ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ನಕಲಿ ವೈದ್ಯ ವಿದ್ಯಾರ್ಥಿನಿಯಿಂದ ರೋಗಿಗಳಿಗೆ ಚಿಕಿತ್ಸೆ! ತನಿಖೆಗೆ ಆದೇಶ

ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಕಳೆದ 3 ತಿಂಗಳಿನಿಂದ ನಕಲಿ ವೈದ್ಯ ವಿದ್ಯಾರ್ಥಿನಿಯೊಬ್ಬಳು ರೋಗಿಗಳಿಗೆ ಚಿಕಿತ್ಸೆ ನೀಡಿರುವುದು ಬೆಳಕಿಗೆ ಬಂದಿದೆ. ಈಗ ಸನಾ ಶೇಖ್ ಎಂಬಾಕೆಯನ್ನು ಹಿಡಿದು ವಿಚಾರಣೆ ನಡೆಸಲಾಗಿದೆ. ಈ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.

author-image
Chandramohan
BIMS INVESTIGATION FAKE DOCTOR

ಬೆಳಗಾವಿ ಬೀಮ್ಸ್ ನಲ್ಲಿ ನಕಲಿ ವೈದ್ಯ ವಿದ್ಯಾರ್ಥಿನಿಯಿಂದ ಟ್ರೀಟ್ ಮೆಂಟ್ !

Advertisment
  • ಬೆಳಗಾವಿ ಬೀಮ್ಸ್ ನಲ್ಲಿ ನಕಲಿ ವೈದ್ಯ ವಿದ್ಯಾರ್ಥಿನಿಯಿಂದ ಟ್ರೀಟ್ ಮೆಂಟ್ !
  • ವೈದ್ಯರು ವಿಚಾರಿಸಿದಾಗ, ಈಕೆಯ ಪೂರ್ವಾಪರ ಪತ್ತೆ
  • ಬೀಮ್ಸ್ ನಿರ್ದೇಶಕರಿಂದ ಅಂತರಿಕ ತನಿಖೆಗೆ ಆದೇಶ

ಬೀಮ್ಸ್  ಆಡಳಿತ ಮಂಡಳಿಯ ಮಹಾ ಯಡವಟ್ಟು ಬಯಲಿಗೆ!
ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ನಕಲಿ ವೈದ್ಯ ವಿದ್ಯಾರ್ಥಿನಿ ಓಡಾಟ ನಡೆಸಿ, ರೋಗಿಗಳಿಗೆ ಚಿಕಿತ್ಸೆ ನೀಡಿರುವುದು ಈಗ ಬೆಳಕಿಗೆ ಬಂದಿದೆ.  ತಾನು ಪಿಜಿ ವಿದ್ಯಾರ್ಥಿನಿ ಎಂದು ಸಿಕ್ಕ ಸಿಕ್ಕವರಿಗೆ ಬೀಮ್ಸ್ ಆಸ್ಪತ್ರೆಯಲ್ಲಿ ಟ್ರೀಟ್ ಮೆಂಟ್ ನೀಡಿದ್ದಾಳೆ. ಎರಡು ಮೂರು ತಿಂಗಳ ಕಾಲ ತಾನು ನರ್ಸಿಂಗ್ ವಿದ್ಯಾರ್ಥಿನಿ ಎಂದು ರೋಗಿಗಳಿಗೆ ಟ್ರೀಟ್ ಮೆಂಟ್ ನೀಡಿದ್ದಾಳೆ.  ಈ ನಕಲಿ ವಿದ್ಯಾರ್ಥಿನಿಯ ಹೆಸರು ಸನಾ ಶೇಖ್‌ ಅಂತ ಪತ್ತೆಯಾಗಿದೆ.   ಕಾರವಾರ ಮೂಲದ ಸನಾ ಶೇಖ್, ಸದ್ಯ ಬೆಳಗಾವಿಯ ಕುಮಾರಸ್ವಾಮಿ ಲೇಔಟ್ ನಲ್ಲಿ ವಾಸ ಇದ್ದಾಳೆ. ವೈದ್ಯಕೀಯ ವಿದ್ಯಾರ್ಥಿನಿ ವೇಷ ಧರಿಸಿ, ಬೀಮ್ಸ್ ಆಸ್ಪತ್ರೆಯಲ್ಲಿ ಈಕೆ ಓಡಾಟ ನಡೆಸಿದ್ದಾಳೆ.  ಸರ್ಜಿಕಲ್ ವಾರ್ಡ್, ಓಪಿಡಿ ಸೇರಿದಂತೆ ಆಸ್ಪತ್ರೆಯ ಎಲ್ಲ ವಿಭಾಗದಲ್ಲೂ  ಈಕೆ ಓಡಾಡಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾಳೆ.  ಬೀಮ್ಸ್ ನಲ್ಲಿ ಈಕೆ ಕಳೆದ ಮೂರು ತಿಂಗಳಿನಿಂದ ಹೀಗೆ ವೈದ್ಯಕೀಯ  ಪ್ರಾಕ್ಟೀಸ್ ಮಾಡಿದ್ದಾಳೆ. 
ಕೆಲವೊಂದು ಭಾರಿ ಆಸ್ಪತ್ರೆಯ ಸಿಬ್ಬಂದಿ ಅನುಮಾನಗೊಂಡು ಪ್ರಶ್ನಿಸಿದಾಗ, ಬೀಮ್ಸ್ ನಿರ್ದೇಶಕರ ಹೆಸರು ಹೇಳಿ ಧಮ್ಕಿ ಕೂಡ ಹಾಕಿದ್ದಾಳೆ.  ಇದೀಗ ಬೀಮ್ಸ್ ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸೆಕ್ಯೂರಿಟಿ ಗಾರ್ಡ್ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ತಕ್ಷಣವೇ ಬೀಮ್ಸ್ ಸರ್ಜನ್ , ರೆಸಿಡೆಂಟ್ ಮೆಡಿಕಲ್ ಆಫೀಸರ್ ಗಮನಕ್ಕೆ ಈಕೆಯ ವಿಷಯವನ್ನು ತರಲಾಗಿದೆ.  ಕರೆದು ಸನಾ ಶೇಖ್ ಳನ್ನು ರೆಸಿಡೆಂಟ್ ಮೆಡಿಕಲ್ ಆಫೀಸರ್ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾನು ಬೇರೊಂದು ಆಸ್ಪತ್ರೆಯಲ್ಲಿ  ಪ್ರಾಕ್ಟೀಸ್ ಮಾಡುತ್ತಿರುವುದಾಗಿ ಹೇಳಿದ್ದಾಳೆ. 

BIMS INVESTIGATION



ಇನ್ನೂ ಈ ವಿಷಯಕ್ಕೆ ಸಂಬಂಧಿಸಿದಂತೆ, ಬೀಮ್ಸ್ ಆಸ್ಪತ್ರೆಯ ನಿರ್ದೇಶಕ ಅಶೋಕ್ ಶೆಟ್ಟಿ ಅವರು ಅಂತರಿಕ ತನಿಖೆಗೆ ಆದೇಶ ನೀಡಿದ್ದಾರೆ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ  ಡಾಕ್ಟರ್ ಈರಣ್ಣ ಪಲ್ಲೇದ್ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ಸಮಿತಿ ರಚಿಸಿದ್ದು, ತನಿಖೆ ನಡೆಸಿ, ಒಂದು ವಾರದೊಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

BIMS FAKE DOCTOR TREATMENT
Advertisment