ವೇಳೆ ಎಫ್-16 ಯುದ್ಧ ವಿಮಾನ ಪತನವಾಗಿದೆ. ಇದು ಪೊಲೀಷ್ ಏರ್ ಪೋರ್ಸ್ ಗೆ ಸೇರಿದ ಯುದ್ದ ವಿಮಾನ. ಏರ್ ಷೋಗೆ ರಿಹರ್ಸಲ್ ನಡೆಸುತ್ತಿದ್ದ ವೇಳೆಯಲ್ಲಿ ಈ ಫೈಟರ್ ಜೆಟ್ ಪತನವಾಗಿದೆ. ಫೈಟರ್ ಜೆಟ್ ನಲ್ಲಿದ್ದ ಪೈಲಟ್ ಗೆ ಪ್ಯಾರಾಚೂಟ್ ಸಹಾಯದಿಂದ ಹೊರಗೆ ಜಂಪ್ ಮಾಡಲು ಸಾಧ್ಯವಾಗಿಲ್ಲ. ಪೈಲಟ್ ವಿಮಾನ ಪತನದ ವೇಳೆ ಸಾವನ್ನಪ್ಪಿದ್ದಾರೆ.
ಪೋಲೆಂಡ್ ಸ್ಥಳೀಯ ಕಾಲಮಾನ ನಿನ್ನೆ ಸಂಜೆ 7.30ರ ಸುಮಾರಿಗೆ ಈ ದುರಂತ ನಡೆದಿದೆ. ಫೈಟರ್ ಜೆಟ್ ಪತನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪೋಲೆಂಡ್ ಏರ್ ಪೋರ್ಸ್ ಅಧಿಕಾರಿಗಳ ಈ ವಿಮಾನ ಪತನದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಫೈಟರ್ ಜೆಟ್ ನಲ್ಲಿದ್ದ ಪೈಲಟ್ ಮೇಜರ್ ಮಸೀಜ್ ಸ್ಲಾಬ್ ಕ್ರಕೋವಿಯನ್ ಎಂದು ಹೇಳಿದ್ದಾರೆ. ಈ ಪೈಲಟ್, ಪೋಲೆಂಡ್ ದೇಶದ ಏರ್ ಪೋರ್ಸ್ ನ ಡಿಸಪ್ಲೇ ಟೀಮ್ ಲೀಡರ್ ಆಗಿದ್ದರು. ಈ ತಿಂಗಳ ಆರಂಭದಲ್ಲಿ ಮಸೀದ್ ಸ್ಲಾಬ್ ಕ್ರಕೋವಿಯನ್ ಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಎಫ್-16 ಯುದ್ಧ ವಿಮಾನವನ್ನು ಪೈಲಟ್ ಮಸೀದ್ ಸ್ಲಾಬ್ ಕ್ರಕೋವಿಯನ್ ಒಂದು ಸಾವಿರ ಗಂಟೆ ಹಾರಾಟ ನಡೆಸಿದ್ದ ಅನುಭವ ಹೊಂದಿದ್ದರು. ಈ ಫೈಟರ್ ಜೆಟ್ ಪತನದ ವಿಡಿಯೋ ಲಿಂಕ್ ಅನ್ನು ಇಲ್ಲಿ ನೀಡಿದ್ದೇವೆ. ಒಮ್ಮೆ ನೋಡಬಹುದು.
Additional footage of the Polish Air Force F-16 demonstrator crash this evening in Radom. pic.twitter.com/VORLlCrHiR
— OSINTtechnical (@Osinttechnical) August 28, 2025
ಎಫ್-16 ಫೈಟರ್ ಜೆಟ್ ಪತನದಿಂದ ಪೋಲೆಂಡ್‌ನ ಏರ್ ಷೋ ನಡೆಯಬೇಕಾಗಿದ್ದ ರನ್ ವೇ ಸಂಪೂರ್ಣ ಹಾಳಾಗಿದೆ. ಹೀಗಾಗಿ ಉದ್ದೇಶಿದ ಏರ್ ಷೋವನ್ನು ಪೋಲೆಂಡ್ ಏರ್ ಪೋರ್ಸ್ ಹಾಗೂ ಸರ್ಕಾರ ರದ್ದುಪಡಿಸಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ