ಬಿಡದಿ ಟೌನ್ ಷಿಪ್ ಗೆ ಭೂಮಿ ನೀಡಲು ರೈತರು ರೆಡಿ, ಹೊಸ ಟೌನ್ ಷಿಪ್ ಹೇಗಿರಲಿದೆ ಗೊತ್ತಾ?

ಬೆಂಗಳೂರು ಹೊರವಲಯದ ಬಿಡದಿಯಲ್ಲಿ ಟೌನ್ ಷಿಪ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ. 2006 ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ಕೈಗೊಂಡಿದ್ದ ಬಿಡದಿ ಟೌನ್ ಷಿಪ್ ಯೋಜನೆಯನ್ನು ಈಗಿನ ಸಿದ್ದರಾಮಯ್ಯ ಸರ್ಕಾರ ಮುಂದುವರಿಸುತ್ತಿದೆ. ಇದಕ್ಕೆ ರೈತರು ಪರ-ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈಗ ರೈತರು ಭೂಸ್ವಾಧೀನ ಸ್ವಾಗತಿಸಿದ್ದಾರೆ.

author-image
Chandramohan
bidadi township ai picture

ಬಿಡದಿ ಟೌನ್ ಷಿಪ್ ವಿನ್ಯಾಸದ ಚಿತ್ರ

Advertisment
  • ಮೊನ್ನೆ ಭೂಸ್ವಾಧೀನಕ್ಕೆ ರೈತರಿಂದ ವಿರೋಧ, ಇಂದು ರೈತರಿಂದ ಸ್ವಾಗತ!
  • ಭೂಸ್ವಾಧೀನಕ್ಕೆ ರೈತರಲ್ಲೇ ಪರ-ವಿರೋಧ ಗುಂಪು ಸೃಷ್ಟಿ
  • ಬಿಡದಿ ಟೌನ್ ಷಿಪ್ ನಿರ್ಮಾಣಕ್ಕೆ 9 ಗ್ರಾಮದಲ್ಲಿ ಭೂಸ್ವಾಧೀನ

ಬಿಡದಿ ಇಂಟಿಗ್ರೇಟೆಡ್ ಟೌನ್ ಶಿಪ್ ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಮೊನ್ನೆ ರಾಮನಗರ ಜಿಲ್ಲಾಧಿಕಾರಿ ಕಚೇರಿ ಬಳಿ ಕೆಲ ರೈತರು ಭೂಸ್ವಾಧೀನಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿ,  ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮನವಿ ನೀಡಿದ್ದರು. 
ಆದರೇ, ಈಗ ರೈತರ ಒಂದು ಗುಂಪು ಬಿಡದಿ ಟೌನ್ ಷಿಪ್ ನಿರ್ಮಾಣಕ್ಕೆ ರೈತರ ಭೂಮಿ ಸ್ವಾಧೀನವನ್ನು ಸ್ವಾಗತಿಸುತ್ತಿದೆ.  ಯೋಜನೆಗೆ ಭೂಮಿ ನೀಡುವ ರೈತರಿಗೆ 1.5 ಕೋಟಿಯಿಂದ 2.5 ಕೋಟಿ ರೂಪಾಯಿ ಪರಿಹಾರ ನೀಡುವುದಕ್ಕೆ  ಸ್ವಾಗತ ಎಂದು ರೈತರು ಹೇಳಿದ್ದಾರೆ  ಪರಿಹಾರ ಬೇಡ ಎನ್ನುವವರಿಗೆ 50:50 ಅನುಪಾತದಲ್ಲಿ ನಿವೇಶನ ಎಂಬ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.  ಬಿಡದಿ ಭಾಗದ ರೈತ ಮುಖಂಡ ರಾಜಣ್ಣ ನೇತೃತ್ವದಲ್ಲಿ ಸರ್ಕಾರದ ನಿರ್ಧಾರಕ್ಕೆ ಸ್ವಾಗತ ಕೋರಿದ್ದಾರೆ. 
 ಕಳೆದ 18 ವರ್ಷಗಳಿಂದ ನಮ್ಮ ಭೂಮಿ ರೆಡ್ ಜೋನ್ ಆಗಿತ್ತು. ಇದೀಗ ಸರ್ಕಾರ ರೈತರ ಪರವಾದ ತೀರ್ಮಾನ ಮಾಡಿದೆ.  2006ರಲ್ಲಿ ಕುಮಾರಸ್ವಾಮಿಯವರು ಟೌನ್ ಶಿಪ್ ಗಾಗಿ ಭೂಸ್ವಾಧೀನ ಮಾಡಿದ್ರು.  ಬಳಿಕ ಯೋಜನೆ ಕೈಬಿಟ್ಟು ನಮ್ಮ ಭೂಮಿ ರೆಡ್ ಜೋನ್ ಗೆ ಸೇರಿತ್ತು.ಇದರಿಂದ ಯಾವುದೇ ಅಭಿವೃದ್ಧಿ ಇಲ್ಲದೇ ನಮಗೆ ಸಾಕಷ್ಟು ತೊಂದರೆ ಆಗಿದೆ.  ಬಿಜೆಪಿ ಸರ್ಕಾರ ಕೂಡಾ ರೆಡ್ ಜೋನ್ ತೆರವು ಮಾಡಿ ನಮ್ಮ ಜಮೀನು ಸಮಸ್ಯೆ ಬಗೆಹರಿಸಲಿಲ್ಲ.  ಸದ್ಯ ಈಗಿನ ಸರ್ಕಾರ ನಮಗೆ ನ್ಯಾಯಯುತವಾದ ಪರಿಹಾರ ನೀಡಲು ಒಪ್ಪಿದೆ. ಸರ್ಕಾರದ ನಿರ್ಧಾರವನ್ನ ನಾವು ಗೌರವಿಸುತ್ತೇವೆ. ಈಗ ಪ್ರತಿಭಟನೆ ಮಾಡ್ತಿರೋ ಕೆಲ ರೈತರು ಹಿಂದೆ ಯೋಜನೆಯನ್ನ ಸ್ವಾಗತಿಸಿದ್ದರು.ಈಗ ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.  ರೈತರ ಪರವಾಗಿ ನಿರ್ಧಾರ ಮಾಡಿದ್ದಾರೆ ಎಂದು ಡಿಸಿಎಂ ಡಿಕೆಶಿಗೆ ಅಭಿನಂದನೆ  ಸಲ್ಲಿಸಿದ್ದಾರೆ.  ಬಿಡದಿ ಭಾಗದ ರೈತ ಮುಖಂಡ ರಾಜಣ್ಣ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ನಿರ್ಧಾರಕ್ಕೆ ರೈತರ ಸ್ವಾಗತ ಕೋರಿದ್ದಾರೆ. ಹೀಗಾಗಿ ಬಿಡದಿ ಟೌನ್ ಷಿಪ್ ಗೆ ಭೂಮಿ ನೀಡಲು ರೈತರ ಒಂದು ಗುಂಪು ಸಿದ್ದವಿದ್ದರೇ, ಮತ್ತೊಂದು ಗುಂಪು ವಿರೋಧಿಸುತ್ತಿದೆ. 
ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಬಿಡದಿ ಟೌನ್ ಷಿಪ್ ನಿರ್ಮಾಣಕ್ಕೆ ಶೇ.82 ರಷ್ಟು ರೈತರು ಭೂಮಿ ನೀಡಲು ಒಪ್ಪಿದ್ದಾರೆ. ಶೇ.18 ರಷ್ಟು ರೈತರು ಮಾತ್ರ ಭೂಮಿ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದಿದ್ದರು.  ಇನ್ನೂ ಎಚ್‌.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರ 28 ಎಕರೆ ಭೂಮಿ ಕೂಡ ಬಿಡದಿ ಟೌನ್ ಷಿಪ್ ನಿರ್ಮಾಣಕ್ಕಾಗಿ ಸ್ವಾಧೀನ ಆಗುತ್ತಿದೆ. ಆ ಭೂಮಿಯನ್ನು ಪಡೆದು ಪರಿಹಾರ ನೀಡಿ ಎಂದು ಅನಿತಾ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.  ಬಿಡದಿ ಟೌನ್ ಷಿಪ್ ಯೋಜನೆ ರೂಪಿಸಿದ್ದೇ ಎಚ್‌.ಡಿ.ಕುಮಾರಸ್ವಾಮಿ. ಆ ಯೋಜನೆಯನ್ನು ನಾವು ಮುಂದುವರಿಸುತ್ತಿದ್ದೇವೆ ಎಂದು ಹಿಂದೆಯೇ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. 

bidadi township ai picture02



ಹೇಗಿರಲಿದೆ ಬಿಡದಿ ಟೌನ್ ಷಿಪ್? ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಷಿಪ್ ಹೆಸರಿನಲ್ಲಿ ನಿರ್ಮಾಣ!

ಬಿಡದಿ ಟೌನ್ ಷಿಪ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ 9 ಗ್ರಾಮಗಳಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಈಗಾಗಲೇ ಭೂ ಸ್ವಾಧೀನದ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಡಿಸೆಂಬರ್ ಗೆ ಭೂ ಸ್ವಾಧೀನದ ಅಂತಿಮ ಅಧಿಸೂಚನೆ ಹೊರಡಿಸಲಿದೆ.   6,731 ಎಕರೆ ಖಾಸಗಿ ಮಾಲೀಕತ್ವದ ಜಮೀನು   ಅನ್ನು ಟೌನ್ ಷಿಪ್ ಗೆ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. 750 ಎಕರೆ ಸರ್ಕಾರಿ ಜಮೀನು  ಅನ್ನು ಹೊಸ ಟೌನ್ ಷಿಪ್ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತೆ.  ಯೋಜನೆಗಾಗಿ ಒಟ್ಟಾರೆ 8,493 ಎಕರೆ ಭೂ ಪ್ರದೇಶ ಬಳಕೆಯಾಗಲಿದೆ. 
ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಷಿಪ್ ಹೆಸರಿನಲ್ಲಿ ಬಿಡದಿ ಟೌನ್ ಷಿಪ್ ಅನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 9 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಈ ಯೋಜನೆಗೆ ಅಂದಾಜು 20 ಸಾವಿರ ಕೋಟಿ ರೂಪಾಯಿ ಖರ್ಚಾಗಲಿದೆ. ಬಿಎಂಆರ್‌ಡಿಎ ನಲ್ಲಿ 2,950 ಕೋಟಿ ರೂಪಾಯಿ ಇದೆ. ಉಳಿದ 17,500 ಕೋಟಿ ರೂಪಾಯಿ ಹಣವನ್ನು ಸರ್ಕಾರದ ಶ್ಯೂರಿಟಿಯೊಂದಿಗೆ ಹಣಕಾಸು ಸಂಸ್ಥೆಗಳ ಮೂಲಕ ಸಾಲ ಪಡೆಯಲಾಗುತ್ತೆ. ಬೆಂಗಳೂರಿನ ಕೇಂದ್ರ ವ್ಯವಹಾರ ಜಿಲ್ಲೆಯಾಗಿ ರೂಪುಗೊಳ್ಳುವ ಈ ಟೌನ್ ಷಿಪ್  ವರ್ಕ್ -ಲೀವ್, ಪ್ಲೇ ಮಾದರಿಯಲ್ಲಿ ವಿನ್ಯಾಸಗೊಳ್ಳುತ್ತಿದೆ. ಈ ಟೌನ್ ಷಿಪ್ ನಲ್ಲೇ ಉದ್ಯೋಗ, ವಾಸಕ್ಕೆ ಮನೆ, ಆಟಕ್ಕೂ ಜಾಗವೂ ಇರಲಿದೆ.  ಮುಂದಿನ 3 ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.  ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕಂಪನಿಗಳ ಹಬ್ ಗಾಗಿ ಈ ಟೌನ್ ಷಿಪ್ ನಲ್ಲಿ 2 ಸಾವಿರ ಎಕರೆ ಜಾಗ ಮೀಸಲಿಡಲಾಗುತ್ತಿದೆ. 1,100 ಎಕರೆ ವ್ಯಾಪ್ತಿಯಲ್ಲಿ ಉದ್ಯಾನ, ಮೈದಾನ, ಹಸಿರು ಮತ್ತು ಸುಸ್ಥಿರ ನಗರ ನಿರ್ಮಾಣ ಮಾಡಲಾಗುತ್ತಿದೆ. ಟೌನ್ ಷಿಪ್ ವ್ಯಾಪ್ತಿಯಲ್ಲಿ ಬರುವ ಬೈರಮಂಗಲ ಕೆರೆಯನ್ನು 2 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಪುನಶ್ಚೇತನಗೊಳಿಸಿ ಅಭಿವೃದ್ದಿ ಮಾಡಲಾಗುತ್ತಿದೆ. 
ಯೋಜನೆ ಪೂರ್ಣಗೊಳ್ಳುವವರೆಗೆ ರೈತರಿಗೆ ಎಕರೆಗೆ ವಾರ್ಷಿಕ 30 ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತೆ.  ತರಿ ಭೂಮಿಗೆ 40 ಸಾವಿರ ರೂಪಾಯಿ, ಭಾಗಾಯ್ತು ಜಮೀನಿಗೆ 50 ಸಾವಿರ ರೂಪಾಯಿ ಹಾಗೂ ಭೂ ರಹಿತರಿಗೆ ವಾರ್ಷಿಕ 25 ಸಾವಿರ ರೂಪಾಯಿ ಜೀವನೋಪಾಯ ಸಹಾಯ ಧನ ವಿತರಣೆ ಮಾಡಲಾಗುತ್ತೆ. ಹಳ್ಳಿಗಳ ಸುತ್ತ ಮುತ್ತ 50 ಮೀಟರ್ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Bidadi township Contraversy
Advertisment