ಕೊನೆಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕೆಲಸ ಹಂಚಿಕೆ, ಪ್ರಜ್ವಲ್ ಯಾವ ಕೆಲಸ ಮಾಡುತ್ತಿದ್ದಾರೆ?

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕೊನೆಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲಸ ಹಂಚಿಕೆಯಾಗಿದೆ. ಪ್ರಜ್ವಲ್ ರೇವಣ್ಣ ಜೈಿಲಿನಲ್ಲಿ ಲೈಬ್ರರಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾರೆ. ದಿನಗೂಲಿಯಾಗಿ 522 ರೂಪಾಯಿ ಪಡೆದಿದ್ದಾರೆ. ಕೃಷಿ ಮತ್ತು ಅಡ್ಮಿನಿಸ್ಟ್ರೇಟೀವ್ ಕೆಲಸ ಮಾಡುವುದಾಗಿ ಪ್ರಜ್ವಲ್ ಹೇಳಿದ್ದರು.

author-image
Chandramohan
prajwal revanna crying

ಪ್ರಜ್ವಲ್ ರೇವಣ್ಣ

Advertisment
  • ಜೈಲಿನಲ್ಲಿ ಲೈಬ್ರರಿ ಕ್ಲರ್ಕ್ ಆಗಿ ಪ್ರಜ್ವಲ್ ರೇವಣ್ಣ ಕೆಲಸ ಶುರು
  • ದಿನಗೂಲಿಯಾಗಿ 522 ರೂಪಾಯಿ ಪ್ರಜ್ವಲ್ ರೇವಣ್ಣಗೆ ನೀಡಿಕೆ
  • ಈಗಾಗಲೇ ಒಂದು ದಿನ ಲೈಬ್ರರಿ ಕ್ಲರ್ಕ್ ಆಗಿ ಕೆಲಸ ಮಾಡಿದ ಪ್ರಜ್ವಲ್

ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಪ್ರಜ್ವಲ್ ರೇವಣ್ಣಗೆ ಕೊನೆಗೂ ಜೈಲಿನಲ್ಲಿ ಕೆಲಸ ಹಂಚಿಕೆಯಾಗಿದೆ.  ಪ್ರಜ್ವಲ್ ರೇವಣ್ಣ ಈಗ ಲೈಬ್ರರಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಜೈಲು ಲೈಬ್ರರಿಯಲ್ಲಿ ಖೈದಿಗಳಿಗೆ ಪುಸ್ತಕ ಕೊಡುವುದು ಹಾಗೂ ಯಾಱರಿಗೆ ಯಾವ್ಯಾವ ಪುಸ್ತಕ ಕೊಡಲಾಗಿದೆ ಎಂದು ನೋಂದಾಣಿ ಮಾಡಿಕೊಳ್ಳುವ ಕ್ಲರ್ಕ್ ಆಗಿ ಪ್ರಜ್ವಲ್ ರೇವಣ್ಣ ಕೆಲಸ ಮಾಡುತ್ತಿದ್ದಾರೆ.  ಈಗಾಗಲೇ ಒಂದು ದಿನ ಜೈಲಿನ ಲೈಬ್ರರಿಯಲ್ಲಿ ಕ್ಲರ್ಕ್ ಆಗಿ ಪ್ರಜ್ವಲ್ ರೇವಣ್ಣ ಕೆಲಸ ಮಾಡಿದ್ದಾರೆ.  ಲೈಬ್ರರಿ ಕ್ಲರ್ಕ್ ಆಗಿ ಕೆಲಸ ಮಾಡಿದ್ದಕ್ಕೆ ಪ್ರಜ್ವಲ್ ರೇವಣ್ಣಗೆ ದಿನಕ್ಕೆ 522 ರೂಪಾಯಿ ಕೂಲಿ ಕೂಡ ಸಿಕ್ಕಿದೆ. ಪ್ರತಿನಿತ್ಯ ನೊಂದಾಣಿ ಮಾಡಿ ಕೆಲಸ ಮಾಡಿದ್ರೆ ಮಾತ್ರ ಆ ದಿನದ ಸಂಬಳ ಬರುತ್ತೆ. ಟ್ರಯಲ್ ಗೆ ಕೋರ್ಟ್ ಗೆ ಹೋಗುವುದು ಸೇರಿ ಕೆಲಸಕ್ಕೆ ಹಾಜರಾಗದಿದ್ರೆ ಹಣ ನೀಡುವುದಿಲ್ಲ. ಪುಸ್ತಕಗಳನ್ನ ಕೊಟ್ಟು ಎಂಟ್ರಿ ಮಾಡಿಕೊಳ್ಳುವ ಕೆಲಸಕ್ಕೆ ಪ್ರಜ್ವಲ್ ರೇವಣ್ಣನನ್ನು  ನಿಯೋಜನೆ ಮಾಡಲಾಗಿದೆ.  ಸದ್ಯ ಟ್ರಯಲ್ ಕೋರ್ಟ್ ಗೆ ಹೋಗೋದು  ಹಾಗೂ ವಕೀಲರ ಜೊತೆ ಚರ್ಚೆ ಕೆಲಸಗಳಲ್ಲಿ ಪ್ರಜ್ವಲ್ ರೇವಣ್ಣ ಬ್ಯುಸಿಯಾಗಿದ್ದಾರೆ.  ಹೀಗಾಗಿ ಪೂರ್ತಿಯಾಗಿ ಜೈಲು ಲೈಬ್ರರಿ ಕ್ಲರ್ಕ್ ಕೆಲಸಕ್ಕೆ ಪ್ರಜ್ವಲ್ ರೇವಣ್ಣನನ್ನು ನಿಯೋಜಿಸಿಲ್ಲ. 
ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಖೈದಿಗಳು ಜೈಲಿನಲ್ಲಿ ಯಾವುದಾದರೊಂದು ಕೆಲಸ ಮಾಡಲೇಬೇಕು. ಖೈದಿಗಳ ಅರ್ಹತೆ, ಆಸಕ್ತಿಗೆ ಅನುಗುಣವಾಗಿ ಕೆಲಸ ಹಂಚಿಕೆ ಮಾಡಲಾಗುತ್ತೆ. ಪ್ರಜ್ವಲ್ ರೇವಣ್ಣ ತಾನು ಕೃಷಿ ಕೆಲಸ ಮಾಡುತ್ತೇನೆ, ಜೊತೆಗೆ ಜೈಲಿನ ಅಡ್ಮಿನಿಸ್ಟ್ರೇಟೀವ್ ಕೆಲಸ ಕೂಡ ಮಾಡುವುದಾಗಿ ಜೈಲು ಅಧಿಕಾರಿಗಳಿಗೆ ತಿಳಿಸಿದ್ದರು. ಆದರೇ, ಅಂತಿಮವಾಗಿ ಜೈಲು ಅಧಿಕಾರಿಗಳು  ಲೈಬ್ರರಿ ಕ್ಲರ್ಕ್ ಕೆಲಸವನ್ನು ಪ್ರಜ್ವಲ್ ರೇವಣ್ಣಗೆ ನೀಡಿದ್ದಾರೆ. 

ಪ್ರಜ್ವಲ್ ಕನಸು ನುಚ್ಚುನೂರು; ಹಾಸನದಲ್ಲಿ ಅತ್ಯಾಚಾರ ಆರೋಪಿ ಸೋಲಿಗೆ ಸಂಭ್ರಮ; ಆಗಿದ್ದೇನು?



ಪ್ರಜ್ವಲ್ ರೇವಣ್ಣ ವಿರುದ್ಧದ ಒಂದು ರೇಪ್ ಕೇಸ್ ನಲ್ಲಿ ಮಾತ್ರ ಜೀವಾವಧಿ ಶಿಕ್ಷೆ ವಿಧಿಸಿ ಕೆಳ ನ್ಯಾಯಾಲಯ ತೀರ್ಪು ನೀಡಿದೆ. ಇನ್ನೂ ಮೂರು ಕೇಸ್ ಗಳಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧದ ವಿಚಾರಣೆಯ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ನಡೆಯುತ್ತಿದೆ. 
ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಕೊಟ್ಟಿರುವ ತೀರ್ಪು ಪ್ರಶ್ನಿಸಿ, ಪ್ರಜ್ವಲ್ ರೇವಣ್ಣ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತಿದ್ದಾರೆ. 
ಚಿಕ್ಕಮಗಳೂರಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಧರನಾಗಿರುವ ಪ್ರಜ್ವಲ್ ರೇವಣ್ಣ ಐದು ವರ್ಷ ಹಾಸನ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದರು. ಈಗ ಜೈಲು ವಾಸಿ. ರೇಪ್ ಕೇಸ್ ಗಳಲ್ಲಿ ಭಾಗಿಯಾಗದೇ ಇದ್ದರೇ, ಪ್ರಜ್ವಲ್ ಮತ್ತೊಮ್ಮೆ ಲೋಕಸಭೆ ಪ್ರವೇಶಿಸುವ ಅವಕಾಶವೂ ಇತ್ತು. ಆದರೇ, ರೇಪ್ ಕೇಸ್ ನಿಂದ ಜೈಲು ಪಾಲಾಗಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಜೈಲಿನ ಹೊರಗೆ ತಾನೇ ಹತ್ತಾರು ಮಂದಿಗೆ ಕೆಲಸ ನೀಡಿದ್ದರು. ಆದರೇ, ಈಗ ಜೈಲಿನಲ್ಲಿ ದಿನಗೂಲಿ ನೌಕರನಾಗಿ , ಜೈಲು ವಾಸ ಮುಂದುವರಿಸಬೇಕಾದ ಅನಿವಾರ್ಯ ಪರಿಸ್ಥಿತಿ ತಂದುಕೊಂಡಿದ್ದಾರೆ. 

prajwal revanna jail (2)



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Prajwal Revanna
Advertisment