/newsfirstlive-kannada/media/media_files/2025/08/28/usa-f-35-crash-in-alaska-2025-08-28-18-34-57.jpg)
ಅಮೆರಿಕಾದ ಎಫ್-35 ಯುದ್ಧ ವಿಮಾನ
ಅಮೆರಿಕಾದ ಏರ್ ಪೋರ್ಸ್ ಎಫ್-35 ಯುದ್ಧ ವಿಮಾನದ ಪೈಲಟ್ ಸರಿಸುಮಾರು 50 ನಿಮಿಷಗಳ ಕಾಲ ಅಗಸದಲ್ಲಿ ವಿಮಾನ ಹಾರಾಟ ನಡೆಸುತ್ತಾ, ಕಾನ್ಪರೆನ್ಸ್ ಕಾಲ್ ಮೂಲಕ ವಿಮಾನ ತಯಾರಿಸುವ ಇಂಜಿನಿಯರ್ ಗಳ ಜೊತೆ ಮಾತನಾಡುತ್ತಾ ಫೈಟರ್ ಜೆಟ್‌ನ ತಾಂತ್ರಿಕ ಸಮಸ್ಯೆ ಸರಿಪಡಿಸಲು ಯತ್ನಿಸಿದ್ದಾರೆ. ಆದರೇ, ಕೊನೆಗೆ ಸಾಧ್ಯವಾಗದೇ, ಪ್ಯಾರಾಚೂಟ್ ಮೂಲಕ ಫೈಟರ್ ಜೆಟ್ ನಿಂದ ಹೊರಗೆ ಜಿಗಿದಿದ್ದಾರೆ. ಎಫ್-35 ಫೈಟರ್ ಜೆಟ್ ಅಮೆರಿಕಾದ ಅಲಸ್ಕಾದ ರನ್ ವೇನಲ್ಲಿ ಪತನವಾಗಿದೆ.
ಇದು ಈ ವರ್ಷದ ಪ್ರಾರಂಭದಲ್ಲಿ ನಡೆದಿರುವ ದುರಂತದ ಘಟನೆ. ಈಗ ಇದರ ವಿಡಿಯೋ ಬಿಡುಗಡೆಯಾಗಿದೆ. ಫೈಟರ್ ಜೆಟ್ ವಿಮಾನ ರನ್ ವೇನಲ್ಲೇ ಪತನವಾಗಿ ಕೆಳಗೆ ಬೀಳುತ್ತಿದ್ದಂತೆ, ಬೆಂಕಿ ಹೊತ್ತಿಕೊಂಡಿದೆ. ಆದರೇ, ಫೈಟರ್ ಜೆಟ್ ನಲ್ಲಿದ್ದ ಪೈಲಟ್, ಪ್ಯಾರಾಚೂಟ್ ಮೂಲಕ ಹೊರಗೆ ಜಿಗಿದಿದ್ದು, ದೂರದಲ್ಲಿ ಪ್ಯಾರಾಚೂಟ್ ನಲ್ಲಿ ಹಾರಾಟ ನಡೆಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಫೈಟರ್ ಜೆಟ್ ನ ಹೈಡ್ರಾಲಿಕ್ ವ್ಯವಸ್ಥೆ ಮತ್ತು ಲ್ಯಾಂಡಿಂಗ್ ಗೇರ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣದಿಂದ ಫೈಟರ್ ಜೆಟ್ ಪತನವಾಗಿದೆ. ಫೈಟರ್ ಜೆಟ್ ಅಲಸ್ಕಾದಲ್ಲಿ ಟೇಕಾಫ್ ಆದ ಬಳಿಕ ಪೈಲಟ್ , ಲ್ಯಾಂಡಿಂಗ್ ಗೇರ್ ಅನ್ನು ಒಳಕ್ಕೆ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಆದರೇ, ಸಾಧ್ಯವಾಗಿಲ್ಲ. ಬಳಿಕ ಗೇರ್ ಲಾಕ್ ಆಗಿದೆ. ಪೈಲಟ್ ಈ ಸಮಸ್ಯೆಯನ್ನು ಸರಿಪಡಿಸಲು ಯತ್ನಿಸಿದ್ದಾರೆ. ತಕ್ಷಣವೇ ಯುದ್ಧ ವಿಮಾನದ ಪೈಲಟ್, ಈ ಎಫ್-35 ಯುದ್ಧ ವಿಮಾನ ತಯಾರಿಸುವ ಲಾಕಹೀಡ್ ಮಾರ್ಟೀನ್ ಕಂಪನಿಯ ಇಂಜಿನಿಯರ್ ಗಳ ಜೊತೆ ಅಗಸದಲ್ಲಿ ಯುದ್ಧ ವಿಮಾನ ಹಾರಾಟ ನಡೆಸುತ್ತಲೇ ಪೋನ್ ನ ಕಾನ್ಪರೆನ್ಸ್ ಕಾಲ್ ನಲ್ಲಿ ಮಾತನಾಡಿದ್ದಾರೆ. ಸರಿಸುಮಾರು ಒಂದು ಗಂಟೆಯಷ್ಟು ಕಾಲ ವಿಮಾನ ತಯಾರಿಸುವ ನುರಿತ ಇಂಜಿನಿಯರ್ ಗಳ ಜೊತೆ ಮಾತನಾಡಿದ್ದಾರೆ. ಆದರೇ, ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ.
ಪೈಲಟ್ ಎರಡು ಭಾರಿ ರನ್ ವೇನಲ್ಲಿ ಫೈಟರ್ ಜೆಟ್ ಅನ್ನು ಲ್ಯಾಂಡಿಂಗ್ ಮಾಡುವ ಯತ್ನ ಮಾಡಿದ್ದಾರೆ. ಆದರೇ, ಎರಡು ಭಾರಿಯೂ ವಿಫಲವಾಗಿದ್ದಾರೆ. ಲ್ಯಾಂಡಿಂಗ್ ಗೇರ್ ಸರಿಯಾಗಿ ಕಾರ್ಯನಿರ್ವಹಿಸದೇ ಲ್ಯಾಂಡಿಂಗ್ ಸಾಧ್ಯವಾಗಿಲ್ಲ. ಜೆಟ್ ಸೆನ್ಸಾರ್ ಗಳು ಲ್ಯಾಂಡಿಂಗ್ ಗೇರ್ ಸರಿಯಾಗಿ ಕಾರ್ಯನಿರ್ವಹಿಸದೇ ಇರೋದನ್ನು ಸೂಚಿಸಿವೆ. ಇದರಿಂದಾಗಿ ಪೈಲಟ್ ಗೆ ವಿಮಾನನ್ನು ಕಂಟ್ರೋಲ್ ಮಾಡಲು ಸಾಧ್ಯವಿಲ್ಲ ಎಂಬುದು ಅರಿವಾಗಿದೆ. ಕೊನೆಗೆ ಬೇರೆ ದಾರಿ ಇಲ್ಲದೇ , ಫೈಟರ್ ಜೆಟ್ ನಿಂದ ಪೈಲಟ್ ಪ್ಯಾರಚೂಟ್ ಮೂಲಕ ಹೊರಗೆ ಜಂಪ್ ಮಾಡಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಈ ರೋಚಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಬಿಡುಗಡೆಯಾಗಿದೆ. ಫೈಟರ್ ಜೆಟ್ ಪತನದ ಟ್ವೀಟರ್ ವಿಡಿಯೋ ಲಿಂಕ್ ಅನ್ನು ಇಲ್ಲಿ ನೀಡಿದ್ದೇವೆ. ವಿಡಿಯೋದಲ್ಲಿ ಫೈಟರ್ ಜೆಟ್ ಪತನದ ಕ್ಷಣ ಹಾಗೂ ಅಗಸದಲ್ಲಿ ಪೈಲಟ್ ಪ್ಯಾರಾಚೂಟ್ ನಲ್ಲಿ ಹಾರಾಟ ನಡೆಸುತ್ತಿರುವುದನ್ನು ತಾವು ನೋಡಬಹುದು.
Interesting: On Jan 28, 2025, a USAF F-35A crashed at Eielson AFB, Alaska after its nose landing gear froze at a 17° angle due to water-contaminated hydraulic fluid in subzero temps.
— Clash Report (@clashreport) August 27, 2025
Pilot spent 50 mins on a call with 5 Lockheed engineers trying fixes.
Two attempted… pic.twitter.com/0KRhe3u5Ln
ಹೈಡ್ರಾಲಿಕ್ ಸಿಸ್ಟಮ್ ನ ಬಲಭಾಗದ ಲ್ಯಾಂಡಿಂಗ್ ಗೇರ್ ಬಳಿ ನೀರು ಇತ್ತು. ಅಮೆರಿಕಾದ ಅಲಸ್ಕಾದಲ್ಲಿ ವಿಮಾನ ಪತನವಾದಾಗ ಮೈನಸ್ 18 ಡಿಗ್ರಿ ಉಷ್ಣಾಂಶ ಇತ್ತು. ಕೊರೆಯು ಚಳಿ, ಹಿಮಪಾತದ ವೇಳೆ ಲ್ಯಾಂಡಿಂಗ್ ಗೇರ್ ಬಳಿ ನೀರು ಇದ್ದಿದ್ದೇ, ಈ ಯುದ್ಧ ವಿಮಾನದ ಪತನಕ್ಕೆ ಕಾರಣ ಎಂಬ ಅಂಶ ತನಿಖೆಯಿಂದ ತಿಳಿದು ಬಂದಿದೆ.
ಇನ್ನೂ ಈ ಲಾಕ್‌ಹೀಡ್ ಮಾರ್ಟಿನ್ ಕಂಪನಿ ಎಫ್-35 ಯುದ್ಧ ವಿಮಾನವೊಂದರ ಬೆಲೆ 2021 ರಲ್ಲಿ ಬರೋಬ್ಬರಿ 135 ಮಿಲಿಯನ್ ಡಾಲರ್ ಆಗಿತ್ತು. 2024ರ ವೇಳೆಗೆ 81 ಮಿಲಿಯನ್ ಡಾಲರ್ ಗೆ ಕುಸಿದಿದೆ ಎಂದು ಅಮೆರಿಕಾದ ಡಿಫೆನ್ಸ್ ಇಲಾಖೆ ಹೇಳಿದೆ.
ಪತನವಾದ ಎಫ್-35 ಯುದ್ಧ ವಿಮಾನದ ಬೆಲೆ ಬರೋಬ್ಬರಿ 196 ಮಿಲಿಯನ್ ಡಾಲರ್ ಎಂದು ತಿಳಿದು ಬಂದಿದೆ. ವಿಮಾನ ಪತನವಾಗುತ್ತಿದ್ದಂತೆ, ಹೊತ್ತಿ ಉರಿದಿದ್ದರಿಂದ 196 ಮಿಲಿಯನ್ ಡಾಲರ್ ಹಣವೂ ಹೊತ್ತಿ ಉರಿದಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.