/newsfirstlive-kannada/media/media_files/2025/09/24/first-women-police-officers-encounters-2025-09-24-13-18-01.jpg)
ಸಂಪೂರ್ಣ ಮಹಿಳಾ ಪೊಲೀಸ್ ಅಧಿಕಾರಿಗಳಿಂದ ಮೊದಲ ಎನ್ ಕೌಂಟರ್!
ಸಂಪೂರ್ಣ ಮಹಿಳಾ ಪೊಲೀಸ್ ಅಧಿಕಾರಿಗಳೇ ಮೊದಲ ಎನ್ ಕೌಂಟರ್ ನಡೆಸಿ ಓರ್ವ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಸಂಪೂರ್ಣ ಮಹಿಳಾ ಪೊಲೀಸ್ ಅಧಿಕಾರಿಗಳೇ ಆರೋಪಿಯೊಬ್ಬನ ಜೊತೆ ಗುಂಡಿನ ಚಕಮಕಿ ನಡೆಸಿದ್ದಾರೆ. ಬಳಿಕ ವಾಂಟೆಂಡ್ ಕ್ರಿಮಿನಲ್ ನನ್ನು ಆರೆಸ್ಟ್ ಮಾಡಿದ್ದಾರೆ.
ಕಳೆದ ರಾತ್ರಿ ಗಾಜಿಯಾಬಾದ್ ಜಿಲ್ಲೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳಿಂದ ಎನ್ ಕೌಂಟರ್ ನಡೆದಿದೆ. ಚಿನ್ನದ ಸರ ಕಳ್ಳತನ, ರಾಬರಿ, ಕಳ್ಳತನ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಜೀತೇಂದ್ರ ಎಂಬಾತ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದ. ಪ್ರತಿಯಾಗಿ ಪೊಲೀಸರು ಆತ್ಮರಕ್ಷಣೆ ಹಾಗೂ ಆರೋಪಿಯನ್ನು ಹಿಡಿಯಲು ಪ್ರತಿ ದಾಳಿ ನಡೆಸಿದ್ದಾರೆ. ಬೈಕ್ ನಲ್ಲಿ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಬಳಿಕ ಕಂಟ್ರೋಲ್ ಕಳೆದುಕೊಂಡು ಕೆಳಗೆ ಬಿದ್ದಿದ್ದಾನೆ. ಸರೆಂಡರ್ ಆಗಲು ಪೊಲೀಸರು ಹೇಳಿದ್ದಾರೆ. ಆದರೇ, ಆರೋಪಿ ಶರಣಾಗದೇ, ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದ. ಬಳಿಕ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹಿರಿಯ ಮಹಿಳಾ ಪೊಲೀಸ್ ಅಧಿಕಾರಿ ಉಪಾಸನಾ ಪಾಂಡೆ ಹೇಳಿದ್ದಾರೆ.
ಆರೋಪಿಯ ಬಳಿ ಇದ್ದ ಪಿಸ್ತೂಲ್ ಹಾಗೂ ಬೈಕ್ ಅನ್ನು ಪೊಲೀಸರು ಜಫ್ತಿ ಮಾಡಿದ್ದಾರೆ.
ಬೈಕ್ ಅನ್ನು ಆರೋಪಿ ಕಳ್ಳತನ ಮಾಡಿದ್ದ. ಈ ಬೈಕ್ ನಲ್ಲೇ ಆರೋಪಿ ಚಿನ್ನದ ಸರ ಕಳ್ಳತನ ಮಾಡುತ್ತಿದ್ದ. ಆರೋಪಿಯಿಂದ ಪೋನ್, ಟ್ಯಾಬ್ಲೆಟ್ ಸೇರಿದಂತೆ ಕದ್ದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.